Advertisement

ವಿಜಯಪುರ :ಕಳೆದೊಂದು ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ವಿದ್ಯುತ್ ಸ್ಪರ್ಶದಿಂದ ಸಾವು

10:24 PM Jul 04, 2021 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಸಿಂದಗಿ ಪರಿಸರದಲ್ಲಿ ಜಾನುವಾರುಗಳನ್ನು ಬಲಿ ಪಡೆಯುತ್ತ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದೆ.

Advertisement

ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮದ ಸುತ್ತಲಿನ ಕಬ್ಬಿನ ಗದ್ದೆಗಳಲ್ಲಿ ಚಿರತೆ ಬಿಡಾರ ಹೂಡಿತ್ತು. ಶನಿವಾರ ರಾತ್ರಿ ಬಸವರಾಜ ಪಾಟೀಲ ಎಂಬವರ ಜಮೀನಿನ ವಿದ್ಯುತ್ ಪರಿವರ್ತಕ ಏರಲು ಯತ್ನಿಸಿ, ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ.

ಮೃತ ಚಿರತೆ ಕಳೆದ ಒಂದು ತಿಂಗಳಿಂದ ಆಹಾರಕ್ಕಾಗಿ ರೈತರ ಹತ್ತಾರು ಜಾನುವಾರುಗಳನ್ನು ಕೊಂದು ಹಾಕಿ ಆತಂಕ ಸೃಷ್ಟಿಸಿತ್ತು.

ಇದರಿಂದ ಕಂಗಾಲಾಗಿದ್ದ ರೈತರು, ಸಾರ್ವಜನಿಕರು ಚಿರತೆ ಸೆರೆ ಹಿಡಿಯಲು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದೇವರ ನಾವದಗಿ ಕಬ್ಬಿನ ಗದ್ದೆಗಳಲ್ಲಿ ಚಿರತೆ ಚಲನವಲನಕ್ಕಾಗಿ ಸಿಸಿ ಕೆಮೆರಾ ಹಾಗೂ ಸೆರೆ ಹಿಡಿಯಲು ಬೋನು ಅಳವಡಿಸಿದ್ದರು.

ಇದನ್ನೂ ಓದಿ : ಕೇರಳಕ್ಕೆ ಸಿಗಲಿದೆ ಡ್ರೋನ್‌ ಲ್ಯಾಬ್‌ : ಡ್ರೋನ್‌ ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿಗೂ ಚಿಂತನೆ

Advertisement

ಆದರೆ ಶನಿವಾರ ರೈತ ಬಸವರಾಜ ಇವರ ಜಮೀನಿನ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರುವ ಯತ್ನದಲ್ಲಿ ವಿದ್ಯುತ್ ಪ್ರವಹಿಸಿ ಚಿರತೆ ಮೃತಪಟ್ಟಿದೆ. ಚಿರತೆ ಸೆರೆ ಹಿಡಿಯುವ ಕರ್ತವ್ಯ ನಿರತ ಸಿಬ್ಬಂದಿ ಭಾನುವಾರ ಸಂಜೆ ರೈತರ ಜಮೀನಿನಲ್ಲಿ ಶೋಧನೆ ನಡೆಸುತ್ತಿದ್ದಾಗ ಚಿರತೆ ಮೃತಪಟ್ಟಿರುವುದು ಕಂಡಿದೆ.

ವಿಷಯ ತಿಳಿಯುತ್ತಲೇ ವಿಜಯಪುರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಬಿ.ಪಿ.ಚವ್ಹಾಣ, ಸಿಂದಗಿ ವಲಯ ಅರಣ್ಯ ಅಧಿಕಾರಿ ಬಸನಗೌಡ ಬಿರಾದಾರ, ಇರ್ಶಾದ ನೇವಾರ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next