Advertisement

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಮತ ಎಣಿಕೆ: ರಾ. ಹೆದ್ದಾರಿ 66ರಲ್ಲಿ ಸಂಚಾರ ವ್ಯತ್ಯಯ ಸಾಧ್ಯತೆ

11:34 PM May 12, 2023 | Team Udayavani |

ಮಂಗಳೂರು: ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮತ ಎಣಿಕೆ ನಡೆಯಲಿರುವುದರಿಂದ ಮೇ 13ರಂದು ಬೆಳಗ್ಗೆ 6ರಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ರಸ್ತೆಯಲ್ಲಿ ಉಡುಪಿ ಮತ್ತು ಮಂಗಳೂರು ಕಡೆಗೆ ಸಂಚರಿಸುವ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸುವಂತೆೆ ಮಂಗಳೂರು ಪೊಲೀಸ್‌ ಆಯುಕ್ತರು ಮನವಿ ಮಾಡಿದ್ದಾರೆ.

Advertisement

ವಾಹನ ನಿಲುಗಡೆ ನಿಷೇಧ: ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ ಎನ್‌ಐಟಿಕೆ ಬಳಿಯ ಸುಪ್ರೀಂ ಮಹಲ್‌ ಸಮುದಾಯ ಭವನ ದಿಂದ ಟೋಲ್‌ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಮತ್ತು ಹೆದ್ದಾರಿಗೆ ತಾಗಿಕೊಂಡಿ ರುವ ಸರ್ವೀಸ್‌ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸುವವಂತಿಲ್ಲ.

ವಾಹನ ನಿಲುಗಡೆ ಸ್ಥಳ: ಮಂಗಳೂರು ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಎನ್‌ಐಟಿಕೆ ಜಂಕ್ಷನ್‌ ಬಳಿ ಎಡಕ್ಕೆ ತಿರುಗಿ ಎನ್‌ಐಟಿಕೆ ಕ್ಯಾಂಪಸ್‌ನ ಅಂಡರ್‌ಪಾಸ್‌ ಮುಖಾಂತರ ಸಾಗಿ ನಾಲ್ಕು ಚಕ್ರ ವಾಹನಗಳನ್ನು ಎನ್‌ಐಟಿಕೆ ವಸತಿಗೃಹದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನಗಳನ್ನು ಎನ್‌ಐಟಿಕೆ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಮೈದಾನದಲ್ಲಿ ನಿಲುಗಡೆ ಮಾಡಬೇಕು ಅಥವಾ ಸುರತ್ಕಲ್‌ ಸುಪ್ರೀಂ ಮಹಲ್‌ ಸಮುದಾಯ ಭವನ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಎಡಬದಿಯ ತಡಂಬೈಲ್‌ ಸದಾಶಿವ ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು.

ಮೂಲ್ಕಿ ಕಡೆಯಿಂದ ಬರುವ ಸಾರ್ವಜನಿಕರು ಎನ್‌ಐಟಿಕೆ ಜಂಕ್ಷನ್‌ ಬಳಿ ಬಲಕ್ಕೆ ತಿರುಗಿ ಎನ್‌ಐಟಿಕೆ ಕ್ಯಾಂಪಸ್‌ನ ಅಂಡರ್‌ಪಾಸ್‌ ಮುಖಾಂತರ ಸಾಗಿ ನಾಲ್ಕು ಚಕ್ರ ವಾಹನಗಳನ್ನು ಎನ್‌ಐಟಿಕೆ ವಸತಿಗೃಹದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನಗಳನ್ನು ಎನ್‌ಐಟಿಕೆ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಮೈದಾನದಲ್ಲಿ ನಿಲುಗಡೆ ಮಾಡಬೇಕು ಅಥವಾ ರಾಷ್ಟ್ರೀಯ ಹೆದ್ದಾರಿ ಸುಪ್ರೀಂ ಮಹಲ್‌ ಸಮುದಾಯ ಭವನ ಬಳಿ ಯು-ಟರ್ನ್ ಮಾಡಿ ಎಡಬದಿಯ ತಡಂಬೈಲ್‌ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next