Advertisement
ಚುನಾವಣ ವೇಳಾಪಟ್ಟಿ ಪ್ರಕಟವಾದ ಮಾ.29ರಿಂದ ಎ. 16ರ ವರೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು 71.27 ಕೋ. ರೂ. ನಗದು, 18.51 ಕೋ.ರೂ. ಮೌಲ್ಯದ ಉಚಿತ ಉಡುಗೊರೆಗಳು, 26.63 ಕೋ. ರೂ. ಮೌಲ್ಯದ 62.26 ಕೆ.ಜಿ. ಬಂಗಾರ, 2.79 ಕೋ. ರೂ. ಮೌಲ್ಯದ 401.97 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಂಡಿವೆ. ಈ ಸಂಬಂಧ ಒಟ್ಟು 1,410 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ.ವಿವಿಧ ಇಲಾಖೆಗಳ ಅಧಿಕಾರಿಗಳು 37.59 ಕೋ. ರೂ. ಮೌಲ್ಯದ 8.94 ಲಕ್ಷ ಲೀಟರ್ ಮದ್ಯ ಹಾಗೂ 13.45 ಕೋ. ರೂ. ಮೌಲ್ಯದ 654.22 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.