Advertisement

ಹಕ್ಕುಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ

05:17 PM Dec 06, 2020 | Adarsha |

ಹಿರೇಕೆರೂರ: ನಿವೇಶನದ ಹಕ್ಕುಪತ್ರ ನೀಡಲು ಅಧಿ ಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ತಾಲೂಕಿನ ತಾವರಗಿ ಗ್ರಾಮಸ್ಥರು, ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಕೈಗೊಂಡರು.

Advertisement

ಗ್ರಾಮದ ಹೊಂಡದ ಸಮೀಪದ ಜನತಾ ಪ್ಲಾಟ್‌ ಹಾಗೂ ಕಡೆಕೇರಿಯ ಜನವಸತಿ ಪ್ರದೇಶಗಳಲ್ಲಿ ಸುಮಾರು 45 ವರ್ಷಗಳಿಂದ 65 ಕುಟುಂಬಗಳು ವಾಸವಾಗಿವೆ. ಹಿಂದುಳಿದ ಜನಾಂಗಕ್ಕೆ ಸೇರಿರುವ ಈ ಕುಟುಂಬಗಳು ಗ್ರಾಮ ಪಂಚಾಯಿತಿಯಿಂದ ಹಂಚಿಕೆಯಾದ ನಿವೇಶನಗಳಲ್ಲಿ ವಾಸಿಸಿತ್ತಾ ಬಂದಿದ್ದರೂ ಇಲ್ಲಿಯವರೆಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಪಂಚಾಯತ ದಾಖಲೆಗಳಲ್ಲಿ ಹೆಸರಿದ್ದರೂ ಇ-ಸ್ವತ್ತು ಮಾಡಲು ಬರುವುದಿಲ್ಲ ಎಂದು ಪಿಡಿಒ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ನಾನು ಬಿಟ್ಟು ಬಂದ ಮೇಲೆ ಜೆಡಿಎಸ್ ಶಾಸಕರ ಸಂಖ್ಯೆ ಏರಲೇ ಇಲ್ಲ: ಹೆಚ್ ಡಿಕೆಗೆ ಸಿದ್ದು ಟಾಂಗ್

ಹಕ್ಕುಪತ್ರ ನೀಡದಿದ್ದರೆ ಗ್ರಾಪಂ ಚುನಾವಣೆಯಲ್ಲಿ ಮತ ಚಲಾಯಿಸದೇ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next