Advertisement

ಮೇಲ್ಮನೆ ಪ್ರವೇಶಕ್ಕೆ ಇಂದು ಮತದಾನ

12:17 PM Dec 10, 2021 | Team Udayavani |

ಮೈಸೂರು: ಭಾರತೀಯ ಜನತಾಪಕ್ಷ, ಕಾಂಗ್ರೆಸ್‌, ಜಾತ್ಯತೀತ ಜನತಾದಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ. ಮತದಾನ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ.

Advertisement

ಬಿಜೆಪಿಯ ಆರ್‌.ರಘು ಕೌಟಿಲ್ಯ, ಕಾಂಗ್ರೆಸ್ಸಿನ ಡಾ.ಡಿ.ತಿಮ್ಮಯ್ಯ, ಜೆಡಿಎಸ್‌ನ ಸಿ.ಎನ್‌. ಮಂಜೇಗೌಡ ಅವರ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದಿದೆ. ಕನ್ನಡ ಚಳವಳಿ ನಾಯಕ, ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅವರು ಸೇರಿದಂತೆ ಕಣದಲ್ಲಿ ಒಟ್ಟು ಏಳು ಮಂದಿ ಇದ್ದಾರೆ. ಈ ಚುನಾವಣೆಗಾಗಿ ಒಟ್ಟು 393 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮೈಸೂರು ಜಿಲ್ಲೆ ಯಲ್ಲಿ 259, ಚಾಮರಾಜನಗರ ಜಿಲ್ಲೆಯಲ್ಲಿ 134 ಮತಗಟ್ಟೆ ಕೇಂದ್ರಗಳಿವೆ. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗೆ ಕೋವಿಡ್‌ ನಿಯಮಾನುಸಾರ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಒದಗಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

ಡಿ.9ರಂದು ಮಧ್ಯರಾತ್ರಿ 12 ಗಂಟೆಯಿಂದ ಡಿ.10ರ ಮಧ್ಯರಾತ್ರಿ 12 ಗಂಟೆವರೆಗೆ ಮೈಸೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿ ದ್ದಾರೆ. ಮತದಾನದ ವೇಳೆ ಮುಗಿದ ನಂತರ ಮೊಹರಾದ ಮತಪೆಟ್ಟಿಗೆಗಳನ್ನು ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ.ಮಸ್ಟರಿಂಗ್‌ ಸ್ಥಳದಿಂದ ಮೈಸೂರು ನಗರದ ಪಡುವಾರಹಳ್ಳಿ ಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಪೊಲೀಸ್‌ ಬಂದೋಬಸ್ತ್ ನಲ್ಲಿ ತರಲಾಗುವುದು.

ಭದ್ರತಾ ಕೊಠಡಿಗೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 4,502, ಚಾಮರಾಜನಗರ ಜಿಲ್ಲೆಯಲ್ಲಿ 2,269 ಮತದಾರರಿ ದ್ದಾರೆ. ಮತದಾರರ ಒಟ್ಟು ಸಂಖ್ಯೆ 6,771. ಡಿಸೆಂಬರ್‌ 14 ರಂದು ಮತಗಳ ಎಣಿಕೆ ನಡೆಯಲಿದೆ.

Advertisement

ಇದನ್ನೂ ಓದಿ:- ಹಳೆಯ ಹಾಡಿಗೆ ಜೆಎನ್‌ಯು ಭದ್ರತಾ ಸಿಬ್ಬಂದಿ ಭರ್ಜರಿ ಡ್ಯಾನ್ಸ್ : ವೈರಲ್ ವಿಡಿಯೋ

ಸಾಮಗ್ರಿಯೊಂದಿಗೆ ಮತಗಟ್ಟೆಗೆ ಬಂದು ಸಿಬ್ಬಂದಿ

ಚಾಮರಾಜನಗರ: ವಿಧಾನಪರಿಷತ್‌ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಚುನಾವಣೆಗೆ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಚುನಾವಣಾ ಸಾಮಗ್ರಿಗಳೊಂದಿಗೆ ಗುರುವಾರ ಮತಟ್ಟೆಗಳಿಗೆ ತೆರಳಿದರು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕು ಕೇಂದ್ರಗಳ ಮಸ್ಟರಿಂಗ್‌ ಕೇಂದ್ರಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನಾ ಪಟ್ಟಿಯ ಪ್ರಕಾರ ಚುನಾವಣಾ ಸಾಮಗ್ರಿಗಳು ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡು ನಿಯೋಜನೆಗೊಂಡಿರುವ ಮತಟ್ಟೆಗಳಿಗೆ ಸಾರಿಗೆ ಬಸ್‌ಗಳ ಮೂಲಕ ತೆರಳಿದರು.

ಜಿಲ್ಲೆಯಲ್ಲಿ 134 ಮತಟ್ಟೆ ಸ್ಥಾಪಿಸಿದ್ದು ಎಲ್ಲ ಮತಗಟ್ಟೆಗಳಿಗೆ ಅಗತ್ಯ ಸಿಬ್ಬಂದಿಗಳನ್ನು ಸಹ ನೇಮಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಈಗಾಗಲೇ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು ಮದ್ಯ ಮಾರಾಟ, ಸಂತೆ ಜಾತ್ರೆಗೆ ನಿರ್ಬಂಧ ಹೇರಲಾಗಿದೆ.

ಜಿಲ್ಲಾಧಿಕಾರಿ ಪರಿಶೀಲನೆ: ಚಾಮರಾಜನಗರದ ತಾಲೂಕು ಕಚೇರಿಯಲ್ಲಿನ ಮಸ್ಟರಿಂಗ್‌ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಚುನಾವಣಾ ಸಾಮಗ್ರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚುನಾವಣೆ ಆಯೋಗ ವಿರುದ್ಧ ವಾಟಾಳ್‌ ಪ್ರತಿಭಟನೆ

ಮೈಸೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ, ಚುನಾವಣೆ ಆಯೋಗ ಮಲಗಿದೆ ಎಂದು ತಾವು ರಸ್ತೆ ಬದಿಯಲ್ಲಿ ಮಲಗುವ ಮೂಲಕ ಅಣಕವಾಡಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮ ರಾಜೇಂದ್ರ ಒಡೆಯರ್‌ ವೃತ್ತದಲ್ಲಿ ಮಲಗಿ ಪ್ರತಿಟನೆ ನಡೆಸಿದ ಅವರು, 25 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮೇಲ್ಮನೆ ಚುನಾವಣೆಗೆ ರಾಜಕೀಯ ಪಕ್ಷಗಳಿಂದ ಸುಮಾರು 3 ಸಾವಿರ ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಆದರೂ ಚುನಾವಣಾ ಆಯೋಗ ಭ್ರಷ್ಟಾಚಾರ ತಡೆಯುವಲ್ಲಿ ಸಂಪೂರ್ಣ ವಿಫ‌ಲವಾಗಿದೆ ಎಂದು ಆರೋಪಿಸಿದರು.

ಪರಿಷತ್‌ ರದ್ದುಗೊಳಿಸಿ: ಹಣಕೊಟ್ಟು ಚುನಾವಣೆಗೆ ನಿಲ್ಲುವುದಾದರೆ, ಚುನಾವಣೆ ಏಕೆ ಬೇಕು? ಅದರ ಬದಲಾಗಿ ಪರಿಷತ್ತನ್ನೇ ರದ್ದು ಮಾಡಬೇಕು. ಇದರಲ್ಲಿ ಮತದಾರರನ್ನು ತೆಗಳುವಂತಿಲ್ಲ. ಆದರೆ, ಜನಪ್ರತಿನಿಗಳಾಗುವವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು. ನಾನು ಯಾರಿಗೂ ಹಣ ಕೊಟ್ಟಿಲ್ಲ. ಆದರೂ ಮೈಸೂರಿನ ಯುವಜನತೆ ವಾಟಾಳ್‌ ನಾಗರಾಜ್‌ ಅವನ್ನೇ ಬೆಂಬಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next