Advertisement

Smart Shoes; ವಿದ್ಯುತ್‌ ಉತ್ಪಾದಿಸಬಲ್ಲ, ಜಿಪಿಎಸ್‌ ಶೂಗಳು ರೆಡಿ!

11:29 PM Aug 06, 2024 | Team Udayavani |

ಇಂದೋರ್‌: ನಡೆದರೆ ವಿದ್ಯುತ್‌ ಉತ್ಪಾದಿಸುವ, ನಿಖರವಾಗಿ ಜಿಪಿಎಸ್‌ ಲೊಕೇಶನ್‌ ತೋರಿಸುವ ಶೂಗಳನ್ನು ಐಐಟಿ ಇಂದೋರ್‌ ಅಭಿವೃದ್ಧಿಪಡಿಸಿದೆ. ಸೈನಿಕರ ಬಳಕೆಗೆ 10 ಶೂಗಳನ್ನು ಡಿಆರ್‌ಡಿಒಗೆ ಹಸ್ತಾಂತರಿಸಲಾಗಿದೆ.

Advertisement

ಈ ಶೂಗಳಲ್ಲಿ ಕರಾರುವಕ್ಕಾಗಿ ಲೊಕೇಶನ್‌ ಟ್ರ್ಯಾಕ್‌ ಮಾಡುವ ಸಾಧನ ಅಳವಡಿಸಲಾಗಿದ್ದು, ಇದು ಸೈನಿಕರು ಎಲ್ಲಿದ್ದಾರೆ ಎಂಬುದನ್ನು ನಿಯಮಿತವಾ ಗಿ  ಖಚಿತಪಡಿಸಿಕೊಳ್ಳಲು ನೆರವಾಗ ಲಿದೆ. ಇದು ಸೈನಿಕರ ರಕ್ಷಣೆ ಹೆಚ್ಚಿಸು ವುದರ ಜತೆಗೆ ದಕ್ಷತೆಯನ್ನೂ ಹೆಚ್ಚಿಸಲಿದೆ. ಪ್ರತೀ ಹೆಜ್ಜೆಯನ್ನಿಟ್ಟಾಗಲೂ ಇದ ರಲ್ಲಿ ವಿದ್ಯುತ್‌ ಉತ್ಪಾದನೆಯಾಗಲಿದ್ದು, ಶೂಗಳ ಕೆಳಭಾಗದಲ್ಲಿ ಅಳವಡಿಸಿರುವ ಸಾಧನದಲ್ಲಿ ಶೇಖರಣೆಯಾಗಲಿದೆ. ಸಣ್ಣಪುಟ್ಟ ಎಲೆಕ್ಟ್ರಾನಿಕ್‌ ಸಾಧನಗಳನ್ನು ಚಾರ್ಜ್‌ ಮಾಡಲು ಇದನ್ನು ಬಳಸ ಬಹುದು ಎಂದು ಇಂದೋರ್‌ ಐಐಟಿ ನಿರ್ದೇಶಕ ಪ್ರೊ| ಸುಹಾಸ್‌ ಜೋಶಿ ಹೇಳಿದ್ದಾರೆ.  ಟ್ರೈಬೋ ಎಲೆಕ್ಟ್ರಿಕ್‌ ನ್ಯಾನೋ ಜನರೇಟರ್‌ ತಂತ್ರಜ್ಞಾನ ಬಳಸಿ ಇದನ್ನು ತಯಾರಿಸಲಾಗಿದೆ.

ಕೇವಲ ಸೇನೆಗಷ್ಟೇ ಅಲ್ಲದೇ ಸಾಮಾನ್ಯ ಜನರ ಬಳಕೆಗೂ ಸಹ ಇದ ನ್ನು ನೀಡಲಾಗುತ್ತದೆ. ಇದು ವಯಸ್ಸಾ ದವರ ರಕ್ಷಣೆಯಲ್ಲಿ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next