Advertisement

ಸುಸೂತ್ರ ಪರಿಷತ್‌ ಚುನಾವಣೆಗೆ ಸಕಲ ಸಿದ್ಧತೆ

04:35 PM Dec 10, 2021 | Team Udayavani |

ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್ತಿನಬಳ್ಳಾರಿ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರಕ್ಕೆಡಿ. 10 ಶುಕ್ರವಾರ ಮತದಾನನಡೆಯಲಿದೆ. ಸುಸೂತ್ರ ಮತದಾನಕ್ಕೆಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

Advertisement

ಬಳ್ಳಾರಿ ನಗರದ ತಹಶೀಲ್ದಾರ್‌ ಕಚೇರಿಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲ ತಹಶೀಲ್ದಾರ್‌ ಕಚೇರಿಗಳಲ್ಲಿ ಮಸ್ಟರಿಂಗ್‌ ಕಾರ್ಯಗುರುವಾರ ನಡೆಯಿತು. ಚುನಾವಣೆಗೆನಿಯೋಜಿತರಾದ ಸಿಬ್ಬಂದಿಗಳುಚುನಾವಣಾ ಸಾಮಗ್ರಿಗಳನ್ನುತೆಗೆದುಕೊಂಡು ತಮಗೆ ಸೂಚಿಸಲಾದಮತಗಟ್ಟೆಗಳಿಗೆ ತೆರಳುತ್ತಿರುವ ದೃಶ್ಯಕಂಡುಬಂದಿತು. ಮತದಾನ ಬೆಳಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ.

ಪ್ರಸಕ್ತ ಚುನಾವಣೆಯಲ್ಲಿಬಳ್ಳಾರಿ ಮತ್ತು ವಿಜಯನಗರಜಿಲ್ಲೆಗಳಲ್ಲಿ 4663 ಮತದಾರರಿದ್ದು247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಕ್ಷೇತ್ರದಲ್ಲಿ 2194 ಪುರುಷ ಮತ್ತು2468 ಮಹಿಳಾ ಮತದಾರರು, 1ಇತರೇ ಸೇರಿದಂತೆ ಒಟ್ಟು 4663 ಅರ್ಹಮತದಾರರಿದ್ದಾರೆ. ಇತ್ತೀಚೆಗೆ ಜರುಗಿದಚುನಾವಣೆಯಲ್ಲಿ ಆಯ್ಕೆಯಾದ ಬಳ್ಳಾರಿಮಹಾನಗರ ಪಾಲಿಕೆಯ ಸದಸ್ಯರಿಗೂಮತದಾನದ ಹಕ್ಕು ಇದೆ. ಇವರುಜಿಪಂನಲ್ಲಿ ತೆರೆಯಲಾದ ಮತದಾನಕೇಂದ್ರದಲ್ಲಿ ಮತದಾನ ಮಾಡಲಿದ್ದಾರೆ.247 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆಪ್ರೊಸಿಡಿಂಗ್‌ ಆಫಿಸರ್‌, ಅಸಿಸ್ಟೆಂಟ್‌ಪ್ರೊಸಿಂಡಿಂಗ್‌ ಆಫಿಸರ್‌, ಪೊಲೀಂಗ್‌ಆಫಿಸರ್‌, ಐಡೆಂμಕೇಶನ್‌ ಆಫಿಸರ್‌ಮತ್ತು ಗ್ರೂಪ್‌ ಡಿ, ಪ್ರತಿ ಮತಗಟ್ಟೆಗೆ ಓರ್ವ ಮೈಕ್ರೋ ಅಬ್ಸರ್ವರ್‌ಇರಲಿದ್ದಾರೆ.

ಪ್ರತಿ ಮತಗಟ್ಟೆಗೆ ಓರ್ವಮೈಕ್ರೋ ಆಬ್ಸರ್ವರ್‌ ನೇಮಿಸಲಾಗಿದೆ.ಮತಗಟ್ಟೆಯಲ್ಲಿ ವಿಡಿಯೋ ಚಿತ್ರೀಕರಣಮಾಡಲಾಗುವುದು. ಶಾಂತಿಯುತಮತ್ತು ಮುಕ್ತ ಮತದಾನಕ್ಕೆ ಸಕಲ ವ್ಯವಸ್ಥೆಮಾಡಲಾಗಿದೆ. ಜೊತೆಗೆ ಸೂಕ್ತ ಪೊಲೀಸ್‌ಭದ್ರತೆ ಕಲ್ಪಿಸಲಾಗಿದೆ. ಕೋವಿಡ್‌ಮಾರ್ಗಸೂಚಿಗಳನ್ನು ಪಾಲಿಸಲು ಎಲ್ಲರೀತಿಯ ಸೂಚನೆಗಳನ್ನು ಜಿಲ್ಲಾಡಳಿತ ನೀಡಿದೆ.

ಚುನಾವಣಾ ವೀಕ್ಷಕರಾದಹಿರಿಯ ಐಎಎಸ್‌ ಅ ಧಿಕಾರಿ ಡಾ|ವಿ.ರಾಮ್‌ ಪ್ರಸಾತ್‌ ಮನೋಹರ್‌,ಜಿಲ್ಲಾ ಚುನಾವಣಾಧಿ ಕಾರಿಗಳಾದಪವನಕುಮಾರ್‌ ಮಾಲಪಾಟಿ, ಅಪರಜಿಲ್ಲಾ ಚುನಾವಣಾ ಧಿಕಾರಿ ಪಿ.ಎಸ್‌.ಮಂಜುನಾಥ ಅವರು ಮಸ್ಟರಿಂಗ್‌ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅವರು ಮತಎಣಿಕೆ ನಡೆಯಲಿರುವ ಸರಕಾರಿಪಾಲಿಟೆಕ್ನಿಕ್‌ ಕಾಲೇಜಿಗೆ ಭೇಟಿ ನೀಡಿಕೈಗೊಳ್ಳಲಾಗಿರುವ ಇದುವರೆಗಿನ ಸಿದ್ಧತೆಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.