Advertisement
ಶನಿವಾರ ಇಲ್ಲಿನ ಮುಖ್ಯ ರಸ್ತೆಯ ಮಾçದೆ ದೇವುಸ್ ಚರ್ಚ್ ಎದುರು ಎಲ್.ಟಿ. ಲೈನ್‌ನಲ್ಲಿ ಬೈಂಡಿಂಗ್ ನಡೆಯುತ್ತಿದ್ದು, ಮೆಸ್ಕಾಂ ಸಿಬಂದಿ ಜತೆಗೆ ಬೆಂಗಳೂರಿನ ಅರವಿಂದ ಎಲೆಕ್ಟ್ರಿಕಲ್ ಗುತ್ತಿಗೆ ಸಂಸ್ಥೆಯ 10 ಮಂದಿ ಕೆಲಸ ಮಾಡುತ್ತಿದ್ದರು.
Related Articles
ಬಸವ ನಾಯಕ್ ಶಾಕ್‌ನಿಂದ ಕೂತ ಸ್ಥಿತಿಯಲ್ಲೇ ಇದ್ದಾಗ ಉಳಿದ ಕಾರ್ಮಿಕರು ಕಂಬಕ್ಕೆ ಹತ್ತಿ ಹಗ್ಗದ ಸಹಾಯದಿಂದ ಅವರನ್ನು ಇಳಿಸುವ ಯತ್ನ ಮಾಡಿದರು. ಈ ವೇಳೆ ಮೆಸ್ಕಾಂ ಸಿಬಂದಿ ಯಾವುದೇ ಪ್ರಯತ್ನ ಮಾಡದೇ ಮಾರ್ಗದರ್ಶನದಲ್ಲಿ ಸಮಯ ಕಳೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಎಚ್ಚೆತ್ತುಕೊಂಡ ಮೆಸ್ಕಾಂ ಸಿಬಂದಿ ಕಂಬಕ್ಕೆ ಹತ್ತಿ ಗುತ್ತಿಗೆ ಕಾರ್ಮಿಕರೊಂದಿಗೆ ಸೇರಿ ಬಸವ ನಾಯಕನನ್ನು ಇಳಿಸುವಲ್ಲಿ ಸಹಕರಿಸಿದರು.
Advertisement
ನಗರದ ಹೃದಯಭಾಗದಲ್ಲಿ ಈ ಘಟನೆ ನಡೆದ ಕಾರಣ ಅರ್ಧ ಗಂಟೆ ಟ್ರಾಫಿಕ್ ಜಾಮ್ ಉಂಟಾಯಿತು. ಗಾಯಾಳುವನ್ನು ರಿಕ್ಷಾದಲ್ಲಿ ಕೊಂಡೊಯ್ಯಲೂ ಹರಸಾಹಸ ಪಡಬೇಕಾಯಿತು.
ವಿದ್ಯುತ್ ಇರಲಿಲ್ಲಪುತ್ತೂರು ನಗರ ಹಾಗೂ ಗ್ರಾಮಾಂತರದ ಕೆಲವು ಕಡೆಗಳಲ್ಲಿ ದುರಸ್ತಿಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಎಲ್ಲೆಡೆ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಆದರೂ ವಿದ್ಯುತ್ ಶಾಕ್‌ಗೆ ಒಳಗಾಗಿರುವುದು ಚರ್ಚೆಗೆ ಕಾರಣವಾಯಿತು. ದುರಸ್ತಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದಾಗ್ಯೂ ಇನ್ವರ್ಟರ್, ಜನರೇಟರ್‌ಗಳು ಬಳಕೆಯಾ ಗುತ್ತಿರುವುದರಿಂದ ಮತ್ತು ಅವುಗಳಲ್ಲಿ ಅಟೋ ಮೆಟಿಕ್ ಚೇಂಜ್ ಓವರ್‌ಗಳು ಇರುವುದರಿಂದ ಕರೆಂಟ್ ರಿಟರ್ನ್ ಆಗಿದೆ. ಅಪಾಯವಾಗಿಲ್ಲ. ಕಾರ್ಮಿಕ ಬೆಳಗ್ಗಿನಿಂದ ಆಹಾರ ಸೇವಿಸ ದ್ದರಿಂದ ನಿಶ್ಶಕ್ತಿ ಉಂಟಾಗಿದೆ. ಇಬ್ಬರೂ ಚೇತರಿಸಿಕೊಂಡಿದ್ದಾರೆ. ಒಂದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು.
– ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಪುತ್ತೂರು