Advertisement

ವಿದ್ಯುತ್ ಶಾಕ್ : ಅಜ್ಜಿ, ಮೊಮ್ಮಗ ಬಲಿ; ಸೊಸೆ ಗಂಭೀರ

01:34 PM Oct 03, 2021 | Team Udayavani |

ಸಂಕೇಶ್ವರ: ವಿದ್ಯುತ್ ಶಾಕ್ ತಗುಲಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ದಾರುಣವಾಗಿ ಸಾವನ್ನಪ್ಪಿ ಇನ್ನೋರ್ವ ಮಹಿಳೆ ಗಂಭೀರವಾಗಿರುವ ದುರ್ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.

Advertisement

ಮನೆಯ ಹಿತ್ತಲಿನಲ್ಲಿ ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಅಜ್ಜಿ ಮತ್ತು ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಸೊಸೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವಘಡದಲ್ಲಿ ಮೃತ ಪಟ್ಟ ದುರ್ದೈವಿಗಳು ಶಾಂತವ್ವಾ ದುಂಡಪ್ಪ ಬಸ್ತವಾಡಿ ಹಾಗೂ ಮೊಮ್ಮಗ ಸಿದ್ದಾರ್ಥ ಬಾಪು ಬಸ್ತವಾಡಿ ಎನ್ನುವವರಾಗಿದ್ದಾರೆ.

ಸಂಕೇಶ್ವರ ನಗರದ ಮಡ್ಡಿ ಗಲ್ಲಿಯಲ್ಲಿ ಈ ಅವಘಡ ಸಂಭವಿಸಿದ್ದು. ಶನಿವಾರ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಹಿತ್ತಲಿನಲ್ಲಿ ವಿದ್ಯುತ್ ಸ್ಪರ್ಶಗೊಂಡಿತ್ತು ಎಂದು ಹೇಳಲಾಗಿದೆ. ಮೊದಲು ಅಜ್ಜಿಗೆ ವಿದ್ಯುತ್ ತಗುಲಿದ್ದು, ಮೊಮ್ಮಗ ಬಿಡಿಸಲು ಹೋದಾಗ ಮೊಮ್ಮಗ ಕೂಡಾ ಮೃತಪಟ್ಟಿದ್ದಾನೆ .

ಸೊಸೆಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಪಿಎಸ್ ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next