Advertisement

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ :ಸುರೇಂದ್ರನಾಥ

01:00 AM Mar 12, 2019 | Team Udayavani |

ಉಡುಪಿ: ಪ್ರಜಾಪ್ರಭುತ್ವದ ಸಾಫ‌‌ಲ್ಯತೆಯನ್ನು ಅಳೆಯುವ ನಿಜವಾದ ಮಾಪನವೇ ಚುನಾವಣೆ. ಚುನಾವಣೆ ಅತ್ಯಂತ ಪ್ರಾಮಾಣಿಕ, ಪಾರದರ್ಶಕತೆಯಿಂದ ನಡೆಯಬೇಕೆನ್ನುವುದು ಎಲ್ಲರ ಆಶಯ. ಇದಕ್ಕಾಗಿಯೇ ಚುನಾವಣಾ ಆಯೋಗ  ಜಾರಿಗೊಳಿಸುವ  ನೀತಿ ಸಂಹಿತೆಯನ್ನು  ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ  ಪ್ರತಿಯೊಬ್ಬ  ಮತದಾರನ ಪಾತ್ರವೂ ಇದೆ ಎಂದು  ಎಂ.ಜಿ.ಎಂ.ಕಾಲೇಜಿನ  ರಾಜ್ಯಸಭಾ ವಿಭಾಗದ ಮುಖ್ಯಸ್ಥ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ  ಹೇಳಿದರು.

Advertisement

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ  ಯುವ ಸಬಲೀಕರಣ ಘಟಕದ ಆಶ್ರಯದಲ್ಲಿ  ಮತದಾನದ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಬೇಕಾದರೆ ಯುವ ಮತದಾರರು ಅತ್ಯಂತ ಮುತುವರ್ಜಿಯಿಂದ ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿದೆ ಎಂದು ಅವರು  ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಪ್ರಕಾಶ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ರೋಚನಿ ರಾವ್‌ ಸ್ವಾಗತಿಸಿದರು, ಡಿಯೋನ್‌ ಕ್ಲೈವ್‌ ಡಿ ಸೋಜಾ ಪರಿಚಯಿಸಿದರು. ಐಶ್ವರ್ಯ ನಿರೂಪಿಸಿದರು. ಶ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next