Advertisement
ಜಿ.ಪಂ. ಮತ್ತು ತಾ.ಪಂ.ಗಳಿಗೆ ಸದಸ್ಯ ಸ್ಥಾನಗಳ ಸಂಖ್ಯೆ ನಿಗದಿಪಡಿಸಿ ಚುನಾವಣ ಆಯೋಗ ಮಾ. 24ರ ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರ ಬಳಿಕ ಸದಸ್ಯ ಸ್ಥಾನಗಳಿಗೆ ಭೌಗೋಳಿಕ ಪ್ರದೇಶ ಗುರುತಿಸಬೇಕು. ಇದಕ್ಕೆ ಕನಿಷ್ಠ ಒಂದು ವಾರ ಬೇಕು. ಬಳಿಕ ಮೀಸಲಾತಿ ಕರಡು ಅಧಿ ಸೂಚನೆ ಹೊರಡಿಸಬೇಕು. ಅದರ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕನಿಷ್ಠ ಒಂದು ವಾರ ನೀಡಬೇಕು. ಅಂತಿಮ ಮೀಸಲು ಅಧಿಸೂಚನೆ ಹೊರಡಿಸಿದ 45 ದಿನಗಳ ಬಳಿಕ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಬೇಕು.
Related Articles
Advertisement
ಏಕೆ ಹೆಚ್ಚಳ, ಇಳಿಕೆ? :
ಈ ಹಿಂದೆ ಪ್ರತೀ 40 ಸಾವಿರ ಜನಸಂಖ್ಯೆಗೆ 1 ಜಿ.ಪಂ. ಮತ್ತು ಪ್ರತೀ 10 ಸಾವಿರ ಜನಸಂಖ್ಯೆಗೆ 1 ತಾ.ಪಂ. ಕ್ಷೇತ್ರ ರಚಿಸಲಾಗು ತ್ತಿತ್ತು. ಆದರೆ, ಪಂ. ರಾಜ್ ಕಾಯ್ದೆ ತಿದ್ದುಪಡಿ ಯಂತೆ 35 ಸಾವಿರಕ್ಕೆ ಒಂದು ಜಿ.ಪಂ. ಕ್ಷೇತ್ರ ಇರಬೇಕು. ಆದ್ದರಿಂದ ಜಿ.ಪಂ. ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ 12,500 ಜನಸಂಖ್ಯೆಗೆ 1 ತಾ.ಪಂ. ಕ್ಷೇತ್ರ ಇರಬೇಕು. ಹಾಗಾಗಿ ತಾ.ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಚುನಾವಣ ಆಯೋಗದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
2016 : 1,083
ಜಿ.ಪಂ. ಕ್ಷೇತ್ರಗಳು
3,903 ತಾ.ಪಂ. ಕ್ಷೇತ್ರಗಳು
2021 : 1,191
ಜಿ.ಪಂ. ಕ್ಷೇತ್ರಗಳು
3,285
ತಾ.ಪಂ. ಕ್ಷೇತ್ರಗಳು
108 ಜಿ.ಪಂ. ಕ್ಷೇತ್ರ ಹೆಚ್ಚಳ
618 ತಾ.ಪಂ. ಕ್ಷೇತ್ರಗಳು ಇಳಿಕೆ
ಮೇಯಲ್ಲೇ ಜಿ.ಪಂ., ತಾ.ಪಂ. ಚುನಾವಣೆ ಗಳು ನಡೆಯುತ್ತವೆ. ಮೀಸಲಾತಿ ನಿಯಮಗಳಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸ್ಪೀಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹೊಸ ನಿಯಮ ಅಳವಡಿಸಿ ಕೊಳ್ಳುವಂತೆ ಆಯೋಗಕ್ಕೆ ಸೂಚಿಸಲಾಗಿದೆ.– ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ
ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಕ್ಷೇತ್ರ ಮರುವಿಂಗಡಣೆ ಯಷ್ಟೇ ಆಗಿರುವುದರಿಂದ ಹೊಸ ನಿಯಮಗಳನ್ನು ಅಳವಡಿಸಿಕೊಂಡು ಮೀಸಲಾತಿ ನಿಗದಿ ಪಡಿಸಲಾಗುವುದು. – ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ