Advertisement

ಷೇರು ಪೇಟೆಗೆ ಚೈತನ್ಯ ತಾರದ ಚುನಾವಣಾ ಫ‌ಲಿತಾಂಶ

06:05 AM May 16, 2018 | Team Udayavani |

ಮುಂಬೈ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ ಎಂಬ ನಿರೀಕ್ಷೆ
ಹುಸಿಯಾಗುತ್ತಿದ್ದಂತೆಯೇ ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಕುಸಿಯಿತು. ಇದರ ಜತೆಗೆ ಚೀನಾ ಪ್ರಕಟಿಸಿದ ಆರ್ಥಿಕ ವರದಿಯೂ ಕೂಡ ಸೂಚ್ಯಂಕ ಪತನವಾಗಲು ಕಾರಣವಾಯಿತು.

Advertisement

ಷೇರು ಪೇಟೆ ದಿನದ ವಹಿವಾಟು ಆರಂಭಿಸುತ್ತಲೇ ಸೂಚ್ಯಂಕ 436 ಅಂಕಗಳಷ್ಟು ನೆಗೆಯಿತು. ನಿμr ಸೂಚ್ಯಂಕ ಕೂಡ 128 ಅಂಕಗಳಷ್ಟು ಏರಿಕೆ ಕಂಡಿತ್ತು. ಹೂಡಿಕೆದಾರರೂ ಕೂಡ ಕರ್ನಾಟಕದಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸದಿಂದ ಇದ್ದರು. ಈ ಸಂದರ್ಭದಲ್ಲಿ ಬಿಎಸ್‌ಇ ಸೂಚ್ಯಂಕ 35,993.53ಕ್ಕೆ ಏರಿಕೆಯಾಯಿತು. ನಿಫ್ಟಿ ಕೂಡ 10,900 ಅಂಕಗಳನ್ನು ದಾಟಿತು.

ಒಂದೊಂದೇ ಕ್ಷೇತ್ರದ ಫ‌ಲಿತಾಂಶ ಪ್ರಕಟವಾಗಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ ಎಂದು
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಬಿಎಸ್‌ಇ ಸೂಚ್ಯಂಕ 12.77 ಪಾಯಿಂಟ್‌ಗಳಷ್ಟು ಕುಸಿಯಿತು. ಅಂತಿಮವಾಗಿ
ಮಂಗಳವಾರದ ದಿನದ ಅಂತ್ಯಕ್ಕೆ ಸೂಚ್ಯಂಕ 35,543.94ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ
10,929.20ರಲ್ಲಿ ಮುಕ್ತಾಯವಾಗಿ 4.75 ಅಂಕಗಳಷ್ಟು ಕುಸಿತ ಕಂಡಿತು. ಇದರ ಜತೆಗೆ ಅಮೆರಿಕದ ಡಾಲರ್‌ ರುಪಾಯಿ ಕೂಡ ಮಧ್ಯಂತರದಲ್ಲಿ 52 ಪೈಸೆಯಷ್ಟು ಇಳಿಕೆ ಕಂಡಿತು.

Advertisement

Udayavani is now on Telegram. Click here to join our channel and stay updated with the latest news.

Next