ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಇಲಾಖಾವಾರು 2019-2024ರ ಅವಧಿಗಾಗಿ ಗುರುವಾರ ಶಾಂತಿಯುತ ಚುನಾವಣೆ ನಡೆಯಿತು.
ಗೆದ್ದವರು: ಲೋಕೋಪಯೋಗಿ ಇಲಾಖೆ-ಬಿ.ಎಸ್. ಪಾಟೀಲ; ಪಶುಸಂಗೋಪನೆ-ಕೆ.ಎಂ. ಇಜಾರಿ; ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ-ದೇವಿದಾಸ ಶಾಂತಿಕರ, ಎ.ಎ. ಅಳವಂಡಿ, ಆರ್.ಇ. ಕೊಟಬಾಗಿ; ಸರಕಾರಿ ಕಿರಿಯ ಕಾಲೇಜುಗಳು-ಸಿ.ಬಿ. ವಜ್ರಮಟ್ಟ; ನೀರಾವರಿ ಇಲಾಖೆ-ರವಿಕುಮಾರ; ಸರಕಾರಿ ಮುದ್ರಣಾಲಯ-ಎಸ್.ಎಚ್. ಶಿವರಾಜ; ಅರಣ್ಯ-ಭರತೇಶ ಮುಗದಮ್ಮ; ಪ್ರಾಥಮಿಕ ಶಾಲೆಗಳು(ಧಾರವಾಡ ಶಹರ)-ರಮೇಶ ಲಿಂಗದಾಳ, ಪಿ.ಎಫ್. ಗುಡೇನಕಟ್ಟಿ; ಪ್ರಾಥಮಿಕ ಶಾಲೆಗಳು(ಧಾರವಾಡ ಗ್ರಾಮೀಣ)-ಸಿ.ವೈ. ತಿಗಡಿ, ಎಸ್.ಎಸ್. ಗಟ್ಟಿ; ಜಿಲ್ಲಾಸ್ಪತ್ರೆ-ರಾಜೇಶ ಕೋನರಡ್ಡಿ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ: ಕೃಷಿ ಇಲಾಖೆ-ರಾಜಶೇಖರ ಬಾಣದ, ಎ.ಎ. ಪೋಲಿಸ್‌ಪಾಟೀಲ; ಕಂದಾಯ ಇಲಾಖೆ-ಕುಮಾರ ಪಡೆಪ್ಪನವರ, ಎಂ.ಜಿ. ಸೊಲಗಿ, ಕೆ. ಶ್ರೀಧರ; ತಾಂತ್ರಿಕ, ಭೋಧಕೇತರ ಶಿಕ್ಷಣ ಇಲಾಖೆ-ಗಿರೀಶ ಚೌಡಕಿ; ಆಹಾರ ಮತ್ತು ನಾಗರಿಕ ಸರಬರಾಜು-ಎನ್.ಜಿ. ಹಿರೇಮಠ; ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆ-ಆರ್.ಎಮ್. ಕಂಟೆಪ್ಪಗೌಡರ; ವಾಣಿಜ್ಯ ತೆರಿಗೆ ಇಲಾಖೆ-ಎಸ್.ಎಸ್. ಸೊಪ್ಪಿನ, ಎನ್.ಜಿ ಸುಬ್ಟಾಪುರಮಠ; ಸಹಕಾರ ಇಲಾಖೆ-ಎ.ಕೆ. ಜೋಶಿ; ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ-ಪ್ರತಿಭಾ ಡಿ. ರಾಣೆ; ಜಿಪಂ ಎಂಜಿನಿಯರಿಂಗ್-ಸುಜಾತಾ ಬಡ್ಡಿ; ಜಿಪಂ-ಸಂಗಮೇಶ ಬಾವಿಕಟ್ಟಿ ಆಯ್ಕೆ ಆಗಿದ್ದಾರೆ.
ಅಬಕಾರಿ ಇಲಾಖೆ-ವಿನಯ ಮೂಶಣ್ಣವರ; ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ-ಆನಂದ ಪಾಟೀಲ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ರಾಜಕುಮಾರ ಶಿರೋಳ; ಮೀನುಗಾರಿಕೆ ಇಲಾಖೆ-ದೇವರಾಜ ಐರಣಿ; ಮಾನಸಿಕ ಆಸ್ಪತ್ರೆ-ಯೋಗೇಶಕುಮಾರ; ಆಯುಷ್ಯ ಮತ್ತು ಇಎಸ್‌ಐ-ಹನಮಂತ ಮೇಟಿ; ತೋಟಗಾರಿಕೆ ಇಲಾಖೆ-ಶಿವಾನಂದ ಪಾಟೀಲ; ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ-ಶಿವಾಜಿ ಜೋಗಣ್ಣವರ; ವಾರ್ತಾ ಮತ್ತು ಪ್ರವಾಸೋದ್ಯಮ-ಸುರೇಶ ಹಿರೇಮಠ; ಯುವಜನ ಸೇವೆ, ಗ್ರಂಥಾಲಯ-ಅಡಿವೆಪ್ಪ ಗಾಯಕವಾಡ; ಕರ್ನಾಟಕ ಸರ್ಕಾರಿ ವಿಮಾ ಇಲಾಖೆ-ಲಕ್ಷ್ಮಣ ರಜಪೂತ;, ಪ್ರೌಢಶಾಲೆಗಳು-ಎಫ್.ವಿ. ಮಂಜಣ್ಣವರ, ಎಚ್.ಬಿ. ದಳವಾಯಿ; ಪದವಿ ಕಾಲೇಜುಗಳು-ವೈ.ಬಿ. ಕಟ್ಟೇಕರ; ಮಾರುಕಟ್ಟೆ ಎಪಿಎಂಸಿ-ಶ್ರೀಧರ ಮಣ್ಣೂರ; ಗಣಿ ಮತ್ತು ಭೂವಿಜ್ಞಾನ ಅಂತರ್ಜಲ-ಆರ್.ಎಂ. ಹಿರೇಗೌಡರ ಆಯ್ಕೆಗೊಂಡಿದ್ದಾರೆ.
Advertisement
ನಗರದ ಜಿಲ್ಲಾ ನೌಕರರ ಭವನದಲ್ಲಿ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರ ನೌಕರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ 62 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಈ ಪೈಕಿ 48 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿವೆ. ಉಳಿದ 14 ಸ್ಥಾನಗಳಿಗೆ ಚುನಾವಣೆ ಜರುಗಿತು. ನೌಕರರ ಭವನದಲ್ಲಿ ನಿರ್ಮಿಸಲಾಗಿದ್ದ ಒಟ್ಟು 10 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅದೇ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ಜರುಗಿ ಫಲಿತಾಂಶ ಪ್ರಕಟಗೊಂಡಿದೆ.
Related Articles
Advertisement
ಮೋಟಾರು ವಾಹನ(ಆರ್‌ಟಿಒ) ಇಲಾಖೆ-ಶಿವಾನಂದ ತುಪ್ಪದ; ಪೊಲೀಸ್ ಆಡಳಿತ, ಗೃಹ ರಕ್ಷಕ-ಎಂ.ಎಂ. ಗಿಡಗಂಟಿ; ರೇಷ್ಮೆ ಇಲಾಖೆ-ಎಂ.ಪಿ ಹುಡೇದ; ರಾಜ್ಯ ಲೆಕ್ಕಪತ್ರ ಇಲಾಖೆ-ಎನ್.ಜಿ ಸರಾಫ್; ಭೂಮಾಪನ ಕಂದಾಯ ವ್ಯವಸ್ಥೆ-ಎಸ್.ಎಫ್ ಸಿದ್ಧನಗೌಡರ; ಎನ್‌ಸಿಸಿ ಮತ್ತು ಕಾರಾಗೃಹ-ವಿ.ಬಿ. ಕುರುಬೆಟ್; ಮುಂದ್ರಾಂಕಗಳ ನೋಂದಣಿ-ಸುರೇಶ ಕುರ್ತಕೋಟಿ; ಸಣ್ಣ ಉಳಿತಾಯ, ಖಜಾನೆ ಇಲಾಖೆ-ಅಮಿತಕುಮಾರ ಕಲ್ಯಾಣಶೆಟ್ಟರ; ಕಾರ್ಮಿಕ ಕಾರ್ಖಾನೆಗಳು, ಬಾಯ್ಲರ-ಭುವನೇಶ್ವರಿದೇವಿ ಕೋಟಿಮಠ; ನಗರ ಯೋಜನೆ, ನಗರ ಮಾಪನ-ಎಸ್.ಜಿ. ಐರಣಿ; ಉದ್ಯೋಗ ಮತ್ತು ತರಬೇತಿ ಇಲಾಖೆ-ಮಂಜುನಾಥ ಯಡಳ್ಳಿ; ಧಾರ್ಮಿಕ ದತ್ತಿ ಕಾನೂನು ಮಾಪನಾಶಾಸ್ತ್ರ, ಜಿಲ್ಲಾ ತರಬೇತಿ ಕೇಂದ್ರ-ಬಸವರಾಜ ಕುರಿಯವರ; ನ್ಯಾಯಾಂಗ ಇಲಾಖೆ-ಗಜಾನನ ಕಟಗಿ, ಶಿವಾನಂದ ಅಕ್ಕೋಜಿ; ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್-ನಾಗೇಶ ಬ್ಯಾಲಾಳ; ಅಲ್ಪಸಂಖ್ಯಾತರ ಇಲಾಖೆ-ಡಾ| ಅಬ್ದುಲ್ರಶೀದ ಮಿರ್ಜಣ್ಣವರ; ಲೋಕಾಯುಕ್ತ ಇಲಾಖೆ-ಶಿವಶಂಕರ ವಾಲೀಕಾರ; ಇತರೆ/ಉಚ್ಚ ನ್ಯಾಯಾಲಯ-ಮಂಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ತಾಲೂಕು ಘಟಕಕ್ಕೆ ಅವಿರೋಧ ಆಯ್ಕೆ:
ಹುಬ್ಬಳ್ಳಿ: ರಾಜ್ಯ ಸರಕಾರಿ ನೌಕರರ ಸಂಘದ 2019-24ನೇ ಸಾಲಿನ ಅವಧಿಗೆ ನಡೆದ ಗ್ರಾಮೀಣ ತಾಲೂಕು ಘಟಕದ ಕಾರ್ಯಾಕಾರಿ ಸಮಿತಿ ಚುನಾವಣೆಯಲ್ಲಿ ವಿವಿಧ ಇಲಾಖೆ 32 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿ.ಬಿ. ನೀಲಣ್ಣವರ, ಡಾ| ಬಿ.ಪಿ. ಬಣಕಾರ, ಐ.ಎಫ್. ಅಯ್ಯನಗೌಡರ, ಎಂ.ಎಂ. ಮನಿಯಾರ, ಎಂ.ಎ. ಯಾದವಾಡ, ಬಿ.ವೈ. ಹೊಸಮನಿ, ಜಿ.ಎಸ್. ಕಾಟಿಗರ, ಎಂ.ಐ. ಹುಬ್ಬಳ್ಳಿ, ಶಿವಾನಂದ ಮಾಳಗಿ, ಬಸಪ್ಪ ಕುಂಬಾರ, ಬಿ.ಎಸ್. ಶಿರಹಟ್ಟಿ, ಬಸವರಾಜ ಹರಿಜನ, ಸತೀಶ ಗುಬ್ಬಿ, ಮಂಜುಳಾ ಮೆಣಸಗಿ, ಮಂಜುನಾಥ ತೆಳ್ಳಿ, ಎನ್.ಎಂ. ಕೊಡವೆಂದಲು, ಎಸ್.ಸಿ. ಅದೃಷ್ಯಪ್ಪನವರ, ಲಕ್ಷ್ಮೀಶ ಮೂಗನೂರ, ಮಹಾದೇವಪ್ಪ ಕೆಳಗೇರಿ, ಎಂ.ಎಫ್. ಪಾಟೀಲ, ಎ.ಬಿ. ಮುನಿಯಪ್ಪನವರ, ಸಂಜೀವ ಅಣ್ಣಿಗೇರಿ, ವೆಂಕಣ್ಣ ಚುಳಕಿ, ಗುರುಸಿದ್ದಪ್ಪ ಗುಂಜಾಳ, ಜಯರಾಮ ಉಳ್ಳಟ್ಟಿ, ಮಹಾಬಳೇಶ್ವರ ನವಲಗುಂದ, ಬಸನಗೌಡ ಸಾಲಿಗೌಡರ, ಭೀಮಪ್ಪ ಕುರಿಯವರ, ಯಲ್ಲಪ್ಪ ಶೆರೆವಾಡ, ಗುರುಪಾದಪ್ಪ ರಾಮಾಪುರ, ಸೈಯದ್‌ಅಲಿ ಬೂದಿಹಾಳ, ತಿಪ್ಪಾ ನಾಯ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ಎಂ.ಪಿ. ಕುಂಬಾರ ಕೆಲಸ ನಿರ್ವಹಿಸಿದರು.
ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಬಿರುಸಿನ ಮತದಾನ:
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹುಬ್ಬಳ್ಳಿ ಶಹರ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ ಗುರುವಾರ ಮತದಾನ ನಡೆಯಿತು. ಘಂಟಿಕೇರಿಯ ಸರಕಾರಿ ಶಾಲೆಯಲ್ಲಿ ಮೂರು ಸ್ಥಾನಗಳಿಗೆ ನಡೆದ ಮತದಾನದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, 899 ಮತದಾರರಲ್ಲಿ 800 ಜನರು ಮತ ಚಲಾಯಿಸಿದರು. ಹೊಸೂರಿನ ಸರಕಾರಿ ಮಾದರಿ ಶಾಲೆ ನಂ.16ರಲ್ಲಿ ಮತಕ್ಷೇತ್ರ 26ರ ಸರಕಾರಿ ಪಾಲಿಟೆಕ್ನಿಕ್, ಐಟಿಐ ಹಾಗೂ ಉದ್ಯೋಗ ವಿನಿಮಯ ಇಲಾಖೆಯ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 177 ಮತದಾರರಲ್ಲಿ 154 ಜನರು ಮತ ಚಲಾಯಿಸಿದರು. ಕಣದಲ್ಲಿ ಇದ್ದ ಇಬ್ಬರು ಅಭ್ಯರ್ಥಿಗಳ ಪೈಕಿ ವಿದ್ಯಾನಗರ ಐಟಿಐ ಕಾಲೇಜಿನ ರಾಮಚಂದ್ರ ಬಿರಾದರ 85 ಮತಗಳನ್ನು ಪಡೆದು ತಮ್ಮ ಸಮೀಪದ ಅಭ್ಯರ್ಥಿ ಮಹಿಳಾ ಐಟಿಐ ಕಾಲೇಜಿನ ಕಬ್ಬೇರ ವಿರುದ್ಧ 16 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಕಬ್ಬೇರ ಅವರು 69 ಮತಗಳನ್ನು ಪಡೆದರು. ಮತಕ್ಷೇತ್ರ 7ರ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮೂರು ಸ್ಥಾನಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಚುನಾವಣಾ ಅಧಿಕಾರಿ ಟಿ.ಆರ್. ಶಿರೋಳ ತಿಳಿಸಿದ್ದಾರೆ.
ಮತ ಸಮರ ಗೆದ್ದವರು:
ಬಿ.ಎಸ್. ಪಾಟೀಲ, ಕೆ.ಎಂ. ಇಜಾರಿ, ದೇವಿದಾಸ ಶಾಂತಿಕರ, ಎ.ಎ. ಅಳವಂಡಿ, ಆರ್.ಇ. ಕೊಟಬಾಗಿ, ಸಿ.ಬಿ. ವಜ್ರಮಟ್ಟ, ರವಿಕುಮಾರ, ಎಸ್.ಎಚ್. ಶಿವರಾಜ, ಭರತೇಶ ಮುಗದಮ್ಮ, ರಮೇಶ ಲಿಂಗದಾಳ, ಪಿ.ಎಫ್. ಗುಡೇನಕಟ್ಟಿ, ಸಿ.ವೈ. ತಿಗಡಿ, ಎಸ್.ಎಸ್. ಗಟ್ಟಿ, ರಾಜೇಶ ಕೋನರಡ್ಡಿ