Advertisement
ಮೂರು ರಾಜ್ಯಗಳಲ್ಲಿ ಬಿಜೆಪಿಯ ವಿಜಯ ಗಾಥೆ ದೇಶಾದ್ಯಂತ ಮಾತ್ರವಲ್ಲ, ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆಯಲಿದೆ ಎಂದರು. ಈ ಫಲಿ ತಾಂಶ ದಿಂದಾಗಿ ಜಗತ್ತಿನಲ್ಲಿ ಇರುವ ಬಂಡ ವಾಳ ಹೂಡಿಕೆದಾರರಿಗೆ ಭಾರತದಲ್ಲಿನ ಸದೃಢ ಸರಕಾರ ಇದೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆಮಾಡಲು ಅವಕಾಶ ಮಾಡಿಕೊಡಲಿದೆ ಎಂದರು. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಿದೆ. ಇದರಿಂದಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಕೂಡ ಬಿಜೆಪಿಯೇ ಅಧಿಕಾರ ಉಳಿಸಿಕೊಂಡು ದಾಖಲೆ ಸ್ಥಾಪಿಸಲಿದೆ ಎಂದರು ಪ್ರಧಾನಿ ನರೇಂದ್ರ ಮೋದಿ.
Related Articles
Advertisement
ರಾಜಕೀಯ ಬೇಡ: ದೇಶ ವಿರೋಧಿ ಶಕ್ತಿಗಳು ಹೆಚ್ಚು ಬಲಗೊಳ್ಳಲು ಅವಕಾಶ ಕೊಡುವುದು ಬೇಡ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಿಗೆ ಪ್ರಧಾನಿ ಕಿವಿಮಾತು ಹೇಳಿ ದ್ದಾರೆ. ಅದರ ಮೂಲಕ ದೇಶವನ್ನು ದುರ್ಬಲ ಗೊಳಿ ಸುವ ಪ್ರಯತ್ನ ಬೇಡ ಎಂದರು. ವೇದಿಕೆಯ ಮೇಲೆ ಒಟ್ಟಾಗಿ ಕೈಜೋಡಿಸಿಕೊಂಡು ನಿಲ್ಲುವುದ ರಿಂದ ಮಾಧ್ಯಮಗಳಲ್ಲಿ ಉತ್ತಮ ರೀತಿಯಲ್ಲಿ ಫೋಟೋ ಮತ್ತು ಸುದ್ದಿಗಳಿಗೆ ಕಾರಣವಾಗಲಿದೆ. ಈ ಅಂಶದಿಂದ ಜನರ ಮನಸ್ಸು ಗೆಲ್ಲಲು ಯಾವುದೇ ರೀತಿಯ ನೆರವು ನೀಡಲಾರದು ಎಂದು ವಿಪಕ್ಷಗಳ ಒಕ್ಕೂಟಕ್ಕೆ ಟಾಂಗ್ ನೀಡಿದ್ದಾರೆ.
ಅನುಷ್ಠಾನಕ್ಕಾಗಿ ನೀತಿ: ಬಿಜೆಪಿ ನೇತೃತ್ವದ ಸರಕಾರ ಗಳು ದೇಶದ ಅಭಿವೃದ್ಧಿಗಾಗಿ ನೀತಿ ನಿರೂಪಣೆ ಮಾಡಿ, ಅದನ್ನು ಕ್ರಮ ಬದ್ಧವಾಗಿ ಅನುಷ್ಠಾನ ಮಾಡು ತ್ತಿವೆ ಎಂದರು. ಜತೆಗೆ ಅರ್ಹ ಫಲಾನುಭವಿಗಳಿಗೆ ತಲಪು ವಂತೆ ಮಾಡುತ್ತದೆ ಎಂದರು. ಈ ಫಲಿ ತಾಂಶ ದಿಂದ ಮತದಾರರು ಸುಮ್ಮನೇ ಮಾತ ನಾಡುವವರ ಬಗ್ಗೆ ಒಲವು ಹೊಂದಿಲ್ಲ. ಅವರ ಪರ ನಿಲುವು ಹೊಂದಿ ರುವವರನ್ನೇ ಆಯ್ಕೆ ಮಾಡು ತ್ತಾರೆ ಎನ್ನುವ ಅಂಶವೂ ಈ ಫಲಿ ತಾಂಶದಿಂದ ಸಾಬೀತಾಗಿದೆ ಎಂದು ಮೋದಿ ಹೇಳಿದರು.
ಕೃತಜ್ಞತೆ: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾ ಣ ದಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಜಯ ಗಳಿಸಿ ರುವು ದನ್ನು ವಿಶೇಷವಾಗಿ ಪ್ರಸ್ತಾವ ಮಾಡಿದ ಪ್ರಧಾನಿ, ಬಿಜೆಪಿ ಆ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡ ಲಿದೆ. ಅದಕ್ಕಾಗಿ ಸಿಗುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಲಿದೆ ಎಂದರು.
ದೇಶದಲ್ಲಿ ನಾಲ್ಕೇ ವರ್ಗಬಿಹಾರದಲ್ಲಿ ಜಾತಿ ಗಣತಿ ನಡೆಸಿ, ಅದರಿಂದ ಪ್ರೇರಣೆಗೊಂಡು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸುತ್ತಿದ್ದವು. ಆ ಹೇಳಿಕೆಯನ್ನು ಪ್ರಬಲ ವಾಗಿ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ “ದೇಶವನ್ನು ಜಾತಿಯ ಆಧಾರದಲ್ಲಿ ವಿಭಜನೆ ಮಾಡಲು ಹೊರಟವರಿಗೆ ಹಿನ್ನಡೆಯಾಗಿದೆ’ ಎಂದರು. ದೇಶದಲ್ಲಿ ಮಹಿಳೆಯರು, ಯುವ ಸಮುದಾಯ, ರೈತರು ಮತ್ತು ಬಡವರು ಎಂಬ ನಾಲ್ಕೇ ವರ್ಗಗಳು ಇವೆ ಎಂದರು. ಈ ನಾಲ್ಕು ವರ್ಗಗಳು ಅಭಿವೃದ್ಧಿಗೊಂಡಾಗ ಮಾತ್ರ ದೇಶದಲ್ಲಿ ಸುಭದ್ರಗೊಳ್ಳಲಿದೆ. ಬಿಜೆಪಿ ನೇತೃತ್ವದ ಸರಕಾರಗಳು ಜಾರಿಗೊಳಿಸಿದ ಯೋಜನೆಯ ಬಗ್ಗೆ ಮಹಿಳೆಯರು, ಯುವ ಸಮುದಾಯ, ರೈತರು ಮತ್ತು ಬಡವರು ಹೆಚ್ಚು ಆಸಕ್ತಿ ವಹಿಸಿ, ನಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ಹೀಗಾಗಿ ಈ ಫಲಿತಾಂಶದಿಂದ ಪ್ರತೀ ವರ್ಗದ ಜನರಿಗೂ ಜಯ ಸಾಧಿಸಿದಂತೆ ಆಗಿದೆ ಎಂದರು. ಮೂರು ರಾಜ್ಯಗಳ ಜತೆ ನಿರಂತರ ಸಂಪರ್ಕ
“ಮಿಚಾಂಗ್’ ಚಂಡಮಾರುತದ ಭೀತಿಯಲ್ಲಿರುವ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಒಡಿಶಾ ಸರಕಾರಗಳ ಜತೆಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅಷ್ಟೂ ರಾಜ್ಯಗಳಲ್ಲಿ ಇರುವ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಸರಕಾರಗಳಿಗೆ ನೆರವು ನೀಡುವಂತೆ ಮೋದಿ ಸೂಚನೆ ನೀಡಿದ್ದಾರೆ. ಇದರ ಜತೆಗೆ ಅಧಿಕಾರಿಗಳು ಕೂಡ ಜನರ ನೆರವಿಗೆ ಸದಾ ಸನ್ನದ್ಧರಾಗಿ ಇರುವಂತೆ ಆದೇಶ ನೀಡಿದ್ದಾರೆ. ತಿದ್ದಿಕೊಳ್ಳಿ, ಇಲ್ಲದಿದ್ದರೆ…
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಹೊಂದಿರುವ ನಿಲುವುಗಳ ಬಗ್ಗೆ ನೇರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ “ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ. ಇಲ್ಲದಿದ್ದರೆ, ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಫಲಿತಾಂಶ ದುರಹಂಕಾರದ ನಿಲುವು ಹಾಗೂ ವರ್ತನೆ ಹೊಂದಿರುವ ವಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ.ಗೆ ಎಚ್ಚರಿಕೆಯ ಗಂಟೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಭ್ರಷ್ಟಾಚಾರ ನಡೆಸಿದವರ ಜತೆಗೆ ಬೆಂಬಲವಾಗಿ ನಿಲ್ಲುವವರಿಗೆ ನಾಚಿಕೆಯಾಗಬೇಕು. ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ರವಿವಾರ ಪ್ರಕಟಗೊಂಡಿರುವ ಫಲಿತಾಂಶ ಅಭಿವೃದ್ಧಿ ವಿರೋಧಿಗಳಿಗೆ ಒಂದು ಪಾಠವಾಗಿದೆ. ಹೀಗಾಗಿ ವಿಪಕ್ಷಗಳು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಜನರಿಂದ ತಿರಸ್ಕೃತರಾಗುತ್ತಾರೆ ಎಂದರು.