Advertisement

ದೇಶದ ದಿಕ್ಸೂಚಿ ಬದಲಿಸುವ ಚುನಾವಣೆ: ನಾಯಕ

02:45 PM Apr 02, 2019 | pallavi |
ಯಾದಗಿರಿ: ದೇಶದ ದಿಕ್ಸೂಚಿ ಬದಲಿಸುವ ಲೋಕಸಭೆ ಚುನಾವಣೆಯಲ್ಲಿ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ
ತಮಗೆ ಆಶೀರ್ವದಿಸಬೇಕು ಎಂದು ರಾಯಚೂರು-ಯಾದಗಿರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ದೇಶಕ್ಕಾಗಿ ಹಲವು ಯೋಜನೆ ನೀಡಿದ್ದಾರೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತೂಮ್ಮೆ ಮೋದಿ ಅವರ ಕೈ ಬಲಪಡಿಸಲು ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದರು ಈ ಭಾಗದ ಸಮರ್ಪಕ ಅಭಿವೃದ್ಧಿ ಮತ್ತು ರಾಯಚೂರು, ಯಾದಗಿರಿ ಹಿಂದುಳಿದ ಜಿಲ್ಲೆಗಳು ಎಂದು ಹಣೆಪಟ್ಟಿ ಅಳಿಸಲು ಬಿಜೆಪಿ ಅಗತ್ಯವಾಗಿದೆ. ನೀತಿ ಆಯೋಗದ ವರದಿಯಂತೆ ಜಿಲ್ಲೆಗಳನ್ನು ಮಹತ್ವಾಕಾಂಕ್ಷಿಗಳು ಎಂದು ಆಯ್ಕೆ ಮಾಡಲಾಗಿದೆ. ಆದರೆ, ಈ ಭಾಗದ ಸಂಸದರು ಅಭಿವೃದ್ಧಿಗೆ ನಿಷ್ಕಾಳಜಿ ವಹಿಸಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾತನಾಡಿ, 4 ಬಾರಿ ತಂದೆ ಒಂದು ಬಾರಿ ಮಗ ಬಿ.ವಿ. ನಾಯಕ ಆರಿಸಿಬಂದರೂ ಯಾವುದೇ ಕೊಡುಗೆ ನೀಡಿಲ್ಲ ಎಂಬ ಅಳಲು ಈ ಭಾಗದಲ್ಲಿದೆ. ಸಾಕಷ್ಟು ವೈಫಲ್ಯಗಳಿವೆ. ರಾಯಚೂರು ಮತ್ತು ಯಾದಗಿರಿ ಮಾದರಿ ಜಿಲ್ಲೆಯಾಗಿಸುವ ಸಂಕಲ್ಪ ಬಿಜೆಪಿಯದ್ದಾಗಿದೆ. ಅಭಿವೃದ್ಧಿಗಾಗಿ ಎಲ್ಲರ ಮಧ್ಯೆಯೇ ಇರುವ ಅಮರೇಶ ನಾಯಕ ಅವರನ್ನು ಲೋಕಸಭೆಗೆ ಕಳುಹಿಸಬೇಕಿದೆ ಎಂದರು.
 ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾದಗಿರಿ ಜಿಲ್ಲೆ ಘೋಷಿಸಿದರು. ಅಭಿವೃದ್ಧಿಗೆ 300 ಕೋಟಿ ರೂ. ಪ್ಯಾಕೇಜ್‌ ನೀಡಿದ್ದರು. ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಅಭಿವೃ ಧಿಯಾಗಿಲ್ಲ. ಬಿಜೆಪಿ ಅಭ್ಯರ್ಥಿ ಅಮರೇಶ ನಾಯರ ಅವರನ್ನು ಲೋಕಸಭೆಗೆ ಕಳುಹಿಸಬೇಕಿದೆ.ಜನರ ಸಮಸ್ಯೆಗಳಿಗೆ ಸ್ಪಂದಿಸಲು 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಸದರ ಕಚೇರಿ ತೆರಯಲಾಗುವುದು ಎಂದು ತಿಳಿಸಿದರು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ, ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಗುರು ಪಾಟೀಲ ಶಿರವಾಳ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌. ಶಂಕ್ರಪ್ಪ, ನಾಗರತ್ನ ಕುಪ್ಪಿ, ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ಶರಣಗೌಡ, ಯಾದಗಿರಿ ಜಿಲ್ಲಾಧ್ಯಕ್ಷ ಚಂದ್ರಶೇಖಗೌಡ ಮಾಗನೂರ ಸುದ್ದಿಗೋಷ್ಠಿಯಲ್ಲಿದ್ದರು.
ರಾಯಚೂರು ಸಂಸದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನದ ಮೇಲಿನ ದಾಳಿಯನ್ನು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಗುಬ್ಬಿ ಹುಡುಕೋಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ದೇಶದ ವಿಚಾರ ಬಂದರೆ ಅಕºರುದ್ದೀನ್‌ ಓವೈಸಿಯೂ ಪಾಕಿಸ್ತಾನದ ಪ್ರಧಾನಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಆದರೆ ಬಿ.ವಿ. ನಾಯಕ ಮೃದು ಧೋರಣೆ ತೋರಿದ್ದು, ಅವರಿಗಿಂತ ಓವೈಸಿ ಉತ್ತಮ.
 ರಾಜುಗೌಡ, ಸುರಪುರ ಶಾಸಕ
ಚುನಾವಣೆ ಫಲಿತಾಂಶ ಬಳಿಕ ಪ್ರಭಾವ ಅನಾವರಣ ಕಾಂಗ್ರೆಸ್‌ ತೊರೆದಿದ್ದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಲ್ಲ ಎಂಬ ಕಾಂಗ್ರೆಸ್‌ ನಾಯಕರ ಮಾತಿಗೆ ತಿರುಗೇಟು ನೀಡಿದ ಬಿಜೆಪಿ ಮುಖಂಡ ಡಾ| ಎ.ಬಿ. ಮಾಲಕರೆಡ್ಡಿ, ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಅವರಿಗೆ ಗೊತ್ತಾಗುತ್ತದೆ. ವಿಧಾನ ಪರಿಷತ್‌ ಸದಸ್ಯರಾಗಿ, ಸಚಿವನಾಗಿ ಒಂದು ಜಿಲ್ಲೆ ಅಥವಾ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತವಾಗಿರದೇ ಅಪಾರ ಜನಬೆಂಬಲ ಹೊಂದಿರುವ ನಾಯಕ ತಾನಾಗಿದ್ದು, ಕಲಬುರಗಿ ಮತ್ತು ರಾಯಚೂರು ಎರಡೂ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next