Advertisement

‘ವಿದ್ಯುತ್‌ ತಂತಿ ಎಳೆಯುವ ಕಾಮಗಾರಿ ಮರುಪರಿಶೀಲಿಸಲಾಗುವುದು’

11:40 PM Jul 02, 2019 | mahesh |

ಬಜಪೆ: ಎಂಎಸ್‌ಇಝಡ್‌ನ‌ ಬಜಪೆ ವಿದ್ಯುತ್‌ ಉಪಕೇಂದ್ರದಿಂದ ಜೋಕಟ್ಟೆ ರೈಲ್ವೇ ಸಬ್‌ ಸ್ಟೇಶನ್‌ಗೆ ವಿದ್ಯುತ್‌ ತಂತಿ ಎಳೆಯುವ ಕಾಮಗಾರಿಯ ಹಾದಿಯನ್ನು ಜನರ ಸಲಹೆಯಂತೆ ಮರುಪರಿಶೀಲಿಸಲಾಗುವುದು. ಜನರ ಸಮಕ್ಷಮದಲ್ಲಿ ಸರ್ವೇ ಮಾಡಲು ಸಹಕರಿಸಬೇಕು ಎಂದು ಮೆಸ್ಕಾಂ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಹೇಳಿದರು.

Advertisement

ಕೆಂಜಾರು ಸಾರಬಳಿ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಕೆಪಿಟಿಸಿಎಲ್ ವತಿಯಿಂದ 110ಕೆವಿ ಪ್ರಸರಣ ಮಾರ್ಗವನ್ನು ದ್ವಿಪ್ರಸರಣ ಗೋಪುರಗಳ ಮೂಲಕ ಪ್ರಸ್ತಾವಿತ 220/110/33/11ಕೆವಿ ಎಂಎಸ್‌ಇಝಡ್‌ನ‌ ಬಜಪೆ ವಿದ್ಯುತ್‌ ಉಪಕೇಂದ್ರದಿಂದ ಜೋಕಟ್ಟೆ ರೈಲ್ವೇ ಸಬ್‌ ಸ್ಟೇಶನ್‌ಗೆ ತಂತಿ ಎಳೆಯುವ ಕಾಮಗಾರಿಯ ಬಗ್ಗೆ ಮಂಗಳವಾರ ಕರೆಯಲಾದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ಸುರತ್ಕಲ್ ಹೋಬಳಿಯ ಶೇ. 75ರಷ್ಟು ಈಗಾಗಲೇ ಜಾಗ ಭೂಸ್ವಾಧೀನವಾಗಿದೆ. ರಾಷ್ಟ್ರೀಯ ಯೋಜನೆ ಬಂದಾಗ ಜಾಗ ಬಿಟ್ಟು ಕೊಡಲೇಬೇಕಾಗುತ್ತದೆ. ಪರಿಹಾರಕ್ಕಾಗಿ ನೀವು ಆಗ್ರಹಿಸಬಹುದು ಎಂದು ಹೇಳಿದರು.

ಕೆಪಿಟಿಸಿಎಲ್ನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರವಿಕಾಂತ್‌ ಕಾಮತ್‌ ಮಾತನಾಡಿ, ಹೊಸ ತಂತಿ ಟವರ್‌ನ್ನು ಎತ್ತರ ಮಾಡಿ ಅಲ್ಲಿಂದ ಹಾದುಹೋಗಲಿದೆ. ಸರ್ವೇ ಬಂದಾಗ ಸಹಕರಿಸಿ, ರೈಲ್ವೇ ಹಳಿ ಬಳಿ ತಂತಿಯಿಂದ ಯಾವುದೇ ಅಪಾಯವಾಗಬಾರದೆಂಬ ದೃಷ್ಟಿಯಿಂದ ಬದಿಯಿಂದ ಹಾದುಹೋಗಲಿದೆ ಎಂದು ಸಮಜಾಯಿಸಿದರು.

ಈ ಸಂದರ್ಭ ಕೆಪಿಟಿಸಿಎಲ್ನ ಸಹಾಯಕ ಎಂಜಿನಿಯರ್‌ ರಾಹುಲ್, ರೈಲ್ವೇ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆ.ಎ.ಸಾಜಿ, ಮಳವೂರು ಗ್ರಾಮ ಪಂಚಾಯತ್‌ ಪಿಡಿಒ ವೆಂಕಟ್ರಮಣ ಪ್ರಕಾಶ್‌ ಹಾಗೂ ಅಧಿಕಾರಿಗಳು ಹಾಗೂ ಪಂಚಾಯತ್‌ ಉಪಾಧ್ಯಕ್ಷೆ ವನಜಾ ಶೆಟ್ಟಿ, ತಾ. ಪಂ. ಸದಸ್ಯೆ ಸುಪ್ರೀತಾ ಶೆಟ್ಟಿ , ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

ಕೆಂಜಾರಿನ ನಾಲ್ಕು ಪೈಪ್‌ಲೈನ್‌ಗಳು, ರೈಲ್ವೇ ಹಳಿ, 2 ಕೆಪಿಟಿಸಿಎಲ್ ತಂತಿಗಳು , 25ವರ್ಷಗಳ ಹಿಂದೆ 400 ಎಕ್ರೆ ಜಾಗ ನಾಗಾರ್ಜುನ ಸ್ಥಾವರಕ್ಕೆ ನೀಡಲಾಗಿದೆ. ಅದು ಈಗ ಯಾವುದಕ್ಕೂ ಪ್ರಯೋಜನವಾಗಿಲ್ಲ. ಅ ಪ್ರದೇಶದಿಂದ ತಂತಿಗಳು ಹಾದು ಹೋಗಲಿ. ಈಗಾಗಲೇ ಒಂದು ಹೈಟೆನ್ಶನ್‌ ತಂತಿ ಹಾದುಹೋಗಿದ್ದು ಅದರ ಕೆಳಗಡೆ ವಾಸವಾಗಿರುವ ಒಂದು ಮನೆಯವರು ಮಳೆಗಾಲದಲ್ಲಿ ಬೇರೆಡೆ ಹೋಗಬೇಕಾಗಿ ಬಂದಿದೆ. ಅಗಾಗ ತಂತಿ ಕಡಿತ ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು.

ನಾಗಾರ್ಜುನ ಸ್ಥಾವರದಿಂದ ತಂತಿ ಹಾದು ಹೋಗಲಿ

Udayavani is now on Telegram. Click here to join our channel and stay updated with the latest news.

Next