Advertisement

ಕೊರ್ಗಿ: ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ವಿದ್ಯುತ್‌ ತಂತಿ ತಗುಲಿ ಅಗ್ನಿ ಆಕಸ್ಮಿಕ

12:27 PM Mar 12, 2022 | Team Udayavani |

ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಕೊರ್ಗಿ ಗಿರಿಜಾ ಚಂದ್ರಶೇಖರ್‌ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಒಣಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ಆಕಸ್ಮಿಕವಾಗಿ ವಿದ್ಯುತ್‌ ಸಂಪರ್ಕ ತಂತಿ ತಗುಲಿ ಅಗ್ನಿ ಆಕಸ್ಮಿಕವಾಗಿ ಹಾನಿಯಾದ ಘಟನೆ ಶನಿವಾರ (ಮಾ.12 ರಂದು) ಬೆಳಗ್ಗೆ ಗಂಟೆ 9.30ರ ಸುಮಾರಿಗೆ ಸಂಭವಿಸಿದೆ.

Advertisement

ಶಿಕಾರಿಪುರದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ನಿವಾಸಕ್ಕೆ ಜಾನುವಾರುಗಳ ಮೇವಿಗಾಗಿ ಬೈಹುಲ್ಲು ಸಾಗಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲಾ ಸಮೀಪದಲ್ಲಿ ಬರುತ್ತಿದ್ದಂತೆ ವಿದ್ಯುತ್‌ ಸಂಪರ್ಕ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.

ಪರಿಣಾಮ ವಾಹನದಲ್ಲಿದ್ದ ಸುಮಾರು ರೂ.30 ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

 ಸಾರ್ವಜನಿಕರ ಸ್ಪಂದನೆ : ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದಂತೆ ತತ್‌ಕ್ಷಣವೇ ಅಲ್ಲೇ ಸಮೀಪದಲ್ಲಿದ್ದ ನಿವಾಸಿ ಮಂಜು ಮರಕಾಲ ಅವರು ಮನೆ ಪಂಪ್‌ ಸೆಟ್‌ ನೀರನ್ನು ಬಳಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು.

Advertisement

ಈ ಸಂದರ್ಭದಲ್ಲಿ ಸ್ಥಳೀಯರಾದ ಗಣೇಶ್‌ ಮರಕಾಲ, ರವೀಂದ್ರ, ಉಮೇಶ್‌ ಜೋಗಿ, ಚಂದ್ರ , ಪ್ರದೀಪ್‌ ಭಂಡಾರಿ, ಲಕ್ಷ್ಮೀ ಪೂಜಾರ್ತಿ, ಬೇಬಿ, ಗುಲಾಬಿ, ದುರ್ಗಿ,ಲಲಿತ, ಬಾಬಿ, ಸಣ್ಣಮ್ಮ,ಶಂಕರ ,ಶರತ ಕುಲಾಲ, ಚಂದ್ರ, ಶೇಕರ, ರಘರಾಮ, ಅರುಣ, ಬಾಬು, ಕಿಶೋರ್,  ಮತ್ತಿತರರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಅದೃಷ್ಟಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next