Advertisement

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

06:17 PM Jan 28, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ. ಅದರಂತೆ, ಮುಂಬರುವ ಬಜೆಟ್‌ನಲ್ಲೂ ಈ ಕ್ಷೇತ್ರಕ್ಕೆ ಆದ್ಯತೆ ಸಿಗುವ ನಿರೀಕ್ಷೆಯಿದೆ.

Advertisement

ಇವಿ(ವಿದ್ಯುತ್‌ಚಾಲಿತ ವಾಹನಗಳು)ಗೆ ಸಂಬಂಧಿಸಿದ ಕಚ್ಚಾ ವಸ್ತುಗಳ ಜಿಎಸ್‌ಟಿ ದರ ಇಳಿಕೆ, ಆಟೋ ಬಿಡಿಭಾಗಗಳ ತೆರಿಗೆ ಇಳಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸ್ವದೇಶಿ ತಂತ್ರಜ್ಞಾನಗಳಿಗೆ ಉತ್ತೇಜನ ಸೇರಿದಂತೆ ಈ ವಲಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಘೋಷಣೆಗಳು ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ:ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಅಷ್ಟೇ ಅಲ್ಲದೇ, ಭಾರತದ ಇವಿ ಉತ್ಪಾದಕರಿಗೆ ರಫ್ತಿನಲ್ಲಿ ವಿನಾಯ್ತಿ ನೀಡುವ ಮೂಲಕ ಆತ್ಮನಿರ್ಭರ ಭಾರತದ ಜೊತೆಗೆ ಜಾಗತಿಕ ಮಟ್ಟದಲ್ಲೂ ಭಾರತವು ಪವರ್‌ಹೌಸ್‌ ಆಗಲು ಸರ್ಕಾರ ಸಹಾಯ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಇವಿ ಉತ್ಪಾದಕರು.

Advertisement

Udayavani is now on Telegram. Click here to join our channel and stay updated with the latest news.

Next