Advertisement
ಜಪಾನ್‌ನ ಮೈಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೊಮೈ ಮಿಯಾಶಿತಾ ಅವರ ಸಂಶೋಧನೆಯನ್ನು ಈ ಕಂಪನಿಯು ಪರಿಕರಗಳ ರೂಪದಲ್ಲಿ ಹೊರತಂದಿದೆ. ರಕ್ತದೊತ್ತಡ ಇರುವವರಿಗೆ, ಉಪ್ಪು ಕಡಿಮೆ ತಿನ್ನಲೇಬೇಕಾದ ಪರಿಸ್ಥಿತಿಯಿರುವವರಿಗೆ ಇದು ವರದಾನ ಎಂದು ಹೇಳಲಾಗಿದೆ.
ರಕ್ತದೊತ್ತಡ ಇರುವವರಿಗೆ ಉಪ್ಪು ತಿನ್ನಬಾರದೆಂಬುದು ವೈದ್ಯರ ಸಲಹೆ. ಆದರೆ, ಉಪ್ಪಿಗಿಂತ ರುಚಿ ಬೇರೆಯಿಲ್ಲ ಎಂಬ ನಾಣ್ಣುಡಿಗೆ ಅಂಟಿಕೊಂಡಿರುವವರಿಗೆ ಸಪ್ಪೆ ತಿನ್ನುವುದು ಬಲು ಕಷ್ಟ. ಹೋಗಲಿ ಅಂತ ಉಪ್ಪು ಸ್ವಲ್ಪ ಹಾಕಿದರೂ ಅದು ನಾಲಿಗೆಗೆ ರುಚಿಸದು. ಈ ಉಪ್ಪಿನ ಕೊರತೆಯನ್ನು ಈ ಚಾಪ್‌ಸ್ಟಿಕ್‌ಗಳು ತುಂಬಲಿವೆ. ಇದನ್ನೂ ಓದಿ:ತೋಕೂರು : 800 ವರ್ಷಗಳ ಇತಿಹಾಸವಿರುವ ದೇವಳದ ಗರ್ಭ ಗುಡಿಯಲ್ಲಿ ಚಿನ್ನದ ಜೋಡಿ ಮಯೂರ ಪತ್ತೆ
Related Articles
ಇದು ಬ್ಯಾಟರಿ ವಿದ್ಯುತ್ ಚಾಲಿತ ಸಲಕರಣೆ. ಈ ಚಾಪ್‌ಸ್ಟಿಕ್ಸ್‌ಗಳಿಂದ ಪುಟ್ಟದೊಂದು ವೈರ್ ಹೊರಬಂದಿದ್ದು ಅದನ್ನು ನಿಮ್ಮ ಬಲಗೈಯ್ಯಿಗೆ ಅಳವಡಿಸಲಾಗಿರುತ್ತದೆ. ಈ ಚಾಪ್‌ಸ್ಟಿಕ್‌ಗಳನ್ನು ಆಹಾರದಲ್ಲಿ ಅದ್ದಿಕೊಂಡು ಆಹಾರ ಸೇವಿಸುವಾಗ, ಆಹಾರದಲ್ಲಿರುವ ಅಲ್ಪಪ್ರಮಾಣದ ಉಪ್ಪಿನ ಅಂಶವನ್ನು, ಅಂದರೆ, ಸೋಡಿಯಂ ಧಾತುಗಳನ್ನು ಹೀರಿಕೊಂಡು, ಅದರ ಶಕ್ತಿಯನ್ನು ಒಂದೂವರೆ ಪಟ್ಟು ಹೆಚ್ಚಿಸಿ, ನಾಲಿಗೆಗೆ ಉಪ್ಪಿನ ರುಚಿಯನ್ನು ಗ್ರಹಿಸುವ ಜಾಗಕ್ಕೆ ತಲುಪಿಸುತ್ತದೆ. ಅದರಿಂದ ಬಾಯಿಯಲ್ಲಿ ಇಟ್ಟುಕೊಂಡ ಆಹಾರದಲ್ಲಿ ಉಪ್ಪಿನ ಪ್ರಮಾಣ ಸರಿಯಾಗಿದೆ ಎಂದು ಎನಿಸುತ್ತದೆ. ಇದರಿಂದ ಊಟ ಸಲೀಸಾಗುತ್ತದೆ ಎನ್ನುತ್ತಾರೆ ಇದರ ತಯಾರಕರು.
Advertisement