Advertisement

ಫೈನಿಂಗ್ ಮಿಲ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ: ಅಪಾರ ನಷ್ಟ

10:39 AM Oct 26, 2022 | Team Udayavani |

ಹುಣಸೂರು: ಆಕಸ್ಮಿಕ ಬೆಂಕಿ ಬಿದ್ದು ಪೈನಿಂಗ್ ಮಿಷನ್ ಸೇರಿದಂತೆ ಮರಮುಟ್ಟುಗಳು ಬೆಂಕಿಗಾಹುತಿಯಾದ ಘಟನೆ ನಗರದ ಹಳೇ ಕೆ.ಆರ್. ನಗರ ರಸ್ತೆಯ ಕಲ್ಕುಣಿಕೆ ಸರ್ಕಲ್ ಬಳಿಯ ಕಾಳಿಕಾಂಬ ಫೈನಿಂಗ್ ಮಿಲ್ ನಲ್ಲಿ ನಡೆದಿದೆ.

Advertisement

ಕಾಳಿಕಾಂಬ ಫೈನಿಂಗ್ ಮಿಲ್ ನಲ್ಲಿ  ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್  ಸರ್ಕ್ಯೂಟ್‌ ಸಂಭವಿಸಿ ಬೆಂಕಿ ಹತ್ತಿಕೊಂಡು ಫೈನಿಂಗ್ ಮಿಲ್ ನಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂ ಬೆಲೆ ಬಾಳುವ ಮರಗಳು ಬೆಂಕಿಗಾಹುತಿಯಾಗಿದ್ದು,ವಿದ್ಯುತ್ ಉಪಕರಣಗಳು‌, ಪೈನಿಂಗ್ ಯಂತ್ರ ಸಹ ಸುಟ್ಟು ಹೋಗಿದೆ.

ಮಾಹಿತಿ ಮೇರೆಗೆ ಅಗ್ನಿಶಾಮಕ ದಳಸ ಸಿಬ್ಬಂದಿಗಳು ಬೆಂಕಿನಂದಿಸಿ ಬೆಂಕಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next