Advertisement

ವಿದ್ಯುತ್ ಆಘಾತಕ್ಕೆ ರಾಷ್ಟ್ರೀಯ ಪಕ್ಷಿ ನವಿಲು ಬಲಿ

02:01 PM Jun 17, 2020 | sudhir |

ಈಶ್ವರಮಂಗಲ: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕಾವುಂಜದ ವಿದ್ಯುತ್ ಪರಿವತ೯ಕ ಇರುವಲ್ಲಿ ಖಾಸಗಿ ಸ್ಥಳದಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ವಿದ್ಯುತ್ ಶಾಕ್ ಗೆ ಬಲಿಯಾದ ಘಟನೆ ನಡೆದಿದೆ.

Advertisement

ವಿದ್ಯುತ್ ಶಾಕ್ ಗೆ ಪಕ್ಷಿಯ ಎದೆ, ರೆಕ್ಕೆ ಭಾಗ ಸುಟ್ಟು ಹೋಗಿದೆ. ಬಲಿಯಾದ ನವಿಲನ್ನು ಖಾಸಗಿ ಸ್ಥಳದಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೊಂಡು ಹೋಗಿದ್ದು ನಂತರ ಏನಾಗಿದೆ ಎಂಬ ಮಾಹಿತಿ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಆದರೆ ಸ್ಥಳೀಯ ಅರಣ್ಯ ರಕ್ಷಕ ಉಮೇಶ್ ಹೇಳಿಕೆ ಪ್ರಕಾರ ಕೊಳ್ತಿಗೆ ಪಶು ವೈದ್ಯಾಧಿಕಾರಿ ಪುನೀತ್ ಮರಣೋತ್ತರ ಪರೀಕ್ಷೆ ಮಾಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.