Advertisement

ಇಂಡಿ ಪುರಸಭೆ ತಾತ್ಕಾಲಿಕ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ದಾಖಲೆಗಳು ಭಸ್ಮ

11:28 PM Mar 13, 2021 | Team Udayavani |

ವಿಜಯಪುರ: ಸ್ವಂತ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಡಿ ಪುರಸಭೆ ಕಛೇರಿಗೆ ತಗುಲಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆಯಲ್ಲಿ ಮಹತ್ವದ ದಾಖಲೆಗಳು ಭಸ್ಮವಾದ ಘಟನೆ ಜರುಗಿದೆ.

Advertisement

ಶನಿವಾರ ಸಂಜೆ ಇಂಡಿ ಪಟ್ಟಣದಲ್ಲಿ ಪುರಸಭೆ ಕಛೇರಿ ಸ್ವಂತ ಕಟ್ಟಡದ ಹಿನ್ನೆಲೆಯಲ್ಲಿ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಪುರಸಭೆ ಕಛೇರಿ ತೆರೆಯಲಾಗಿತ್ತು. ಸ್ವಂತ ಕಟ್ಟಡಕ್ಕೆ ಪುರಸಭೆ ಕಛೇರಿ ಸ್ಥಳಾಂತರದ ಬಳುಕವೂ ಮಹತ್ವದ ದಾಖಲೆಗಳು ತಾತ್ಕಾಲಿಕ ಕಟ್ಟಡದಲ್ಲೇ ಇದ್ದವು.

ಇದೀಗ ಶನಿವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಪರಿಣಾಮ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡ ಆವರಿಸಿದ್ದು, ಪುರಸಭೆ ಬಹುತೇಕ ದಾಖಾಲೆಗಳು ಸುಟ್ಟು ಭಸ್ಮವಾಗಿವೆ.

ಇದನ್ನೂ ಓದಿ :ರಮೇಶ್ ಜಾರಕಿಹೊಳಿಯವರೇ ಸಿಡಿ ರಿಲೀಸ್ ಮಾಡಿದ್ದಾರೆ : ಸಂತ್ರಸ್ತೆ

ಬೆಂಕಿ ಹೊತ್ತುಕೊಂಡ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಹಾಗೂ ಪುರಸಭೆ ಸಿಬ್ಬಂದಿಯಿಂದ ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.

Advertisement

ಮೆಲ್ನೊಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ದುರಂತ ದಂತೆ ಕಂಡು ಬಂದರೂ ಸಮಗ್ರ ತನಿಖೆಗಾಗಿ ಇಂಡಿ ಶಹರ್ ಪೋಲಿಸ್ ಠಾಣಾಲೆಗೆ ದೂರು ನೀಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next