Advertisement

ಚುನಾವಣೆಗೆ 24ಲಕ್ಷ ಇವಿಎಂಗಳು ಬೇಕು

02:16 PM May 28, 2018 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆ ಏಕಕಾಲಕ್ಕೆ ನಡೆಯುವುದಿದ್ದರೆ 24 ಲಕ್ಷ ವಿದ್ಯುನ್ಮಾನ ಮತ ಯಂತ್ರಗಳು ಚುನಾವಣಾ ಆಯೋಗಕ್ಕೆ ಬೇಕಾಗುತ್ತವೆ. ಮೇ 16ರಂದು ಕಾನೂನು ಆಯೋಗದ ಜತೆ ನಡೆದ ಸಭೆಯ ವೇಳೆ ಈ ಅಂಶವನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಿವರಿಸಿದ್ದಾರೆ. ಹೆಚ್ಚುವರಿಯಾಗಿ ಬೇಕಾಗಿರುವ 12 ಲಕ್ಷ ಇವಿಎಂಗಳನ್ನು ಖರೀದಿಸಲು 4,500 ಕೋಟಿ ರೂ. ಅಗತ್ಯವಿದೆ. 

Advertisement

ಏಕಕಾಲದಲ್ಲಿ ಎರಡೂ ಚುನಾವಣೆ ನಡೆದಲ್ಲಿ 1 ಮತಗಟ್ಟೆಯಲ್ಲಿ ಮತ ದೃಢೀಕರಣ ವ್ಯವಸ್ಥೆ ಇರುವ 2 ಇವಿಎಂಗಳನ್ನು ಇರಿಸಬೇಕಾಗುತ್ತದೆ. ಒಂದನ್ನು ಲೋಕಸಭೆ, ಮತ್ತೂಂದನ್ನು ವಿಧಾನ ಸಭೆ ಚುನಾವಣೆಗಾಗಿ ಬಳಕೆ ಮಾಡಬೇಕಾ ಗುತ್ತದೆ. ಲೋಕಸಭೆ ಚುನಾವಣೆಗೆ ಒಂದು ಮತದಾನ ಕೇಂದ್ರಕ್ಕೆ ಐವರು ಸಿಬಂದಿ ನೇಮಕ ಮಾಡಿದರೆ, ಎರಡು ಚುನಾವಣೆ ನಡೆದರೆ ಪ್ರತಿ ಕೇಂದ್ರಕ್ಕೆ  ಹೆಚ್ಚುವರಿಯಾಗಿ 2 ಅಂದರೆ ಒಟ್ಟಾಗಿ ಏಳು ಮಂದಿಯ ಅಗತ್ಯವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next