Advertisement

ಚುನಾವಣಾ ಫ‌ಲಿತಾಂಶ: ಯಡಿಯೂರಪ್ಪ-ಶೋಭಾರದ್ದು ಏನೂ ನಡೆಯಲಿಲ್ಲ

11:25 AM Apr 14, 2017 | Team Udayavani |

ಉಡುಪಿ: ತಡವಾಗಿ ಪ್ರಚಾರ ಆರಂಭಿಸಿದರೂ ಕಾಂಗ್ರೆಸ್‌ ಗೆದ್ದಿದೆ. ಯಡಿಯೂರಪ್ಪ ತಿಂಗಳ ಹಿಂದೆಯೇ ಠಿಕಾಣಿ ಹೂಡಿದ್ದರಾದರೂ ಯಡಿಯೂರಪ್ಪ-ಶೋಭಾ ಕರಂದ್ಲಾಜೆದ್ದು ಏನೂ ನಡೆಯಲಿಲ್ಲ ಎಂದು ಉಡುಪಿಯಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಗುಂಡ್ಲು ಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು. 

Advertisement

ಇದೀಗ ಬಿಜೆಪಿ ಹಣದ ಹೊಳೆಯೇ ಹರಿದಿದೆ ಅಂತ ಆರೋಪಿಸ್ತಾರೆ. ಗೆದ್ದಿದ್ದರೆ ಮೋದಿ ಗಾಳಿ-ಯಡಿಯೂರಪ್ಪ ಗಾಳಿ ಅಂತ ಹೇಳುತ್ತಿದ್ದರು. ಹಣದ ಹೊಳೆ ಹರಿದಿದೆ ಅನ್ನೋದು ಸುಳ್ಳು. ಇದು ಸೋತಾಗ ಹೇಳುವ ನೆವನ. ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡಿದೆ. ಕಾಂಗ್ರೆಸ್‌ ಗೆದ್ದಿರೋದು ವೀರಶೈವರ ಪ್ರಭಾವಿ ಕ್ಷೇತ್ರದಲ್ಲಿ ಆಗಿರುವುದರಿಂದ ಮುಂದೆ ಯಡಿಯೂರಪ್ಪ ನಾಯಕತ್ವ ಚುನಾವಣೆಗೆ ಎಷ್ಟು ಪ್ರಯೋಜನವಾಗಬಹುದು ಎಂಬುದು ತಮ್ಮ ಪುಕ್ಕಟೆ ಸಲಹೆ ಎಂದರು.

ಆರೋಪ-ನೋವು: ತಾನು ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು 10 ಕೋ. ರೂ. ನೀಡಿದ್ದೆ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಆರೋಪ ಮಾಡಿದ್ದರು. ಇದು ನನ್ನ ಮನಸ್ಸಿಗೆ ಬಹಳ ನೋವು ತಂದಿತ್ತು. ಆದಕ್ಕೆ ಜನರು ಒಳ್ಳೆಯ ತೀರ್ಮಾನ ನೀಡಿದ್ದಾರೆ. ಇದೀಗ ಶ್ರೀನಿವಾಸ ಪ್ರಸಾದ್‌ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮಂತ್ರಿ ಸ್ಥಾನವೂ ಹೋಗಿದೆ. ಶಾಸಕ ಸ್ಥಾನವೂ ಹೋಗಿದೆ. ಆದರೂ ಹಿರಿಯ ನಾಯಕರ ಬಗ್ಗೆ ಲಘುವಾಗಿ ಮಾತನಾಡಲಾರೆ. ಅವರ ಋಣ ನನ್ನ ಮೇಲೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next