ಬ್ಯಾಂಕಾಕ್: ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂ ಟನ್ ಪಂದ್ಯಾವಳಿಯನ್ನು ಭಾರತದ ಎಚ್.ಎಸ್. ಪ್ರಣಯ್ ಸೋಲಿ ನೊಂದಿಗೆ ಆರಂಭಿಸಿದ್ದಾರೆ.
“ಎ’ ವಿಭಾಗದ ಮೊದಲ ಪಂದ್ಯದಲ್ಲಿ ಅವರು ಜಪಾನ್ನ ಕೊಡೈ ನರವೋಕ ವಿರುದ್ಧ ದಿಟ್ಟ ಹೋರಾಟ ನೀಡಿಯೂ 11-21, 21-9, 17-21 ಅಂತರದಿಂದ ಪರಾಭವಗೊಂಡರು.
12ನೇ ರ್ಯಾಂಕಿಂಗ್ ಆಟಗಾರನಾದ ಪ್ರಣಯ್ ಮೊದಲ ಗೇಮ್ ಕಳೆದುಕೊಂಡ ಬಳಿಕ ಅಮೋಘ ಚೇತರಿಕೆ ಕಂಡರು. ಇದನ್ನು 21-9 ಅಂತರದಿಂದ ತಮ್ಮದಾಗಿಸಿಕೊಂಡರು. ಆದರೆ ನಿರ್ಣಾಯಕ ಗೇಮ್ನಲ್ಲಿ ಮತ್ತೆ ಜಪಾನಿ ಆಟಗಾರನ ಕೈ ಮೇಲಾಯಿತು.
ಇದರೊಂದಿಗೆ ನರವೋಕ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಪ್ರಣಯ್ ಪರಾಭವಗೊಂಡಂತಾಯಿತು. ಮೊದಲ ಸೋಲು ಜುಲೈಯಲ್ಲಿ ಆಡಲಾದ ಸಿಂಗಾಪುರ್ ಓಪನ್ನಲ್ಲಿ ಎದುರಾಗಿತ್ತು.