ಗಂಗಾವತಿ: ಗಂಗಾವತಿಯ ನೋಂದಣಿ ಇಲಾಖೆಯ ಕಚೇರಿ ಒಂದಿಲ್ಲೊಂದು ಸಮಸ್ಯೆಯಲ್ಲಿ ನಿತ್ಯವೂ ಸುದ್ದಿಯಲ್ಲಿರುತ್ತದೆ .ಕಳೆದ 1ವಾರದಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ವಿದ್ಯುತ್ ಸಂಪರ್ಕ ತಾಂತ್ರಿಕ ಕಾರಣಕ್ಕಾಗಿ ಕಡಿತಗೊಂಡಿದ್ದು ಇಲ್ಲಿ ಜನರೇಟರ್ ಸೇರಿದಂತೆ ಯೂಪಿಎಸ್ ಗಳು ವ್ಯವಸ್ಥೆ ಇಲ್ಲದ್ದರಿಂದ ಕಾರ್ಯ ಕಲಾಪಗಳು ಸ್ಥಗಿತಗೊಂಡಿವೆ. ಇದರಿಂದ ಆಸ್ತಿ ಮತ್ತು ಭೂಮಿಯ ನೋಂದಣಿ ಕಾರ್ಯ ಸ್ಥಗಿತವಾಗಿದ್ದು ಆಸ್ತಿ ಖರೀದಿ ಮಾಡಿದ ಜನರು ನೋಂದಣಿ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ .
ಕಳೆದ 1ವರ್ಷದಿಂದ ಇಲ್ಲಿ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಇಲ್ಲ ವಿದ್ಯುತ್ ಕೈಕೊಟ್ಟರೆ ಇಡೀ ಕಚೇರಿ ಕಾರ್ಯ ಸ್ಥಗಿತವಾಗುತ್ತದೆ .ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಯುಪಿಎಸ್ ಪೂರೈಕೆ ಮಾಡಲು ರಾಜ್ಯಮಟ್ಟದ ಕಂಪೆನಿಗೆ ಟೆಂಡರ್ ಮೂಲಕ ಆದೇಶ ನೀಡಿರುತ್ತದೆ .
ಕಳೆದ 1ವರ್ಷದಿಂದ ಟೆಂಡರ್ ಪಡೆದ ಕಂಪನಿ ಗಂಗಾವತಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಯಾವುದೇ ಯುಪಿಎಸ್ ಬ್ಯಾಟರಿಗಳನ್ನು ಪೂರೈಕೆ ಮಾಡಿಲ್ಲ .ಇರುವ ಹಳೆಯ ವಿದ್ಯುತ್ ಕೈಕೊಟ್ಟಾಗ ಜನರೇಟರ್ ಆನ್ ಮಾಡಿಕೊಂಡು ಕಾರ್ಯಕಲಾಪ ವಿಧಿಸಲಾಗುತ್ತಿತ್ತು .ಕಳೆದ 1ವಾರದ ಹಿಂದೆ ಜನರೇಟರ್ ದುರಸ್ತಿಯಾಗಿದೆ ಜೊತೆಗೆ ವಿದ್ಯುತ್ ತಂತಿಗಳು ಹಾಳಾಗಿದ್ದರಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ .ಇದರಿಂದ ನೋಂದಣಿ ಕಾರ್ಯಕ್ಕೆ ಬೇಕಾಗುವ ಕರೆಂಟ್ ಇಲ್ಲದೇ ಇರುವುದರಿಂದ ಕಛೇರಿಯ ಕಾರ್ಯಗಳು ಸ್ಥಗಿತವಾಗಿವೆ .ಈ ಕುರಿತು ಮೇಲಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನೋಂದಣಿ ಇಲಾಖೆಯ ಕಚೇರಿಗೆ ವಿದ್ಯುತ್ ಮತ್ತು ಶಾಶ್ವತ ಯುಪಿಎಸ್ ಜನರೇಟರ್ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದೆ .
ಆಸ್ತಿ ಮತ್ತು ಭೂಮಿಯನ್ನು ನೋಂದಣಿ ಮಾಡಿಸಲು ಗಂಗಾವತಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಜನರು ಬೇಸತ್ತಿದ್ದರು ಇತ್ತೀಚೆಗೆ ಶಾಸಕ ಪರಣ್ಣ ಮುನವಳ್ಳಿ ಕಚೇರಿಗೆ ದಿಢೀರ್ ಭೇಟಿ ನೀಡಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದ್ದರು .ಈಗ ಪುನಃ ವಿದ್ಯುತ್ ಇಲ್ಲದ ಕಾರಣ 1ವಾರದಿಂದ ಕಛೇರಿಯ ಕಾರ್ಯಕಲಾಪಗಳು ಸ್ಥಗಿತವಾಗಿದ್ದು ಆಸ್ತಿ ಮತ್ತು ಭೂಮಿಯನ್ನು ಖರೀದಿ ಮಾಡಿದ್ದು ಯಾರು ನೋಂದಣಿ ಮಾಡಿಕೊಳ್ಳಲಾಗದೆ ಪರಿತಪಿಸುವಂತಾಗಿದೆ .ಆಸ್ತಿ ಮಾರಾಟ ಮಾಡಿದ ಮತ್ತು ಖರೀದಿ ಮಾಡಿದ ಜನರು ಕೌಟುಂಬಿಕ ಕಾರಣಕ್ಕಾಗಿ ಹಣ ಹೊಂದಿಸಲಾಗದೆ ತೊಂದರೆಪಡುತ್ತಿದ್ದಾರೆ. ಕೂಡಲೇ ಸರಕಾರ ಮತ್ತು ಜಿಲ್ಲಾಡಳಿತ ಗಂಗಾವತಿಯ ಸಬ್ ರಿಜಿಸ್ಟರ್ ಕಚೇರಿಗೆ ಯುಪಿಎಸ್ ಮತ್ತು ಜನರೇಟರ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ .
ಪತ್ರ ಬರೆದು ಮನವಿ ಮಾಡಲಾಗಿದೆ :ನೋಂದಣಿ ಕಚೇರಿಯ ವಿದ್ಯುತ್ ಕೊರತೆ ಮತ್ತು ಸಮಸ್ಯೆ ಬಗ್ಗೆ ಈಗಾಗಲೇ ಯುಪಿಎಸ್ ಮತ್ತು ಜನರೇಟರ್ ಪೂರೈಕೆ ಮಾಡುವಂತೆ ಮತ್ತು ವಿದ್ಯುತ್ ಸಂಪರ್ಕವನ್ನು ಸರಿಯಾಗಿ ಮಾಡಿಸಿಕೊಡುವಂತೆ ಮೇಲಾಧಿಕಾರಿಗಳಿಗೆ ಹಲವು ಪತ್ರ ಬರೆಯಲಾಗಿದೆ ಶಾಸಕರಿಗೂ ಮನವಿ ಮಾಡಲಾಗಿದೆಯೆಂದು ಸಬ್ ರಿಜಿಸ್ಟರ್ ಅಧಿಕಾರಿ ಶ್ರೀಕಾಂತ್ ಉದಯವಾಣಿಗೆ ತಿಳಿಸಿದ್ದಾರೆ