Advertisement

Election Update: ಚುನಾವಣ ಅಕ್ರಮ 265 ಕೋಟಿ

10:11 PM Apr 25, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಅನಂತರದ ಚುನಾವಣ ಅಕ್ರಮಗಳ ಜಪ್ತಿ 265.20 ಕೋಟಿ ರೂ. ದಾಟಿದೆ. ಕಳೆದ 24 ಗಂಟೆಗಳಲ್ಲಿನ ಜಪ್ತಿ ಅಂದಾಜು 9 ಕೋಟಿ ರೂ. ಆಗಿದೆ.

Advertisement

ಚುನಾವಣ ವೇಳಾಪಟ್ಟಿ ಪ್ರಕಟವಾದ 2023ರ ಮಾ. 29ರಿಂದ ಎಪ್ರಿಲ್‌ 25ರ ವರೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತ‌ಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ 88.03 ಕೋಟಿ ರೂ. ನಗದು, 20.62 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 75.15 ಕೋಟಿ ರೂ. ಮೌಲ್ಯದ 147.77 ಕೆ.ಜಿ. ಬಂಗಾರ, 4.32 ಕೋಟಿ ಮೌಲ್ಯದ 615.63 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿವೆ. ಈ ಸಂಬಂಧ 2,063 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಸೇರಿ 59.92 ಕೋಟಿ ರೂ. ಮೌಲ್ಯದ 15.73 ಲಕ್ಷ ಲೀಟರ್‌ ಮದ್ಯ ವಶಪಡಿಸಿಕೊಂಡಿವೆ.17.14 ಕೋಟಿ ರೂ. ಮೌಲ್ಯದ 1,285 ಕೆ.ಜಿ. ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿವೆ.

ಅಬಕಾರಿ ಇಲಾಖೆಯು 2,534 ಗಂಭೀರ, ಪರವಾನಿಗೆ ಉಲ್ಲಂ ಸಿದ 2,600 ಎನ್‌ಡಿಪಿಎಸ್‌ 79 ಮತ್ತು ಅಬಕಾರಿ ಕಾಯ್ದೆ ಅನ್ವಯ ಒಟ್ಟು 19,122 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,776 ವಿವಿಧ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next