Advertisement

ಚುನಾವಣೆ:  ಸಭೆಗಳ ಸಂಪೂರ್ಣ ಚಿತ್ರೀಕರಣ: ಜಿಲ್ಲಾಧಿಕಾರಿ ಸೂಚನೆ

12:30 AM Mar 10, 2019 | |

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ನಡೆಯುವ ಎಲ್ಲ ಸಭೆ ಸಮಾರಂಭಗಳನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಿ ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

Advertisement

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋ ಜಿತರಾದ ವಿವಿಧ ನೋಡಲ್‌ ಅಧಿಕಾರಿಗಳ ಮತ್ತು ಸಮಿತಿಗಳ ಸಭೆಯಲ್ಲಿ ಮಾತನಾಡಿದರು.

ಪ್ರತಿ ವೆಚ್ಚಕ್ಕೂ ಲೆಕ್ಕ 
ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಭೆ ಸಮಾರಂಭಗಳಿಗೂ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಚುನಾವಣಾ ಸಭೆ ಆರಂಭವಾಗುವುದಕ್ಕಿಂತ ಒಂದು ಗಂಟೆ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಬಂದು ನಿಗಾ ಇಡಬೇಕು. ಸಮಾರಂಭದಲ್ಲಿ ಬಳಸುವ ಕುರ್ಚಿ, ವೇದಿಕೆ, ಧ್ವನಿವರ್ಧಕ, ಶಾಮಿಯಾನ, ವಾಹನಗಳು, ತಿಂಡಿ ತಿನಿಸು ಸೇರಿದಂತೆ ಪ್ರತಿಯೊಂದು ವೆಚ್ಚವನ್ನೂ ಚುನಾವಣಾ ಆಯೋಗ ನಿಗದಿಪಡಿಸಿದ ದರದಂತೆ ಅಭ್ಯರ್ಥಿಯ ವೆಚ್ಚ ಲೆಕ್ಕಕ್ಕೆ ಸೇರಿಸಬೇಕಿದೆ ಎಂದು ಅವರು ತಿಳಿಸಿದರು.

ಒಂದು ಗಂಟೆ ಮುಂಚೆ ಧ್ವಜ ಕೂಡದು 
ಆಅಭ್ಯರ್ಥಿಗಳು ಅಥವಾ ಅವರ ಪರ ಹಾಕುವ ಬ್ಯಾನರ್‌, ಫ್ಲೆಕ್ಸ್‌, ಹೋರ್ಡಿಂಗ್‌ಗಳಿಗೆ ಅನುಮತಿ ಪಡೆ ಯಲೇಬೇಕು. ಅನುಮತಿ ನೀಡಿದ ಗಾತ್ರಕ್ಕಿಂತ ಒಂಚೂರು ವ್ಯತ್ಯಾಸ ಕಂಡುಬಂದರೂ ಪರವಾನಿಗೆಯ ಉಲ್ಲಂಘನೆ ಎಂದೇ ತಿಳಿದು ಕ್ರಮ ಕೈಗೊಳ್ಳಲಾಗುವುದು. ಸಭೆ ಆರಂಭವಾಗುವ ಒಂದು ಗಂಟೆಗಿಂತ ಮೊದಲು ಅಲ್ಲಿ ಪಕ್ಷಗಳ ಧ್ವಜಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಚುನಾವಣೆ ಸಂದರ್ಭ ನಡೆಯುವ ಯಾವುದೇ ಉತ್ಸವ ಅಥವಾ ಜಯಂತಿ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನಹರಿಸ ಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ರಾಜಕೀಯ ಸಭೆಗಳ ವೀಡಿಯೋ ಚಿತ್ರೀಕರಣ ನಡೆಸಿದ ಬಳಿಕ ಅವುಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಯಲ್ಲಿಯೇ ಸಂಕಲನ ಮಾಡಬೇಕು. ಯಾವುದೇ ಕಾರಣಕ್ಕೆ ಹೊರಗಡೆ ಖಾಸಗೀ ಸ್ಥಳಗಳಲ್ಲಿ ಇವುಗಳನ್ನು ಸಂಕಲನ ಮಾಡುವಂತಿಲ್ಲ ಎಂದು ಹೇಳಿದರು. ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್‌, ವಿವಿಧ ಕ್ಷೇತ್ರಗಳ ಸಹಾಯಕ ಚುನಾ ವಣಾಧಿಕಾರಿಗಳು, ನೋಡಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next