Advertisement

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಡಿಯಲ್ಲಿ ಕರ್ತವ್ಯದಲ್ಲಿದ್ದ ವಿಜಯಪುರದ ಯೋಧ ಹುತಾತ್ಮ

07:48 AM Aug 31, 2020 | Mithun PG |

ವಿಜಯಪುರ: ಜಮ್ಮು ಕಾಶ್ಮಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಶಿವಾನಂದ ಜಗನ್ನಾಥ ಬಡಿಗೇರ (29) ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ ಘಟನೆ ರವಿವಾರ ಸಂಜೆ ಸಂಭವಿಸಿದೆ.

Advertisement

ಇವರು ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದವರು ಎಂದು ತಿಳಿದುಬಂದಿದೆ. ಜಮ್ಮು ಕಾಶ್ಮಿರದ ಗಡಿ ಭದ್ರತಾ ಪಡೆಯಲ್ಲಿ ಎಲೆಕ್ಟ್ರಿಕ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು

ಜಮ್ಮು ಕಾಶ್ಮೀರದ ಬಿಎಸ್ಎಫ್ ಹೌಸ್ ನಲ್ಲಿ ರವಿವಾರ ವಿದ್ಯುತ್ ದುರಸ್ತಿ ಮಾಡುವಾಗ ಈ ದುರಂತ ಸಂಭವಿಸಿದೆ ಎಂದು ಬಿಎಸ್ಎಫ್  ಹಿರಿಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಜಗನ್ನಾಥ ಬಡಿಗೇರ 9 ವರ್ಷಗಳ ಹಿಂದೆ ಬಿಎಸ್‌ಎಫ್‌ಗೆ ಸೇರಿದ್ದರು. ವರ್ಷದ ಹಿಂದೆ ಜಗನ್ನಾಥ ಅವರಿಗೆ ಮದುವೆಯಾಗಿದ್ದು ಪತ್ನಿ, ತಂದೆ, ತಾಯಿ, ಮೂವರು ಸಹೋದರರು, ಸಹೋದರಿ ಇದ್ದಾರೆ. ಇವರ ಹಿರಿಯಣ್ಣನೂ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next