Advertisement
ರಾಗಧನ: ಸುಮಾರು ಮೂರು ದಶಕಗಳ ಇತಿಹಾಸವಿರುವ ರಾಗಧನ ನಮ್ಮೂರಲ್ಲಿಯೂ ಕರ್ನಾಟಕ ಸಂಗೀತಕ್ಕೆ ಒಂದು ಮಾನ್ಯತೆ ದೊರಕಬೇಕು, ಒಳ್ಳೆಯ ಕಲಾವಿದರು ಹುಟ್ಟಿಕೊಳ್ಳಬೇಕು,ಆಸ್ವಾದಿಸುವ ಶ್ರೋತೃವರ್ಗ ಸೃಷ್ಟಿಯಾಗಬೇಕು ಎಂಬ ಸದುದ್ದೇಶಗಳನ್ನು ಗಮನದಲ್ಲಿಕೊಂಡು ಹುಟ್ಟಿಕೊಂಡ ಸಂಸ್ಥೆ. ಜನರು ಕರ್ನಾಟಕ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಹಿಂಜರಿಕೆ ಹಾಕುತ್ತಿದ್ದ ಕಾಲದಲ್ಲಿ ರಾಗಧನ ಸ್ಥಾಪನೆಯಾದಾಗ ಸಂಗೀತದ ಒಲವನ್ನು ಜನರಲ್ಲಿ ಹಬ್ಬಿಸಲು ತುಂಬಾ ಕಷ್ಟ ಪಡಬೇಕಾಯಿತು. ಇದರ ಫಲಶ್ರುತಿಯೇ ಗೃಹಸಂಗೀತ.
ಸರಿಗಮ ಭಾರತಿ: ಪರ್ಕಳದ ಸರಿಗಮ ಭಾರತಿ, ಡಾ| ಎಚ್.ಎನ್. ಉದಯಶಂಕರ್ ಮತ್ತು ಉಮಾಶಂಕರಿ ದಂಪತಿಯ ಕನಸಿನ ಕೂಸು. 1999ರಲ್ಲಿ ಸ್ಥಾಪನೆಗೊಂಡ ಕಲಾ ಸಂಸ್ಥೆಯಲ್ಲಿ ಸಂಗೀತ ತರಗತಿಗಳು, ವೇದ ಪಾಠ ಪಾರಾಯಣದ ಕಲಿಸುವಿಕೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಯೋಗ ಶಿಬಿರಗಳು, ಯಕ್ಷಗಾನ ತಾಳಮದ್ದಳೆ , ಸಂಸ್ಮರಣಾ ಕಾರ್ಯಕ್ರಮಗಳು, ಆರ್‌ಎಸ್‌ಎಸ್ ಬೈಠಕ್‌ಗಳು, ನೃತ್ಯ ಪ್ರದರ್ಶನಗಳು, ಸಂಗೀತ ಶಿಬಿರಗಳು ಮುಂತಾದ ಕಲೆಗೆ ಸಂಬಂಧಿಸಿದ ವಿಭಿನ್ನ ಚಟುವಟಿಕೆಗಳನ್ನು ನಡೆಸಿಕೊಡು ಬಂದಿದ್ದಾರೆ. ಇವಲ್ಲದೆ ಪ್ರತೀ ವರ್ಷ ಅತಿಥೇಯರ ಜನ್ಮ ದಿನಾಚರಣೆಗೆ ಸಂಗೀತ ಕಛೇರಿಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತೀ ವಿಜಯದಶಮಿಯಂದು ವಿಜಯದಶಮಿ ಸಂಗೀತೋತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿಂದ ಹೊರ ಬಂದ ಅನೇಕ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. ಕನಕ ಅಧ್ಯಯನ ಪೀಠ ಮತ್ತು ಎಮ್‌ಜಿಎಮ್ ಕಾಲೇಜಿನ ಸಹಯೋಗದೊಂದಿಗೆ, ಪ್ರತೀ ಎಪ್ರಿಲ್ ತಿಂಗಳಲ್ಲಿ ದಾಸ ಸಾಹಿತ್ಯ ಗಾಯನದ ಶಿಬಿರದೊಂದಿಗೆ ಸಂಗೀತೋತ್ಸವ, ಡಿಸೆಂಬರ್ ತಿಂಗಳಲ್ಲಿ ನಡೆಯುವ ವಾದಿರಾಜ ಕನಕದಾಸ ಸಂಗೀತೋತ್ಸವ ಮುಂತಾದವುಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸರಿಗಮ ಭಾರತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸಿಕೊಂಡು ಹೋಗುವ ಆಶಯ ಡಾ|ಎಚ್. ಎನ್. ಉದಯಶಂಕರ್ ಮತ್ತು ಉಮಾಶಂಕರಿ ದಂಪತಿಯದ್ದು.
Related Articles
Advertisement