Advertisement
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ರಬ್ಬರ್ ತೋಟಕ್ಕೆ ಬೆಂಕಿ ತಗಲಿರುವುದನ್ನು ಗಮನಿಸಿದ ಸ್ಥಳೀಯರು ಕೂಡ ಬೆಂಕಿ ನಂದಿಸಲು ಹರ ಸಾಹಸಪಟ್ಟರು. ಅದಾಗಲೇ ಬೆಂಕಿಯ ಕೆನ್ನಾಲೆ ಆವರಿಸಿಕೊಂಡು 200ಕ್ಕೂ ಹೆಚ್ಚು ರಬ್ಬರ್ ಮರಗಳನ್ನು ಆಹುತಿ ಪಡೆದಿದೆ. ಘಟನ ಸ್ಥಳಕ್ಕೆ ಕುಂದಾಪುರ ಅಗ್ನಿ ಶಾಮಕದಳ ಆಗಮಿಸಿ, ಬೆಂಕಿ ನಂದಿಸಿದರು. ರಬ್ಬರ್ ತೋಟದ ಮಾಲಕ ಡಾ| ಸುಬ್ರಹ್ಮಣ್ಯ ರಾವ್ ಅವರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ರಬ್ಬರ್ ತೋಟದ ಸುತ್ತ ಮುತ್ತಲಿನಲ್ಲಿ ಅನೇಕ ಮನೆಗಳಿದ್ದು, ದೊಡ್ಡ ಅನಾಹುತ ತಪ್ಪಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕಪಕ್ಕದಲ್ಲಿರುವ ಮನೆಯವರು ರವಿವಾರವಾದ್ದರಿಂದ ಮನೆಯಲ್ಲಿದ್ದರು. ಯಾರೂ ಇಲ್ಲದ ಸಂದರ್ಭದಲ್ಲಿ ಇಂತಹ ಘಟನೆ ನಡೆದರೆ ಯಾರು ಹೊಣೆ. ಪದೇ ಪದೇ ಆಕಸ್ಮಿಕವಾಗಿ ಬೆಂಕಿ ತಗಲುವುದರಿಂದ ವಿದ್ಯುತ್ ಲೈನ್‌ನ್ನು ಸ್ಥಳಾಂತರಿಸಿ, ಮುಖ್ಯ ರಸ್ತೆಯ ಬದಿಯಲ್ಲಿ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳೀಯರ ಸಹಕಾರ
ರಬ್ಬರು ತೋಟಕ್ಕೆ ಬೆಂಕಿ ತಗಲಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ಥಳೀಯವಾಗಿ ಸಿಗುವ ವಸ್ತು ಹಾಗೂ ಮರದ ಸೊಪ್ಪುಗಳಿಂದ ಬಡಿದು ಬೆಂಕಿ ನಂದಿಸಿದರು. ಇನ್ನೂ ಕೆಲವರು ಮನೆಯಿಂದ ನೀರನ್ನು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸುವಾಗಲೇ ಬೆಂಕಿಯನ್ನು ನಂದಿಸಿದರು.