Advertisement

ಏಪ್ರಿಲ್‌ 1 ರಿಂದ ಎಲೆಕ್ಟ್ರಾನಿಕ್‌ ರಿಟರ್ನ್ಸ್ ಸಿಸ್ಟಮ್‌ ಜಾರಿ: ಸುಶೀಲ್‌ ಕುಮಾರ್‌ ಮೋದಿ

09:58 AM Dec 25, 2019 | Hari Prasad |

ಬೆಂಗಳೂರು: ಕಳೆದ ಒಂದು ವಾರದಿಂದ ಜಿಎಸ್‌ಟಿ ಸಭೆ (ಸರಕು ಮತ್ತು ಸೇವಾ ತೆರಿಗೆ) ನಡೆಯುತ್ತಿದ್ದು ಈ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ.  ದೇಶದೆಲ್ಲೆಡೆ ಜಿಎಸ್‌ಟಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಎಸ್‌ಟಿ ಉಸ್ತುವಾರಿ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಸಭೆ ನಡೆಸಿ ಜಿಎಸ್‌ಟಿ ಕುರಿತಾದ ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ.

Advertisement

ಸಭೆಯಲ್ಲಿ  ಪ್ರಮುಖವಾಗಿ ಜಿಎಸ್‌ಟಿ ಸ್ಲಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದ್ದು, ಜಿಎಸ್‌ಟಿ ತೆರಿಗೆಗಳಲ್ಲಿ ಯಾವುದೇ ಹೆಚ್ಚಳ ಹಾಗೂ ಬದಲಾವಣೆ ಮಾಡುವುದಿಲ್ಲ  ಎಂದು ತಿಳಿಸಿದ್ದಾರೆ. ಆರ್ಥಿಕ ಸುಸ್ಥಿರತೆ ಹಿನ್ನೆಲೆ ಯಾವುದೇ ತೆರಿಗೆ ಏರಿಕೆ ಮಾಡುವುದಿಲ್ಲ, ಎಲ್ಲಾ ರಾಜ್ಯಗಳ ಜಿಎಸ್‌ಟಿ ಪಾಲನ್ನು ಈಗಾಗಲೇ ಸೆಪ್ಟಂಬರ್‌ ತಿಂಗಳವರೆಗೂ ಕ್ಲಿಯರ್‌ ಮಾಡಿದ್ದಾರೆ ಎಂದು ತಿಳಿಸಿದ್ದು, ಏಪ್ರಿಲ್‌ 1 ರಿಂದ ಎಲೆಕ್ಟ್ರಾನಿಕ್‌ ರಿಟರ್ನ್ಸ್ ಸಿಸ್ಟಮ್‌ ಜಾರಿಗೆ ತರುವುದಾಗಿ ಸುಶೀಲ್‌ ಕುಮಾರ್‌ ತಿಳಿಸಿದ್ದಾರೆ.

ಜನವರಿಯಿಂದ ಹಂತಹಂತವಾಗಿ ಪ್ರಾಯೋಗಿಕವಾಗಿ ಜಿಎಸ್‌ಟಿ ಜಾರಿಗೆ ತರಲಾಗುವುದು. ಈ ಹಿನ್ನಲೆ ವ್ಯಾಪಾರಿಗಳಿಗೆ ಈ ಬಗ್ಗೆ ಸಾಧಕ-ಬಾಧಕಗಳ ತಿಳಿಸಲಾಗುತ್ತದೆ. ಈ ಹಿಂದಿನ ಜಿಎಸ್‌ಟಿ ರಿಟರ್ನ್ಸ್ ಫೈಲ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳಿದ್ದು, ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಹೊಸ ವಿಧಾನದಿಂದ ರಿಟರ್ನ್ಸ್ ಫೈಲ್‌ ಮಾಡುವುದು ಇನ್ನಷ್ಟು ಸುಲಭವಾಗಿದೆ.

ಏಪ್ರಿಲ್‌ 1 ರಿಂದ ಕಡ್ಡಾಯವಾಗಿ ನೂತನ ಪದ್ದತಿ ಅಳವಡಿಸಿಕೊಳ್ಳಲು ಮೋದಿ ಅವರು ಮನವಿ ಮಾಡಿಕೊಂಡಿದ್ದಾರೆ. 24.86 ಲಕ್ಷ ನಕಲಿ ಖಾತೆಗಳು ಪತ್ತೆಯಾಗಿದ್ದು, ಅವುಗಳನ್ನು ರದ್ದು ಮಾಡಲಾಗಿದೆ. 66.79 ಸಾವಿರ ಹೊಸದಾಗಿ ನೋಂದಣಿಯಾದ ತೆರಿಗೆದಾರರಿದ್ದು, ಕಳೆದ 8 ತಿಂಗಳಲ್ಲಿ ಪ್ರತಿ ತಿಂಗಳಿಗೆ 95 ಲಕ್ಷ ಕೋಟಿ ರೂ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next