Advertisement
ಇದನ್ನೂ ಓದಿ:ಲೈಂಗಿಕ ಕಿರುಕುಳ ಕೇಸ್: ತಲೆಮರೆಸಿಕೊಂಡಿದ್ದ ನ್ಯಾಯವಾದಿ ರಾಜೇಶ್ ಕೋರ್ಟ್ ಗೆ ಶರಣು
Related Articles
Advertisement
ಈ ಕಾಯ್ದೆಯ ಪ್ರಕಾರ, ಮತದಾರನ ಗುರುತು ಪತ್ತೆಗಾಗಿ, ಯಾರು ಮತದಾರರಾಗಿ ನೋಂದಾಯಿಸಲು ಬರುವ ಜನರ ಆಧಾರ ಸಂಖ್ಯೆಯನ್ನು ಪಡೆಯಲು ಚುನಾವಣಾ ನೋಂದಣಾಧಿಕಾರಿಗೆ ಅವಕಾಶ ನೀಡುತ್ತದೆ. ಆದರೆ ವಿಪಕ್ಷಗಳ ಆರೋಪಗಳು ಆಧಾರ ರಹಿತವಾದದ್ದು ಎಂದು ರಿಜಿಜು ಹೇಳಿದರು.
ವಿರೋಧ ಪಕ್ಷಗಳು ಈ ವಿಧೇಯಕದ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದೆ. ಈ ಕಾನೂನಿನಿಂದಾಗಿ ಚುನಾವಣಾ ಪ್ರಕ್ರಿಯೆ ಇನ್ನಷ್ಟು ಸದೃಢಗೊಳ್ಳಲಿದೆ ಎಂದು ಹೇಳಿದರು. ಅಷ್ಟೇ ಅಲ್ಲ ಚುನಾವಣಾ ಸಂದರ್ಭದಲ್ಲಿ ನಕಲಿ ಮತದಾನವನ್ನು ತಡೆಯುವ ಪ್ರಯತ್ನ ಇದಾಗಿದೆ. ಅಲ್ಲದೇ ಇದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿದೆ ಎಂದು ರಿಜಿಜು ಹೇಳಿದರು.
ಆಧಾರ್ ಲಿಂಕ್ ಆದ್ರೆ..ಹಲವರು ಮತದಾನದಿಂದ ವಂಚಿತ: ಒವೈಸಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಅಷ್ಟೇ ಅಲ್ಲ ನಾಗರಿಕರ ಹಕ್ಕನ್ನೂ ಮೊಟಕುಗೊಳಿಸುತ್ತಿದೆ. ಆಧಾರ್ ಕಾರ್ಡ್ ನಲ್ಲಿ ಶೇ.8ರಷ್ಟು ವ್ಯತ್ಯಾಸ ಕಂಡು ಬಂದಿದ್ದು, ಮತದಾರರ ಪಟ್ಟಿಯಲ್ಲಿ ಶೇ.3ರಿಂದ ರಷ್ಟು ದೋಷಗಳು ಪತ್ತೆಯಾಗಿದೆ. ಒಂದು ವೇಳೆ ಈ ಮಸೂದೆ ಅಂಗೀಕಾರಗೊಂಡರೆ ಈ ದೇಶದಲ್ಲಿ ಬಹುಸಂಖ್ಯೆಯ ಜನರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂದು ಒವೈಸಿ ಎನ್ ಡಿಟಿವಿಗೆ ತಿಳಿಸಿದ್ದಾರೆ.