Advertisement
ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಕರ್ಷಣೆಯೇ ಅಂಥದ್ದು. ಪೆಟ್ರೋಲ್, ಸರ್ವೀಸ್, ರಸ್ತೆ ತೆರಿಗೆ, ವಾಯುಮಾಲಿನ್ಯ ತಪಾಸಣೆ ಇತ್ಯಾದಿಗಳ ಕಿರಿಕ್ ಇಲ್ಲ. ನಿಯಮಿತವಾಗಿ ಚಾರ್ಜ್ ಮಾಡಿದರೆ ಸಾಕು. ಹೆಚ್ಚು ನಿರ್ವಹಣೆಯೇ ಬೇಡ. ವಿಪರೀತ ಟ್ರಾಫಿಕ್ ಇರುವ ನಗರಗಳಲ್ಲಿ, ನಗರಗಳಿಗೆ ಮಾತ್ರ ಸೀಮಿತವಾದಂತೆ ಮತ್ತು ದಿನಕ್ಕೆ ಸುಮಾರು 30/70 ಕಿ.ಮೀ. ತಿರುಗಾಟ ಎಂದಿದ್ದರೆ ಹೊಸ ಜಮಾನಾದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ರೆ ಬೆಸ್ಟ್.
ಭಾರತದ ಮಾರುಕಟ್ಟೆಗೆ ಈಗ ಅತ್ಯುತ್ತಮ ಗುಣಮಟ್ಟದ ಸ್ಕೂಟರ್‌ಗಳು ಬರತೊಡಗಿವೆ. ಸಿಂಗಲ್ ಚಾರ್ಜ್‌ಗೆ 30 ಕಿ.ಮೀ.ಯಿಂದ ಹಿಡಿದು 90 ಕಿ.ಮೀ. ವರೆಗೆ ಸಾಗುವ ಸ್ಕೂಟರ್‌ಗಳು ಇವೆ. ಒಂದು ಬಾರಿ ಶೇ.100ರಷ್ಟು ಚಾರ್ಜ್ ಆಗಲು ಇವುಗಳು 4 ಗಂಟೆಯಿಂದ 12 ಗಂಟೆವರೆಗೆ ತೆಗೆದುಕೊಳ್ಳುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಸ್ಕೂಟರ್‌ಗಳಲ್ಲಿ ಎಕಾನಮಿ ಮತ್ತು ಸಿಟಿ ಮೋಡ್ ಎಂದು ಎರಡು ಮಾದರಿಯ ಸ್ವಿಚ್ ಇದ್ದು, ಎಕಾನಮಿ ಹೆಚ್ಚಿನ ಮೈಲೇಜ್ ನೀಡಿದರೆ ಸಿಟಿ ಮೋಡ್ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
Related Articles
ಸುಮಾರು 40 ಕಿ.ಮೀ. ಯಷ್ಟು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ಗೆ 250 ಕಿ.ವ್ಯಾ. ಮೋಟಾರು ಬೇಕಾಗುತ್ತದೆ. ಇದು ಒಂದು ಸಿಂಗಲ್ ಚಾರ್ಜ್‌ಗೆ 1 ಅಥವಾ ಒಂದೂವರೆ ಯೂನಿಟ್‌ನಷ್ಟು ವಿದ್ಯುತ್ ಬೇಡುತ್ತದೆ. ಅಂದರೆ ಸುಮಾರು 7 ರೂ.ಗಳಷ್ಟು ಖರ್ಚಾಗುತ್ತದೆ. ಕೆಲವು ಸ್ಕೂಟರ್‌ಗಳು ಉತ್ತಮ ಗುಣಮಟ್ಟದ ಬ್ಯಾಟರಿ ಮತ್ತು ಮೋಟಾರುಗಳನ್ನು ಹೊಂದಿದ್ದರೆ 60 ಕಿ.ಮೀ. ವರೆಗೂ ಮೈಲೇಜ್ ಕೊಡಬಹುದು. ಅಂದರೆ ಕಿ.ಮೀ.ಗೆ ವಿದ್ಯುತ್ ಖರ್ಚು ಕೆಲವೇ ಪೈಸೆಯಷ್ಟಾಗುತ್ತದೆ.
Advertisement
ಏರುದಾರಿಗೂ ಸಲೀಸುಎಲೆಕ್ಟ್ರಿಕ್ ಸ್ಕೂಟರ್ ಎಂದಾಕ್ಷಣ ಎಲ್ಲರ ಸಮಸ್ಯೆ ನಮ್ಮ ಊರಿನ ಏರುದಾರಿಗೆ ಆಗುತ್ತಾ? ಅಲ್ಲೆಲ್ಲ ಸಂಚರಿಸುತ್ತಾ ಎನ್ನುವ ಪ್ರಶ್ನೆ ಇರಬಹುದು ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೆಟ್ರೋಲ್ ಸ್ಕೂಟರ್‌ನಷ್ಟು ಪಿಕಪ್ ಇಲ್ಲದಿದ್ದರೂ ಎಳೆಯುವ ಶಕ್ತಿ (ಟಾರ್ಕ್) ಹೆಚ್ಚಿರುತ್ತದೆ. ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅವುಗಳ ಸಾಮರ್ಥ್ಯ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿರುತ್ತದೆ. ಆರಂಭಿಕ 60 ಕಿ.ಮೀ. ವೇಗವನ್ನು 5 ಸೆಕೆಂಡ್‌ಗಳ ಒಳಗೆ ತಲುಪುತ್ತವೆ. ಎಳೆಯುವ ಶಕ್ತಿ 20 ಎನ್‌ಎಂಗೂ ಹೆಚ್ಚಿರುತ್ತವೆ. ಆದ್ದರಿಂದ ಇಬ್ಬರು ಕೂತು ಒಂದು ಪುಟ್ಟ ಸರಕಿನ ಚೀನ ಇಟ್ಟುಕೊಂಡಿದ್ದರೂ ಏರುದಾರಿಗೆ ನೋ ಪ್ರಾಬ್ಲಿಂ. ನಿರ್ವಹಣೆ ವೆಚ್ಚ ಅತಿ ಕಡಿಮೆ
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನಿರ್ವಹಣೆ ಬೇಕಾದ್ದು ಬ್ಯಾಟರಿಯದ್ದು. ಬ್ಯಾಟರಿಯನ್ನು ಸುಸ್ಥಿತಿಯಲ್ಲಿಟ್ಟಿರಬೇಕು. ಈಗಿನ ಹೆಚ್ಚಿನ ಬ್ಯಾಟರಿಗಳು ಲೀಥಿಯಂ ಅಯಾನ್ ಬ್ಯಾಟರಿಗಳು. ಇವುಗಳು ಹೆಚ್ಚು ನಿರ್ವಹಣೆ ಬೇಡುವುದಿಲ್ಲ. ಆದರೆ 15 ದಿನಕ್ಕೊಮ್ಮೆ ತುಸು ಚಾರ್ಜ್, ಬಳಕೆ ಮಾಡಿದರೆ ಉತ್ತಮ. ಸುಮಾರು 4ರಿಂದ 5 ವರ್ಷವರೆಗೆ ಈ ಬ್ಯಾಟರಿಗಳು ಬಾಳಿಕೆ ಬರುತ್ತವೆ. 2-3 ವರ್ಷ ಕಂಪೆನಿಗಳು ವಾರೆಂಟಿಯನ್ನೂ ನೀಡುತ್ತವೆ. ಇನ್ನು ಹೊಸ ಬ್ಯಾಟರಿಗಳಿಗೆ 3-4 ಸಾವಿರ ರೂ.ದರವಿದೆ. ಉಳಿದಂತೆ ಟಯರ್, ಬ್ರೇಕ್ ಪ್ಯಾಡ್ ಸ್ಟೀರಿಂಗ್ ವೀಲ್ ಬೇರಿಂಗ್ ಇತ್ಯಾದಿ ಸಮಸ್ಯೆಗಳು ಬರಬಹುದು. ಸಾಮಾನ್ಯ ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದರ ನಿರ್ವಹಣೆ ನಗಣ್ಯ. -ಈಶ