ಹೊಸದಿಲ್ಲಿ: ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರು, ಇ-ಬಸ್‌ಗಳ ಅನಂತರ ಇದೀಗ ಎಲೆಕ್ಟ್ರಿಕ್ ಬೋಟ್‌ಗಳನ್ನು ನೀರಿಗಿಳಿಸಲು ಸಿದ್ಧತೆ ನಡೆದಿದೆ.
ಭಾರತದಲ್ಲಿ ನದಿ ದಡದಲ್ಲಿರುವಂತಹ ಪ್ರಮುಖ ಐದು ನಗರಗಳಲ್ಲಿ ಎಲೆಕ್ಟ್ರಿಕ್ ಬೋಟ್‌ಗಳನ್ನು ಪರಿಚಯಿಸಲು ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ ಮುಂದಾಗಿದೆ.
ಮೊದಲ ಹಂತದಲ್ಲಿ ಅಸ್ಸಾಂನ ಗುವಾಹಾಟಿ ಮತ್ತು ದಿಬ್ರುಗಢ, ಉತ್ತರ ಪ್ರದೇಶದ ವಾರಾಣಸಿ, ಪಶ್ಚಿಮ ಬಂಗಾಲದ ಕೋಲ್ಕತಾ ಮತ್ತು ಬಿಹಾರದ ಪಟ್ನಾದಲ್ಲಿ ಎಲೆಕ್ಟ್ರಿಕ್ ಬೋಟ್ ಸಂಚಾರ ನಡೆಸಲಿವೆ.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯು ಎಲೆಕ್ಟ್ರಿಕ್ ಬೋಟ್‌ಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ 23 ಬೋಟ್‌ಗಳನ್ನು ಕೊಚ್ಚಿ ಮೆಟ್ರೋ ರೈಲ್ ಲಿ. ಸಂಸ್ಥೆ ತನ್ನದಾಗಿಸಿಕೊಂಡಿದೆ.
ಈ ಬೋಟ್‌ಗಳು 100 ಜನರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿರಲಿವೆ ಎನ್ನಲಾಗಿದೆ.