Advertisement

ಪಾಲಿಕೆ ಚುನಾವಣೆ: ಕಣದಲ್ಲಿ 202 ಅಭ್ಯರ್ಥಿಗಳು

04:22 PM Aug 25, 2018 | |

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರಿದ್ದು ಒಟ್ಟು 202 ಅಭ್ಯರ್ಥಿಗಳು ಈಗ ಕಣದಲ್ಲಿದ್ದಾರೆ. 14 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು, ಒಬ್ಬರು ಜೆಡಿಎಸ್‌ ಅಭ್ಯರ್ಥಿ ಸೇರಿ ಒಟ್ಟು 14 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ವಾರ್ಡ್‌ ನಂ.1, 8, 32ರಲ್ಲಿ ತಲಾ ಇಬ್ಬರು ವಾಪಸ್‌ ಪಡೆದರೆ, ವಾರ್ಡ್‌ 5, 7, 9, 14, 16, 21, 27, 28ರಲ್ಲಿ ತಲಾ ಒಬ್ಬರು ವಾಪಸ್‌ ಪಡೆದಿದ್ದಾರೆ. 21ನೇ ವಾರ್ಡಿನ ಜೆಡಿಎಸ್‌ ಅಭ್ಯರ್ಥಿ ಲಕ್ಷ್ಮೀ ನರಸಿಂಹಮೂರ್ತಿ ನಾಮಪತ್ರ ಹಿಂಪಡೆಯುವ ಮೂಲಕ ಪಕ್ಷಕ್ಕೆ ಶಾಕ್‌ ನೀಡಿದ್ದಾರೆ. ಈ ವಾರ್ಡನಲ್ಲಿ ಕಾಂಗ್ರೆಸ್‌ನಿಂದ ಕಳೆದ ಬಾರಿ ಕೆಜೆಪಿಯಿಂದ ಆಯ್ಕೆಯಾಗಿದ್ದ ಐಡಿಯಲ್‌ ಗೋಪಿ ಅವರ ಪತ್ನಿ ಪವಿತ್ರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಮೀನಾ ಗೋವಿಂದರಾಜ್‌ ಕಣದಲ್ಲಿದ್ದಾರೆ.

Advertisement

ಬಿಜೆಪಿ ಎರಡು ವಾರ್ಡ್‌ಗಳಲ್ಲಿ ಬಂಡಾಯ ಶಮನ ಮಾಡಲು ಯಶಸ್ವಿಯಾಗಿದ್ದು 7ನೇ ವಾರ್ಡಿನ ಬಂಡಾಯ ಅಭ್ಯರ್ಥಿ ಅರ್ಚನಾ ಬಳ್ಳೇಕೆರೆ ನಾಮಪತ್ರ ಹಿಂಪಡೆಯುವುದರೊಂದಿಗೆ ಅನಿತಾ ರವಿಶಂಕರ್‌ ಹಾದಿ ಸುಗಮಗೊಂಡಿದೆ. 8ನೇ ವಾರ್ಡಿನ ಮಾಲತೇಶ್‌ ನಾಮಪತ್ರ ಹಿಂಪಡೆದಿದ್ದು ನಗರಸಭೆ ಮಾಜಿ ಅಧ್ಯಕ್ಷ ಎಸ್‌.ಎನ್‌. ಚನ್ನಬಸಪ್ಪ ಹಾದಿ ಸುಗಮಗೊಂಡಿದೆ. ಆದರೆ ಆಜಾದ್‌ನಗರ ವಾರ್ಡ್‌ನಲ್ಲಿ ಬಿಜೆಪಿ ಕಾರ್ಯಕರ್ತೆ ವತ್ಸಲಾ ಹಾಗೂ ಮೂರನೇ ವಾರ್ಡಿನಲ್ಲಿ ಬಿಜೆಪಿ ಮುಖಂಡ ಧೀರರಾಜ್‌ ಹೊನ್ನವಿಲೆ ಕಣದಲ್ಲಿರುವುದು ಹಾಗೂ 2ನೇ ವಾರ್ಡಿನಿಂದ ಭಗವಾನ್‌ ಕಣದಲ್ಲಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಎರಡು ವಾರ್ಡಲ್ಲಿ ನೇರ ಹಣಾಹಣಿ: ರವೀಂದ್ರ ನಗರ ವಾರ್ಡ್‌ ನಂ.10ರಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಸವಿತಾ ಹಾಗೂ ಬಿಜೆಪಿಯಿಂದ ಆರತಿ ಆ.ಮ.ಪ್ರಕಾಶ್‌ ಕಣದಲ್ಲಿದ್ದಾರೆ. ದುರ್ಗಿಗುಡಿ ವಾರ್ಡ್‌ 21ರಲ್ಲಿಯೂ ನೇರ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಲಕ್ಷ್ಮೀ ನಾಮಪತ್ರ ವಾಪಾಸ್‌ ಪಡೆದ ಹಿನ್ನೆಲೆ ಕಾಂಗ್ರೆಸ್‌ನ ಪವಿತ್ರಾ ಹಾಗೂ ಮೀನಾಕ್ಷಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಜೆಡಿಎಸ್‌ ಬೆಂಬಲ: ಬಸವನಗುಡಿ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪತ್ರಿಕಾ ಛಾಯಾಗ್ರಾಹಕ ನಂದನ್‌ಗೆ ಜೆಡಿಎಸ್‌ ಬೆಂಬಲ ವ್ಯಕ್ತಪಡಿಸಿದೆ. ಈ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ಘೋಷಣೆ ಮಾಡಿರಲಿಲ್ಲ. ಮುಸ್ಲಿಮರಿಗೆ ಸಿಂಹಪಾಲು: ಮೂರು ಪಕ್ಷಗಳಿಂದಲೂ ಒಟ್ಟು 17 ಮಂದಿ ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ತಲಾ 8 ಮಂದಿಗೆ ಹಾಗೂ ಬಿಜೆಪಿಯಿಂದ ಒಬ್ಬರಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಎಸ್‌ಡಿಪಿಐ ಕೂಡ 8 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಮುಸ್ಲಿಮರ ಬಳಿಕ ಲಿಂಗಾಯತ ಹಾಗೂ ಕುರುಬರು ಹೆಚ್ಚಿನ ಅವಕಾಶ ಪಡೆದಿದ್ದಾರೆ. ಮೂರು ಪಕ್ಷಗಳಿಂದ 9 ಅಭ್ಯರ್ಥಿಗಳಿದ್ದಾರೆ. ಕುರುಬ ಸ ಮಾಜಕ್ಕೆಜೆಡಿಎಸ್‌ 2, ಕಾಂಗ್ರೆಸ್‌ 4, ಬಿಜೆಪಿ 3 ಟಿಕೆಟ್‌ ನೀಡಿದರೆ, ಲಿಂಗಾಯತ ಸಮಾಜಕ್ಕೆ ಬಿಜೆಪಿ 6, ಕಾಂಗ್ರೆಸ್‌ 3 ಟಿಕೆಟ್‌ ನೀಡಿದೆ. ಜೆಡಿಎಸ್‌ನಿಂದ ಲಿಂಗಾಯತ ಅಭ್ಯರ್ಥಿಗಳಿಲ್ಲ. ಒಕ್ಕಲಿಗರಿಗೆ 8, ತಮಿಳರಿಗೆ 7, ಉಪ್ಪಾರ 6, ಸಾಧು ಶೆಟ್ಟಿ 6, ಮಾದಿಗ 5 ಟಿಕೆಟ್‌ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next