Advertisement

ವಿದ್ಯುತ್‌ ಘಟಕ ಸ್ಥಾಪನೆ ಒಡಂಬಡಿಕೆ

12:38 PM Jun 07, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ವಿದ್ಯುತ್‌ ತಯಾರಿಕಾ ಘಟಕಗಳನ್ನಾಗಿ ಪರಿವರ್ತಿಸುತ್ತಿರುವ ಬಿಬಿಎಂಪಿ, ಇದೀಗ ಚಿಕ್ಕನಾಗಮಂಗಲದಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸಲು ಯೋಜನೆಗೆ ಫ್ರಾನ್ಸ್‌ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Advertisement

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ಹಾಗೂ ಫ್ರಾನ್ಸ್‌ನ ಫ್ರಾನ್ಸ್‌ ದೇಶದ ರಾಯಭಾರಿ ಅಲೆಗ್ಸಾಂಡರ್‌ ಜಿಗ್ಗರ್‌ ಚಿಕ್ಕನಾಗಮಂಗಲದಲ್ಲಿ ವಿದ್ಯುತ್‌ ಘಟಕ ಸ್ಥಾಪನೆ ಸಂಬಂಧಿತ ಒಡಂಬಡಿಕೆಗೆ ಸಹಿ ಹಾಕಿದರು. 

3ವೇಸ್ಟ್‌ (ತ್ರೀವೇಸ್ಟ್‌) ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಗುತ್ತಿಗೆದಾರರು ನಿತ್ಯ 500 ಟನ್‌ ತ್ಯಾಜ್ಯವನ್ನು ವಿದ್ಯುತ್‌ ಆಗಿ ಪರಿವರ್ತಿಸಬೇಕಾಗಿದ್ದು, ಘಟಕ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ರೀತಿಯ ಯಂತ್ರೋಪಕರಣಗಳನ್ನು ಗುತ್ತಿಗೆದಾರರೇ ಖರೀದಿಸಬೇಕು. ಪಾಲಿಕೆಯಿಂದ ನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ 300 ಟನ್‌ ಹಾಗೂ ಸಗಟು ತ್ಯಾಜ್ಯ ಉತ್ಪಾದಕರಿಂದ 200 ಟನ್‌ ತ್ಯಾಜ್ಯವನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ.

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕ ನಿರ್ಮಾಣಕ್ಕಾಗಿ ಚಿಕ್ಕನಾಗಮಂಗಲದ ಬಳಿ 15 ಎಕರೆ ವಿಸ್ತೀರ್ಣದ ಜಮೀನನ್ನು 3ವೇಸ್ಟ್‌ ಸಂಸ್ಥೆಗೆ 30 ವರ್ಷಗಳಿಗೆ ಗುತ್ತಿಗೆ ನೀಡುತ್ತಿದ್ದು, ಮುಂದಿನ ಏಳು ತಿಂಗಳಲ್ಲಿ ಇಂಧನ ಉತ್ಪಾದನಾ ಘಟಕ ಸ್ಥಾಪಿಸಿ ಕಾರ್ಯಾರಂಭಿಸಬೇಕು. ಜತೆಗೆ ಜಮೀನನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡುವಂತಿಲ್ಲ ಎಂಬ ಷರತ್ತನ್ನು ಬಿಬಿಎಂಪಿ ವಿಧಿಸಿದೆ. ಜತೆಗೆ ಘಟಕ ಸ್ಥಾಪನೆಗೆ ಪಾಲಿಕೆ ಅಥವಾ ಸರ್ಕಾರದಿಂದ ಯಾವುದೇ ಅನುದಾನ ನೀಡುವುದಿಲ್ಲವೆಂಬ ಅಂಶವನ್ನು ಒಪ್ಪಂದದಲ್ಲಿ ಉಲ್ಲೇಖೀಸಲಾಗಿದೆ.

ಘಟಕ ಸ್ಥಾಪನೆಗೆ ಬೇಕಾಗುವಂತಹ ಸಾಮಗ್ರಿಗಳನ್ನು 3ವೇಸ್ಟ್‌ ಸಂಸ್ಥೆ ಸರಬರಾಜು ಮಾಡಿಕೊಳ್ಳಬೇಕಿದ್ದು,
ಸರ್ಕಾರಕ್ಕೆ ಅಬಕಾರಿ ಸುಂಕ ಪಾವತಿಸಬೇಕಿದೆ. ಹೀಗಾಗಿ ಸಂಸ್ಥೆಗೆ ಮುಂದಿನ 10 ವರ್ಷಗಳವರೆಗೆ ವಿವಿಧ ತೆರಿಗೆ
ವಿನಾಯಿತಿ ನೀಡಲು ಸರ್ಕಾರ ಸಮ್ಮತಿಸಿರುವುದಾಗಿ ಒಪ್ಪಂದದಲ್ಲಿ ತಿಳಿಸಿದೆ. ಒಡಂಬಡಿಕೆ ವೇಳೆ ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಜರಿದ್ದರು. 

Advertisement

ವಿದ್ಯುತ್‌ ಮಾರಾಟ
ಚಿಕ್ಕನಾಗಮಂಗಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ 500 ಟನ್‌ ಸಾಮರ್ಥಯದ ತ್ಯಾಜ್ಯದಿಂದ ವಿದ್ಯುತ್‌
ಉತ್ಪಾದನಾ ಘಟಕದಲ್ಲಿ ನಿತ್ಯ 7 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಕೆಇಆರ್‌ಸಿ ನಿಗದಿಪಡಿ ಸಿದಂತೆ ಪ್ರತಿ ಕಿಲೋ ವ್ಯಾಟ್‌ಗೆ 7.08 ರೂ.ಗಳಂತೆ ಗುತ್ತಿಗೆದಾರರು ಮಾರಾಟ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next