Advertisement

ಕಾಡಾನೆ ದಾಳಿ: ಅಧಿಕಾರಿಗಳ ವಸತಿಗೃಹಕ್ಕೆ ರೈತರ ಮುತ್ತಿಗೆ

06:31 PM Feb 21, 2023 | Team Udayavani |

ಕನಕಪುರ: ನಿರಂತರ ಕಾಡಾನೆ ದಾಳಿಗೆ ಬೇಸತ್ತ ರೈತರು, ಅರಣ್ಯ ಇಲಾಖೆ ಅಧಿಕಾರಿಗಳ ವಸತಿಗೃಹಕ್ಕೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ಕೋಡಿಹಳ್ಳಿಯಲ್ಲಿ ನಡದಿದೆ.

Advertisement

ತಾಲೂಕಿನ ಕೋಡಿಹಳ್ಳಿಯ ಪ್ಲಾಂಟೇಶನ್‌ ಅರಣ್ಯಇಲಾಖೆ ಅಧಿಕಾರಿಗಳ ವಸತಿಗೃಹಕ್ಕೆ ನೂರಾರು ರೈತರು ಬೀಗ ಜಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 70 ಕಾಡಾನೆಗಳ ಹಿಂಡು ಕಳೆದ ಒಂದು ತಿಂಗಳಿನಿಂದ ಕಾಣಿಸಿಕೊಂಡಿದ್ದು, ರೈತರ
ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡಿ ಬೆಳೆಯನ್ನೆಲ್ಲ ನಾಶ ಮಾಡುತ್ತಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಿರಲಿಲ್ಲ. ನಿರಂತರ ಕಾಡಾನೆ ದಾಳಿಯಿಂದ ಬೇಸತ್ತ ರೈತರು, ಸೋಮವಾರ ತಾಳ್ಮೆ ಕಳೆದುಕೊಂಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಅರಣ್ಯ ಇಲಾಖೆ ಕಚೇರಿ ಎದುರು ಜಮಾವಣೆಗೊಂಡಿದ್ದ ಕೂತುಗಳೆ, ಹೊನ್ನಿಗನಹಳ್ಳಿ, ಪ್ಲಾಂಟೇಷನ್‌, ಬೆಟ್ಟೆಗೌಡನದೊಡ್ಡಿ, ಗರಳಾಪುರ ಗ್ರಾಮದ ರೈತರು ನಿರಂತರವಾಗಿ ಕಾಡಾನೆ ದಾಳಿ ಬಗ್ಗೆ ಮಾಹಿತಿ ನೀಡಿದರೂ, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಹಾವಳಿಗೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಅರಣ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು.

ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಿಲ್ಲ: ರೈತರ ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದಂತೆ ಎಚ್ಚೆತ್ತ ವಲಯ ಅರಣ್ಯ ಅಧಿಕಾರಿ ದಾಳೇಶ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಮನವೂಲಿಸಲು ಪ್ರಯತ್ನಿಸಿದರು. ಈ ವೇಳೆ ರೈತರು ಮಾತನಾಡಿ, ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿವೆ.

ಆದರೂ, ನಿಮ್ಮ ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ. ಕಾಡಾನೆ ದಾಳಿಯಿಂದ ಬೆಳೆ ನಾಶವಾದರೆ ಸೂಕ್ತ ಪರಿಹಾರ ನೀಡುತ್ತಿಲ್ಲ, ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿಲ್ಲ. ಕಾಡಾನೆ ದಾಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಒತ್ತಾಯಿಸಿದರು.

Advertisement

ಸೂಕ್ತ ಪರಿಹಾರ ನೀಡುತ್ತೇವೆ: ವಲಯ ಅರಣ್ಯ ಅಧಿಕಾರಿ ದಾಳೇಶ್‌ ಮಾತನಾಡಿ, ನಿಮ್ಮ ಸಮಸ್ಯೆ, ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ಆದರೆ, ಕಾಡುಪ್ರಾಣಿಗಳನ್ನು ನಾವು ಹೀಗೆ ಇರಬೇಕೆಂದು ಹೇಳಲು ಸಾಧ್ಯವಿಲ್ಲ. ಆದಷ್ಟು ಅವುಗಳನ್ನು ನಿಯಂತ್ರಿಸಿ ಕಾಡಿಗೆ ಓಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಾಡಾನೆಗಳನ್ನು ಶಾಶ್ವತವಾಗಿ ತಡೆಗಟ್ಟಲು ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು, ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಾಡು ಪ್ರಾಣಿಗಳನ್ನು ಕಾಡಿಗೆ ಓಡಿಸುತ್ತೇವೆ. ಬೆಳೆ ನಾಶಕ್ಕೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಕೊಡಿಸಿ ಕೊಡಲಾಗುವುದು. ರೈತರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದೆಂದು ರೈತರನ್ನು ಮನವೂಲಿಸುವಲ್ಲಿ ಯಶಸ್ವಿಯಾದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next