Advertisement

ಎಲೆಕ್ಟ್ರಾನಿಕ್‌ ಪಾವತಿ ಫ್ರೀ

06:44 AM Jul 06, 2019 | Lakshmi GovindaRaj |

ದೊಡ್ಡ ದೊಡ್ಡ ಕಂಪನಿಗಳು ತಮ್ಮ ಗ್ರಾಹಕರಿಗೆ ಎಲೆಕ್ಟ್ರಾನಿಕ್‌ ವಿಧಾನದ ಮೂಲಕ ಪಾವತಿ ಮಾಡಲು ಅನುವು ಮಾಡಿಕೊಡಲು ವಿಶೇಷ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ವಾರ್ಷಿಕ 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಗಳು ಎಲೆಕ್ಟ್ರಾನಿಕ್‌ ಪಾವತಿಗೆ ತಮ್ಮ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕಿದೆ.

Advertisement

ಈ ಕಂಪನಿಗಳು ಭೀಮ್‌ ಯುಪಿಐ, ಯುಪಿಐ ಕ್ಯೂಆರ್‌ ಕೋಡ್‌, ಆಧಾರ್‌ ಪೇ, ಡೆಬಿಟ್‌ ಕಾರ್ಡ್‌, ಎನ್‌ಇಎಫ್ಟಿ ಮತ್ತು ಆರ್‌ಟಿಜಿಎಸ್‌ ಬಳಸಿ ತಮ್ಮ ಗ್ರಾಹಕರಿಗೆ ಈ ಸೌಲಭ್ಯ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗಾಗಲೀ ಅಥವಾ ವ್ಯಾಪಾರಿಗಳಿಗಾಗಿ ಶುಲ್ಕ ವಿಧಿಸುವುದಿಲ್ಲ. ಆರ್‌ಬಿಐ ಮತ್ತು ಬ್ಯಾಂಕ್‌ಗಳೇ ಇದರ ವೆಚ್ಚವನ್ನು ನಿರ್ವಹಿಸುತ್ತವೆ. ಜನರು ಈ ಮೂಲಕ ನಗದು ವಹಿವಾಟು ಕಡಿಮೆ ಮಾಡುವುದರಿಂದ ಅದರಲ್ಲಿ ಉಳಿತಾಯವಾದ ಮೊತ್ತದಲ್ಲಿ ಬ್ಯಾಂಕ್‌ಗಳು ಈ ಸೇವೆಯನ್ನು ಒದಗಿಸುತ್ತವೆ.

ಹಿರಿಯ ನಾಗರಿಕರಿಗೆ ಮತ್ತಷ್ಟು ಅನುಕೂಲ: 80ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿ ಮಿತಿಯನ್ನು 1 ಲಕ್ಷ ರೂ. ಇಂದ 1.5 ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ. ಅಲ್ಲದೆ, ವೈದ್ಯಕೀಯ ವಿಮೆ ಡಿಡಕ್ಷನ್‌ ಮೊತ್ತ 20 ಸಾವಿರದಿಂದ 50 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next