ಬೆಂಗಳೂರು: ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಅಖಾಡ ಸಿದ್ಧವಾಗಿದೆ. ಕನ್ನಡಪರ ಹೋರಾಟಗಾರರು, ಪುಸ್ತಕ ಪ್ರಕಾಶಕರು ಮತ್ತು ಉಪನ್ಯಾಸಕರು ಅಧ್ಯಕ್ಷ ಸ್ಥಾನದ ಮೇಲೆಕಣ್ಣಿಟ್ಟಿದ್ದು ವಾಟ್ಸ್ ಆ್ಯಪ್ ಮೂಲಕ ಹೈಟೆಕ್ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೆ ಹಿರಿಯ ಸಾಹಿತಿಗಳ ಮತ್ತು ಕನ್ನಡಪರ ಹೋರಾಟಗಾರರ ಮನೆ ಮನೆಗೆ ತೆರಳಿ ಬೆಂಬಲ ಕೋರುತ್ತಿದ್ದಾರೆ.
ಪ್ರಕಾಶಕ ಮತ್ತು ಕನ್ನಡಪರ ಹೋರಾಟಗಾರ ಕುವೆಂಪು ಪ್ರಕಾಶ್,ಕೈಗಾರಿಕಾಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಸಾಹಿತಿ ಮತ್ತು ಉಪನ್ಯಾಸಕ ಡಾ. ಕಾಂತರಾಜಪುರ ಸುರೇಶ್,ಪ್ರಕಾಶ ಮೂರ್ತಿ, ವೇದಮೂರ್ತಿ ಸೇರಿದಂತೆಇನ್ನೂ ಕೆಲವರು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿರಿಸಿದ್ದಾರೆ.
ಹಾಗೆಯೇ ತಮ್ಮದೆ ಆದ ಗೆಳೆಯರ ಬಳಗದೊಂದಿಗೆ ಪ್ರಚಾರಕಾರ್ಯ ಆರಂಭಿಸಿದ್ದಾರೆ. ಜತೆಗೆ ಪ್ರತಿ ನಿತ್ಯ ಮೊಬೈಲ್ ಮತ್ತು ವ್ಯಾಟ್ಸ್ ಆಪ್ ಮೂಲಕ ಮತದಾರ ಸಂಪರ್ಕ ಸಾಧಿಸುತ್ತಿದ್ದಾರೆ. ಅಲ್ಲದೆ ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ಚಂದ್ರಶೇಖರ ಪಾಟೀಲ, ಬರಗೂರುರಾಮಚಂದ್ರಪ್ಪ, ಜರಗನಹಳ್ಳಿ ಶಿವಶಂಕರ್, ದೊಡ್ಡರಂಗೇಗೌಡ ಸೇರಿದಂತೆ ನಗರದಲ್ಲಿ ನೆಲೆಸಿರುವ ಹಲವು ಸಾಹಿತಿಗಳನ್ನು ಭೇಟಿ ಮಾಜಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಮರಳಿ ಯತ್ನ ಮಾಡುತ್ತಿರುವ ಸ್ಪರ್ಧಾಳುಗಳು: ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುರಿಯಾಳುಗಳಲ್ಲಿ ಕೆಲವರು ಮೂರು ಭಾರಿ ಸ್ಪರ್ಧಿಸಿ ಸೋಲುಂಡವರು ಸೇರಿದ್ದಾರೆ. ಪರಿಷತ್ತಿನ ಗದ್ದುಗೆ ಮೇಲೆ ಆಸೆಯಿಟ್ಟು ಕೊಂಡಿರುವ ಪ್ರಕಾಶ್ ಮೂರ್ತಿ ಅವರು ಸತತ ಮೂರು ಬಾರಿ ನಗರ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.ಹಾಗೆಯೇ ಕೈಗಾರಿಕಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ ಅವರು ಈ ಹಿಂದೆ ಒಂದು ಬಾರಿ ಪರಿಷತ್ತಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು. ಇದೀಗ ಈ ಇಬ್ಬರೂಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಹಿಂದೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಸೋತಿದ್ದೆ. ಈಗ ಮತ್ತೆ ಕಣಕ್ಕಿಳಿಯಲು ಸಿದ್ಧವಾಗಿದ್ದೇನೆ. ಗೆಳೆಯರ ಬಳಗದ ಜತೆಗೂಡಿ ಸಾಹಿತಿಗಳ, ಕನ್ನಡ ಪರ ಹೋರಾಟಗಾರರ ಭೇಟಿ ಮಾಡಿ ಬೆಂಬಲ ಕೇಳುತ್ತಿರುವುದಾಗಿ ತಿಮ್ಮಯ್ಯ ಹೇಳಿದ್ದಾರೆ.
ಯುವ ಸಮುದಾಯದ ಆಕರ್ಷಣೆ ಮುಖ್ಯ: ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ರಾಗಿ ಸೇವೆ ಸಲ್ಲಿಸುತ್ತಿರುವ ಕಾಂತರಾಜಪುರ ಸುರೇಶ್‌ಅವರು ಈ ಹಿಂದೆ ಡಾ.ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಕೆಲವು ಕೃತಿಗಳನ್ನು ಕೂಡ ರಚಿಸಿದ್ದಾರೆ. ಕಸಾಪ ಯುವ ಸಮುದಾಯವನ್ನು ಮಟ್ಟಬೇಕು. ಚಂಪಾ ಅವರು ಈ ಹಿಂದೆ ಆರಂಭಿಸಿದ್ದ “ಪುಸ್ತಕ ಸಂತೆ’ಕಾರ್ಯಕ್ರಮ ಆರಂಭವಾಗಬೇಕು ಎಂಬುವುದು ತಮ್ಮ ಆಸೆಯಾಗಿದೆ ಎಂದಿದ್ದಾರೆ.
ಅಧಿಕಾರಿಗಳಕೈಗೊಂಬೆ ಆಗದಿರಲಿ : ಕನ್ನಡ ಸಾಹಿತ್ಯ ಪರಿಷತ್‌ನ್ನು ಮಹಾನ್ ಸಾಹಿತಿಗಳು,ಕನ್ನಡಪರ ಹೋರಾಟಗಾರರು ಕಟ್ಟಿ ಬೆಳೆಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಗಳು ಪರಿಷತ್ತಿನ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇದು ಆಗಬಾರದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ಬರುವಂತಾಗಬೇಕು ಎಂದು ಕುವೆಂಪು ಪ್ರಕಾಶ್ ಹೇಳುತ್ತಾರೆ. ಗೋಕಾಕ್ ಚಳವಳಿಯಿಂದಲೂ ಕನ್ನಡ ಕಾಯಕಗಳಲ್ಲಿ ಸಕ್ರಿಯನಾಗಿದ್ದೇನೆ. ಕುವೆಂಪು ಕುರಿತ ಹಲವು ಕಾರ್ಯಕ್ರಗಳನ್ನು ಹಮ್ಮಿಕೊಂಡಿದ್ದೇನೆ. ಪರಿಷತ್ತಿನ ಕಾಯಕ ಮಾಡಲು ಮತ್ತೆ ಸಿದ್ಧನಾಗಿದೇನೆ ಎಂದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಗಳಿಗೆ ಮತ್ತು ಪ್ರಶಸ್ತಿ ಹಂಚಿಕೆಗೆ ಮಾತ್ರ ಸೀಮಿತವಾಗಬಾರದು. ಪ್ರಶಸ್ತಿ ಸ್ಥಾಪಿಸುವುದರ ಜತೆಗೆ ಅರ್ಹರನ್ನು ಗುರುತಿಸುವಕೆಲಸ ಆಗಬೇಕಾಗಿದೆ.
–ಕಾಂತರಾಜಪುರ ಸುರೇಶ್, ಉಪನ್ಯಾಸಕ
–ವಿಶೇಷ ವರದಿ