Advertisement

ವಿಧಾನ ಪರಿಷತ್ ಚುನಾವಣೆ: ಮತಗಟ್ಟೆಯೊಳಗೆ ಮೊಬೈಲ್ ನಿಷೇಧಿಸುವಂತೆ ಐವಾನ ಡಿಸೋಜಾ ಒತ್ತಾಯ

03:36 PM Dec 07, 2021 | Team Udayavani |

ಚಿಕ್ಕೋಡಿ: ವಿಧಾನ ಪರಿಷತ್ ಚುನಾವಣೆ ನ್ಯಾಯ ಸಮ್ಮತ್ತ ನಡೆಯುವ ದೃಷ್ಟಿಯಿಂದ ಚುನಾವಣೆ ಆಯೋಗ ರಾಜ್ಯದ ಪ್ರತಿ ಮತಗಟ್ಟೆ ಒಳಗೆ   ಮತದಾರರಿಗೆ ಮೊಬೈಲ್ ನಿಷೇಧ ಮಾಡಬೇಕು ಎಂದು ಕಾಂಗ್ರೆಸ್ ಚುನಾವಣೆ ವಿಕ್ಷಕ ಐವಾನ ಡಿಸೋಜಾ ಮನವಿ ಮಾಡಿದರು.

Advertisement

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,  ಮತದಾರರ ಬಳಿ ಮೊಬೈಲ್ ಇರುವುದರಿಂದ ಮತಗಟ್ಟೆಯೊಳಗೆ ಮತದಾನ ಮಾಡಿರುವ ಪೋಟೋ ಅಥವಾ ವಿಡಿಯೋ ಮಾಡಿಕೊಂಡು ಸಂಬಂಧಿಸಿದ ಅಭ್ಯರ್ಥಿ ಬಳಿ ಹಣ ಕೇಳುವ ಸಂಭವ ಇದ್ದು, ಆಯೋಗ ಮೊಬೈಲ್ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ವಿಕ್ಷಕರಾಗಿ ನೇಮಕವಾದ ಬಳಿಕ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಕಳೆದ ಎಂಟು ದಿನಗಳಿಂದ ಈ ಭಾಗದ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಲಾಗಿದೆ. ಬ್ಲಾಕ್ ಹಂತದಲ್ಲಿ ಮತದಾರರನ್ನು ಭೇಟಿ ಮಾಡಿ ಜನರ ಅಭಿಪ್ರಾಯ ಪಡೆಯಲಾಗಿದೆ ಎಂದರು.

ಜಿಲ್ಲೆಯ ಎಲ್ಲ ನಾಯಕರ ಒಮ್ಮತ್ತದ ಆಭ್ಯರ್ಥಿಯಾದ ಚೆನ್ನರಾಜ ಹಟ್ಟಿಹೊಳಿ ಅವರು ಪ್ರಥಮ ಪ್ರಾಶಸ್ತ್ಯ ಮತಗಳಿಂದ ಆಯ್ಕೆಯಾಗಲಿದ್ದು, ಇಡೀ ರಾಜ್ಯದಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಜನರಿಗೆ ಸುಳ್ಳು ಭರವಸೆ ನೀಡುತ್ತಾ ಬಂದಿದೆ. ಬಿಜೆಪಿ ಪಕ್ಷದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬರುವ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

Advertisement

ಇದನ್ನೂ ಓದಿ:ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ. ನರೇಗಾ ಯೋಜನೆ ಮತ್ತು ಪಂಚಾಯತ್ ಸಬಲೀಕಣರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಶಾಸಕ ಗಣೇಶ ಹುಕ್ಕೇರಿ, ಪ್ರಭಾಕರ ಕೋರೆ, ಅನಿಲ ಸುಣದೋಳಿ, ಮಹೇಶ ಹಟ್ಟಿಹೊಳಿ, ಸಾಭೀರ ಜಮಾದಾರ, ಅನಿಲ ಪಾಟೀಲ, ಎಚ್.ಎಸ್.ನಸಲಾಪೂರೆ, ಪ್ರದೀಪ ಪಾಟೀಲ, ಗುಲಾಬ ಬಾಗವಾನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next