Advertisement

Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್‌ ವಾಹನ

11:59 PM Dec 06, 2023 | Team Udayavani |

ಮಣಿಪಾಲ: ಡಾ| ಟಿಎಂಎ ಪೈ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರ (ಎಂಎಸ್‌ಡಿಸಿ)ಕ್ಕೆ ನಾಸಿಕ್‌ನ ಶಾಹ ಗ್ರೂಪ್‌ ಕಂಪೆನಿಯ ಜಿತೇಂದ್ರ ನ್ಯೂ ಇವಿ ಟೆಕ್‌ನ ಎಲೆಕ್ಟ್ರಿಕಲ್‌ ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.

Advertisement

ಬುಧವಾರ ಡಾ| ಟಿಎಂಎ ಪಾಲಿಟೆಕ್ನಿಕ್‌ ಕ್ಯಾಂಪಸ್‌ನ ಆಡಳಿತ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಜಿತೇಂದ್ರ ನ್ಯೂ ಇವಿ ಟೆಕ್‌ನ ಎಲೆಕ್ಟ್ರಿಕಲ್‌ ದ್ವಿಚಕ್ರ ವಾಹನವನ್ನು ಎಂಎಸ್‌ಡಿಸಿಗೆ ಹಸ್ತಾಂತರಿಸಲಾಯಿತು.

ಜಿತೇಂದ್ರ ನ್ಯೂ ಇವಿ ಟೆಕ್‌ನ ವಲಯ ವ್ಯವಸ್ಥಾಪಕ ಡಾ| ಬಿ. ಚರಣ್‌ ಅವರನ್ನು ಎಂಎಸ್‌ಡಿಸಿ ಮುಖ್ಯಸ್ಥ ಬಿ| ಡಾ| ಸುರ್ಜಿತ್‌ ಸಿಂಗ್‌ ಪಬ್ಲಿ ಸಮ್ಮಾನಿಸಿದರು. ಜಿತೇಂದ್ರ ನ್ಯೂ ಇವಿ ಟೆಕ್‌ನ ಸರ್ವಿಸ್‌ ಎಂಜಿನಿಯರ್‌ ಆಶಿಕ್‌ ಮೊಹಮ್ಮದ್‌, ಎಂಎಸ್‌ಡಿಸಿ ಕುಲಸಚಿವ ಡಾ| ರಾಧಾಕೃಷ್ಣ ಎಸ್‌. ಐತಾಳ್‌, ಡಾ| ಟಿಎಂಎ ಪೈ ಪಾಲಿಟೆಕ್ನಿಕ್‌ ನಿರ್ದೇಶಕ ರಂಗ ಪೈ, ಪ್ರಾಂಶುಪಾಲ ಪ್ರೊ| ಕಾಂತರಾಜ್‌, ಎಂಎಸ್‌ಡಿಸಿ ಸಲಹೆಗಾರ ಡಾ| ಕೆ. ಸಿನ್ಹಾ ಉಪಸ್ಥಿತರಿದ್ದರು.

ಈ ಪ್ರದೇಶದ ಯುವ ಜನತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲತೆಯನ್ನು ಒದಗಿಸುವ ಉದ್ದೇಶದಿಂದ ಎಂಎಸ್‌ಡಿಸಿ ಸ್ಥಾಪನೆಗೊಂಡಿದೆ. ನ್ಯಾಶನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಅಧೀನದಲ್ಲಿ ಮಾನ್ಯತೆ ಪಡೆದ ತರಬೇತಿ ನೀಡುವ ಸಂಸ್ಥೆಯಾಗಿ ಎಂಎಸ್‌ಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ವಾಹನವನ್ನು ಎಲೆಕ್ಟ್ರಾನಿಕ್‌ ವಾಹನದ ವಿನ್ಯಾಸ, ಎಸ್ಸೆಂಬಲಿಂಗ್‌ ಮತ್ತು ನಿರ್ವಹಣೆಯ ಹ್ಯಾಂಡ್‌ ಆನ್‌ ಟ್ರೈನಿಂಗ್‌ಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next