Advertisement

ಕನಕಪುರ ತಾಲೂಕು ಕಚೇರಿಗೆ ವಿದ್ಯುತ್‌ ಕಟ್‌

12:48 PM Jan 18, 2022 | Team Udayavani |

ಕನಕಪುರ: ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿದ್ದ ತಾಲೂಕು ಆಡಳಿತಕ್ಕೆ ವಿದ್ಯುತ್‌ ಸಂಪರ್ಕ ಕಡಿತ ಗೊಳಿಸಿ ಬೆಸ್ಕಾಂ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

Advertisement

ಪರದಾಡಿದರು: ಶುಕ್ರವಾರ ತಾಲೂಕು ಆಡಳಿತದ ವಿದ್ಯುತ್‌ ಕಡಿತಗೊಂಡು ಜನ ಸಾಮಾನ್ಯರು ಅಕ್ಷರ ಸಹಪರದಾಡಿದರು. ಕಳೆದ ಎರಡು ವರ್ಷಗಳಿಂದತಾಲೂಕು ಆಡಳಿತ 15 ಲಕ್ಷ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ತಾಲೂಕು ಕಚೇರಿ ವಿದ್ಯುತ್‌ ಸಂಪರ್ಕವನ್ನು ಬೆಸ್ಕಾಂ ಇಲಾಖೆ ಅಧಿಕಾರಿಗಳು ಶುಕ್ರವಾರ ಕಡಿತಗೊಳಿಸಿ ಬಿಸಿ ಮುಟ್ಟಿಸಿದ್ದಾರೆ. ವಿದ್ಯುತ್‌ ಕಡಿತದಿಂದ ತಾಲೂಕು ಕಚೇರಿ ಆವರಣದಲ್ಲಿರುವ ಬಹುತೇಕ ಇಲಾಖೆಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದೆ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಪಾವತಿಗೆ ಸೂಚನೆ: ಪ್ರತಿ ತಿಂಗಳು ಬರುವ ವಿದ್ಯುತ್‌ ಶುಲ್ಕದಲ್ಲಿ ತಾಲೂಕು ಕಚೇರಿಯ ಎಲ್ಲಾ ಇಲಾಖೆಗಳಿಗೂ ಸರಿಸಮನಾಗಿ ಪಾವತಿ ಮಾಡಬೇಕು. ಇದಕ್ಕೆಕೆಲವು ಇಲಾಖೆ ಅಧಿಕಾರಿಗಳ ಅಪಸ್ವರವೂ ಇದೆ.ಕೆಲವು ಅಧಿಕಾರಿಗಳು ನಮ್ಮ ಇಲಾಖೆಯಲ್ಲಿ ಹೆಚ್ಚುವಿದ್ಯುತ್‌ ಬಳಕೆಯಾಗುವುದಿಲ್ಲ. ಆದರೂ ಹೆಚ್ಚುವಿದ್ಯುತ್‌ ಬಳಕೆ ಮಾಡುವವರ ಸರಿಸಮನಾಗಿ ವಿದ್ಯುತ್‌ ಬಳಸದೆ ಇರುವ ಇಲಾಖೆಗಳು ಹೆಚ್ಚು ಶುಲ್ಕಪಾವತಿ ಮಾಡಬೇಕು. ನಮ್ಮ ಇಲಾಖೆಯಲ್ಲಿ ದುಬಾರಿವಿದ್ಯುತ್‌ ಶುಲ್ಕವನ್ನು ನಮ್ಮ ಇಲಾಖೆ ಬಿಡುಗಡೆ ಮಾಡುವುದಿಲ್ಲ. ಹೀಗಾಗಿ ಎಲ್ಲಾ ಇಲಾಖೆಗಳಿಗೂ ಪ್ರತ್ಯೇಕವಾಗಿ ವಿದ್ಯುತ್‌ ಮೀಟರ್‌ ಅಳವಡಿಕೆ ಮಾಡಿ ಎಂಬುದು ಕೆಲವು ಅಧಿಕಾರಿಗಳ ವಾದ ವಿದ್ಯುತ್‌ಶುಲ್ಕವನ್ನು ನಿರ್ವಹಣೆ ವೆಚ್ಚಕ್ಕೆ ಸೇರ್ಪಡೆಗೊಳಿಸಿ ಆಗಇಲಾಖೆಯಿಂದ ಅನುದಾನ ಪಡೆಯಬಹುದು,ವಿದ್ಯುತ್‌ ಶುಲ್ಕ ಪಾವತಿ ಮಾಡಬಹುದು ಎಂಬುದು ಇನ್ನು ಕೆಲವರ ಅಭಿಪ್ರಾಯ.

ಅಧಿಕಾರಿಗಳ ಕ್ರಮ: ಬಾಕಿ ಉಳಿಸಿಕೊಂಡಿರುವ ವಿದ್ಯುತ್‌ ಶುಲ್ಕ ಪಾವತಿ ಮಾಡುವ ಬಗ್ಗೆ ತಹಶೀಲ್ದಾರ್‌ವಿಶ್ವನಾಥ್‌ ಕೆಲವು ದಿನಗಳ ಹಿಂದೆ ಸಭೆ ಕರೆದುಸೂಚನೆ ಕೊಟ್ಟಿದ್ದರು. ಅಷ್ಟಾದರೂ ತಾಲೂಕು ಆಡಳಿತದ ಕೆಲವು ಇಲಾಖೆ ಅಧಿಕಾರಿಗಳು ವಿದ್ಯುತ್‌ ಶುಲ್ಕ ಪಾವತಿಗೆ ಸ್ಪಂದಿಸಲಿಲ್ಲ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್‌ ಶುಲ್ಕ ಪಾವತಿ ಮಾಡುವಂತೆ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ತಾಲೂಕು ಕಚೇರಿಯಲ್ಲಿರುವ ಹಲವು ಇಲಾಖೆಗಳಲ್ಲಿ ಶುಕ್ರವಾರವೇ ವಿದ್ಯುತ್‌ ಕಡಿತಗೊಂಡಿತ್ತು. ಎಲ್ಲಾ ಕೆಲಸ ಕಾರ್ಯ ಸ್ಥಗಿತಗೊಂಡಿದ್ದವು 2ನೇ ಮಹಡಿಯಲ್ಲಿರುವ ಕಾರ್ಮಿಕ ಇಲಾಖೆ, 2ನೇ ತಾಪಂ ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಲ್ಪ ಸಂಖ್ಯಾ ತರ ಇಲಾಖೆ ತೋಟಗಾರಿಕೆ ಇಲಾಖೆ ಎಡಿ ಎಲ್ ಆರ್‌ ಕೈಗಾರಿಕಾ ಅಭಿವೃದ್ಧಿ ಇಲಾಖೆ, ಪಿಆರ್‌ಇಡಿ ಇಲಾಖೆ ಗಳು ಸೇರಿದಂತೆ ಕೆಲವು ಇಲಾಖೆಗಳಲ್ಲಿ ಶುಕ್ರ ವಾರದಿಂದ ವಿದ್ಯುತ್‌ ಕಡಿತಗೊಂಡಿತ್ತು. ವಾರ ದೊಳಗೆ ಹಣ ಪಾವತಿಮಾಡುವುದಾಗಿ ತಾಲೂಕು ಆಡಳಿತ ಬೆಸ್ಕಾಂ ಇಲಾಖೆಅಧಿಕಾರಿಗಳಿಗೆ ಮನವಿ ಮಾಡಿದ ಬಳಿಕ ಸೋಮವಾರಮಧ್ಯಾಹ್ನ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

Advertisement

ಸದ್ಯದ ಸ್ಥಿತಿಯಲ್ಲಿ ಇರುವ ಸಮಸ್ಯೆ ಏನು? :

ಕಳೆದ 2-3 ವರ್ಷಗಳಿಂದ ತಾಲೂಕು ಆಡಳಿತ ಬೆಸ್ಕಾಂ ಇಲಾಖೆಗೆ ವಿದ್ಯುತ್‌ ಶುಲ್ಕವನ್ನೇ ಪಾವತಿ ಮಾಡಿಲ್ಲ. ಕಳೆದ 2 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ತಾಲೂಕು ಆಡಳಿತದ ಅಧಿಕಾರಿಗಳು ವಿದ್ಯುತ್‌ ಶುಲ್ಕ ಪಾವತಿ ಮಾಡುವ ಯಾವುದೇ ಕ್ರಮ ಕೈಗೊಂಡಿಲ್ಲ. ಮಿನಿ ವಿಧಾನ ಸೌಧದ ನಿರ್ವಹಣಾ ವೆಚ್ಚವನ್ನು ಎಲ್ಲ

ಇಲಾಖೆಗಳು ಭರಿಸಬೇಕು. ಆದರೆ ಈ ಹಿಂದೆ ಇದ್ದ ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಂಡಿಲ್ಲ.ಇದರಿಂದ ಲಕ್ಷಾಂತರ ರೂ ವಿದ್ಯುತ್‌ ಶುಲ್ಕ ಪಾವತಿ ಮಾಡದೆ ಬಾಕಿ ಉಳಿದುಕೊಂಡಿದೆ. ಅನೇಕ ಬಾರಿಬೆಸ್ಕಾಂ ಇಲಾಖೆ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರೂ ತಾಲೂಕು ಆಡಳಿತ ಸ್ಪಂದಿಸದ ಹಿನ್ನೆಲೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ತಾಲೂಕು ಆಡಳಿತದ ವಿದ್ಯುತ್‌ ಸಂಪರ್ಕಕ್ಕೆ ಕತ್ತರಿ ಹಾಕಿದ್ದಾರೆ.

ಎಷ್ಟೇ ಹಣ ಬಾಕಿ ಉಳಿಸಿಕೊಂಡಿದ್ದರೂ ಯಾವುದೇಸರ್ಕಾರಿ ಕಚೇರಿ ವಿದ್ಯುತ್‌ ಕಡಿತ ಮಾಡುವ ಹಾಗಿಲ್ಲ. ನಮ್ಮ ತಾಲೂಕು ಕಚೇರಿಗೆ ವಿದ್ಯುತ್‌ ಕಡಿತಗೊಂಡಿಲ್ಲ.ಸಂಪರ್ಕದಲ್ಲಿ ದೋಷವಿರಬಹುದಷ್ಟೇ.ಕೆಲವು ಇಲಾಖೆಗಳು ವಿದ್ಯುತ್‌ ಶುಲ್ಕಬಾಕಿ ಉಳಿಸಿಕೊಂಡಿದ್ದು ಪಾವತಿಗೆ ಸೂಚಿಸಿದ್ದೇನೆ.ವಿಶ್ವನಾಥ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next