ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕರಂಗಲ್ಲು ಸುತ್ತಮುತ್ತ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ.
ಮಂಗಳವಾರ ತಡರಾತ್ರಿ ಕೃಷಿಕ ಜಯಪ್ರಕಾಶ ಕಜೊjàಡಿ ಅವರ ತೋಟಕ್ಕೆ ದಾಳಿಯಿಟ್ಟ ಆನೆ ಫಸ ಲಿರುವ ಎರಡು ತೆಂಗಿನ ಸಸಿ, ಹಲವು ಬಾಳೆ ಗಿಡ ಹಾಗೂ ಅಡಿಕೆ ಗಿಡಗಳನ್ನು ನಾಶಪಡಿ ಸಿದೆ. ಸಮೀಪದ ನಾರಾಯಣ ಅವರ ತೋಟಕ್ಕೂ ನುಗ್ಗಿ ತೆಂಗು, ಅಡಿಕೆ ಹಾಗೂ ನಲುವತ್ತಕ್ಕೂ ಅಧಿಕ ಬಾಳೆಗಿಡ ಗಳನ್ನು ನಾಶ ಪಡಿ ಸಿದೆ. ಕೃಷಿ ಯಂತ್ರೋಪ ಕರಣಗಳಿಗೂ ಹಾನಿಯಾಗಿದೆ.
ಬೆಳಗ್ಗೆ ಕೊಲ್ಲಮೊಗ್ರು- ದೇವಚಳ್ಳ ರಸ್ತೆಯ ಮುಳ್ಳುಬಾಗಿಲು ಬಳಿ ಒಂಟಿ ಸಲಗ ಅಡ್ಡ ದಾಟಿದ್ದು, ಸಂಜೆ ಹೊತ್ತಿಗೆ ತೋಟದಲ್ಲಿ ಪ್ರತ್ಯಕ್ಷ ವಾಗಿದೆ. ಬೆಳಗ್ಗಿನ ತನಕ ತೋಟದಲ್ಲೇ ಇದ್ದ ಆನೆ ಹಾವಳಿಯಿಂದ ಹಾನಿಗೀಡಾದ ಫಸಲಿನ ನಷ್ಟ ಅಂದಾಜಿಸಲು ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಿದ್ಯುತ್ ಸರಬರಾಜು ಕಡಿತ
ಆನೆ ಹಾವಳಿ ತೀವ್ರವಿರುವ ಈ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಕೃಷಿಕರು ರಾತ್ರಿ ಹೊತ್ತು ಹೊರಗಡೆ ದೀಪ ಹಾಗೂ ವಿದ್ಯುತ್ ಬಲುºಗಳನ್ನು ಉರಿಸಿಟ್ಟು ಆನೆ ಗಳನ್ನು ಬರದಂತೆ ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ವಿದ್ಯುತ್ ವ್ಯತ್ಯಯ ವಾಗುತ್ತಿರುವುದರಿಂದ ಅದಕ್ಕೂ ಸಮಸ್ಯೆಯಾಗುತ್ತಿದೆ.