Advertisement

ತಿರುಪತಿ ದೇಗುಲಕ್ಕೆ ಎಲೆಕ್ಟ್ರಿಕ್‌ ಕಾರು ಹಿರಿಮೆ

11:41 AM Jun 13, 2018 | Team Udayavani |

ತಿರುಮಲ: ಕೋಟ್ಯಂತರ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪ ದೇವಾಲಯ ಈಗ ಇನ್ನೊಂದು ರೀತಿಯಿಂದ ಸುದ್ದಿಯಾಗಿದೆ. ಆಂಧ್ರ ಪ್ರದೇಶದ ಪ್ರಸಿದ್ಧ ದೇವಸ್ಥಾನ ಈಗ ಎಲೆಕ್ಟ್ರಿಕ್‌ ಕಾರುಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ವಿಶ್ವದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.

Advertisement

ಆಂಧ್ರ ಸರಕಾರದ ಇವಿ ನಿಯಮಾವಳಿಯ ಪ್ರಕಾರ  ರಾಜ್ಯ ನಿರ್ವಹಣೆಯ ಇಂಧನ ದಕ್ಷತಾ ಸೇವಾ ಕಂಪೆನಿ (ಇಇಎಸ್‌ಎಲ್‌) 350 ಎಲೆಕ್ಟ್ರಿಕ್‌ ಕಾರುಗಳನ್ನು ರಾಜ್ಯಾ ದ್ಯಂತ ಬಳಕೆಗೆ ನೀಡಿದೆ.  ತಿರುಪತಿ ದೇವಾಲಯ ನಿರ್ವಹಣೆಗೆಂದು 50 ಕಾರುಗಳನ್ನು ನೀಡಲಾಗಿದ್ದು, ಅಧಿಕಾರಿಗಳು ಉಪಯೋಗ ಪಡೆಯುತ್ತಿದ್ದಾರೆ.

50 ಎಲೆಕ್ಟ್ರಿಕ್‌ ಕಾರು ಗಳನ್ನು 20,000 ರೂ. ತಿಂಗಳ ಬಾಡಿಗೆಗೆ ಪಡೆದು ಉಪಯೋಗಿಸಿಕೊಳ್ಳಲಾಗುತ್ತಿದೆ. ಇದರ ನಿರ್ವಹಣೆಗೆಂದು 20,000 ರೂ. ಅಧಿಕಾರಿ ಗಳಿಗೆ ನೀಡಲಾಗುತ್ತಿದೆ.  ಭಕ್ತಾದಿಗಳು ಇದನ್ನು ಬಳಸಿದರೆ ಪ್ರತಿ ಕಿ.ಮೀ.ಗೆ 2 ರೂ. ಬಾಡಿಗೆ ನೀಡ ಬೇ ಕಾ ಗು ತ್ತದೆ. ಟಾಟಾ ಟಿಗಾರ್‌ ಮತ್ತು ಮಹೀಂದ್ರಾ ಇ-ವೆರಿಟೋ ಕಾರುಗಳನ್ನು 120 ಕಿ.ಮೀ.ನಷ್ಟು ದೂರ ಕ್ರಮಿಸಲು ಬಳಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next