Advertisement

ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!

01:50 AM Jan 16, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಈಗ ಚುನಾವಣೆ ನಡೆದರೂ ಶೇ.58 ಮಂದಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತ ಚಲಾಯಿಸಲಿದ್ದಾರೆ! ಶೇ.28.1ಮಂದಿ ಯುಪಿಎಗೆ, ಶೇ.13.5 ಮಂದಿ ತೃತೀಯರಂಗ ಬೆಂಬಲಿಸಲಿದ್ದಾರೆ ಎಂದು ಎಬಿಪಿ ನ್ಯೂಸ್‌’ ಸಿ ವೋಟರ್‌ ನಡೆಸಿದ  ಸರ್ವೇಯಲ್ಲಿ ಬಹಿರಂಗವಾಗಿದೆ.

Advertisement

ಮೋದಿ ಕೆಲಸ ಶೇ.71 ಮಂದಿಗೆ ಹಿಡಿಸಿದೆ. ಶೇ.26 ಮಂದಿ ಅತೃಪ್ತಿ ಸೂಚಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಯಾರೂ ಪರ್ಯಾಯ ಇಲ್ಲ  ಎಂದು ಶೇ.50 ಮಂದಿ ಪ್ರತಿಕ್ರಿಯಿಸಿದ್ದಾರೆ. ಶೇ.25.6 ಮಂದಿ ರಾಹುಲ್‌ ಗಾಂಧಿ ಹೆಸರು ಪ್ರಸ್ತಾವಿಸಿದ್ದಾರೆ. ಕಾಂಗ್ರೆಸ್‌ ನೇತೃತ್ವ ವಿಚಾರದಲ್ಲಿ ರಾಹುಲ್‌ಗಿಂತ ಪ್ರಿಯಾಂಕಾ ಗಾಂಧಿ ಶೇ.2.4 ಹೆಚ್ಚು ಅಭಿಮತ ಸಂಪಾದಿಸಿದ್ದಾರೆ. ರೈತರ ಪ್ರತಿಭಟನೆಯಿಂದ ಕೇಂದ್ರದ ಇಮೇಜ್‌ಗೆ ಶೇ.52.4ರಷ್ಟು ಧ‌ಕ್ಕೆಯಾಗಿದೆ ಎಂದಿದೆ.

ಉತ್ತಮ, ಕಳಪೆ ಸಿಎಂ: ದೇಶದ ಉತ್ತಮ ಸಿಎಂ ಪಟ್ಟಿಯಲ್ಲಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಆಂಧ್ರ ಸಿಎಂ ಜಗನ್‌ಮೋಹನ್‌ ರೆಡಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಕಳಪೆ ಸಿಎಂ ಸಾಲಿನಲ್ಲಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಹರಿಯಾಣ ಸಿಎಂ ಲಾಲ್‌ ಖಟ್ಟರ್‌ ಮತ್ತು ಪಂಜಾಬ್‌ ಸಿಎಂ ಕ್ಯಾ| ಅಮರಿಂದರ್‌ ಸಿಂಗ್‌ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next