Advertisement

ವಿದ್ಯುತ್‌ ಸಮಸ್ಯೆಗೆ ಪರಿಹಾರ : ಸಚಿವ 

04:51 PM Mar 13, 2017 | Team Udayavani |

ಕಾಸರಗೋಡು: ಕೇರಳ ರಾಜ್ಯ ವಿದ್ಯುತ್‌ ಮಂಡಳಿಯ ಸೀತಾಂಗೋಳಿ ವಿದ್ಯುತ್‌ ಸೆಕ್ಷನ್‌ ಕಚೇರಿ, ಕಾಸರಗೋಡು ಟೌನ್‌ 33 ಕೆ.ವಿ. ಸಬ್‌ಸ್ಟೇಶನ್‌ ಮತ್ತು ವಿದ್ಯುತ್‌ ಭವನ ನಿರ್ಮಾಣವನ್ನು ವಿದ್ಯುತ್‌ ಸಚಿವ ಎಂ.ಎಂ. ಮಣಿ ರವಿವಾರ ಉದ್ಘಾಟಿಸಿದರು.

Advertisement

ಸೀತಾಂಗೋಳಿಯಲ್ಲಿ ನೂತನ ವಿದ್ಯುತ್‌ ಸೆಕ್ಷನ್‌ ಕಚೇರಿ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಶಾಸಕ ಪಿ.ಬಿ. ಅಬ್ದುಲ್‌ ರಜಾಕ್‌ ಅಧ್ಯಕ್ಷತೆ ವಹಿಸಿದರು. ಸಂಸದ ಪಿ.ಕರುಣಾಕರನ್‌, ಕೆಎಸ್‌ಇಬಿ ನಿರ್ದೇಶಕ ಡಾ| ವಿ. ಶಿವದಾಸನ್‌, ಶಾಸಕ ಎನ್‌.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಟೌನ್‌ 33 ಕೆ.ವಿ. ಸಬ್‌ಸ್ಟೇಶನ್‌, ಕಾಸರಗೋಡು ವಿದ್ಯುತ್‌ ಭವನ ನಿರ್ಮಾಣವನ್ನು ಸಚಿವರು ಉದ್ಘಾಟಿಸಿದರು. 

ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲೆಯ 30ನೇ ಸೆಕ್ಷನ್‌ ಕಚೇರಿಯಾಗಿ ಉದ್ಘಾಟಿಸಿದ ಸೀತಾಂಗೋಳಿ ಸೆಕ್ಷನ್‌ ಕಚೇರಿ. ಕಾಸರಗೋಡು ಜಿಲ್ಲೆಯ ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಎಂ.ಎಂ.ಮಣಿ ಹೇಳಿದರು. ರಾಜ್ಯದ 14 ಜಿಲ್ಲೆಗಳಲ್ಲಿ ವ್ಯತ್ಯಸ್ಥವಾದ ವಿದ್ಯುತ್‌ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಸರಕಾರ ಕ್ರಮ ಆರಂಭಿಸಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ. ಈ ಬಾರಿ ಮಳೆ ಕೈಕೊಟ್ಟಿದ್ದರೂ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಯಾ ಪವರ್‌ ಕಟ್‌ ಹೇರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next