Advertisement

Election Expenses: ಕೈನ “ದೇಶಕ್ಕಾಗಿ ದೇಣಿಗೆ” ನಾಳೆ ಶುರು

09:08 PM Dec 16, 2023 | Team Udayavani |

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕಾಂಗ್ರೆಸ್‌ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ, “ಕ್ರೌಡ್‌ ಫ‌ಂಡಿಂಗ್‌’ ಕಾರ್ಯಕ್ರಮ ಆರಂಭಿಸಲು ಮುಂದಾಗಿದೆ. “ದೇಶಕ್ಕಾಗಿ ದೇಣಿಗೆ ನೀಡಿ’ ಧ್ಯೇಯ ವಾಕ್ಯದ ಅನ್ವಯ ಅದನ್ನು ಕೈಗೊಳ್ಳಲಾಗುತ್ತಿದೆ.

Advertisement

ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವವರು ಸೋಮವಾರ (ಡಿ.18)ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಅಜಯ್‌ ಮಕೇನ್‌ ಮತ್ತು ಕೆ.ಸಿ.ವೇಣುಗೋಪಾಲ್‌ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರು 1920-21ನೇ ಸಾಲಿನಲ್ಲಿ ಕೈಗೊಂಡಿದ್ದ “ತಿಲಕ್‌ ಸ್ವರಾಜ್‌ ಫ‌ಂಡ್‌’ ಅಭಿಯಾನದಿಂದ ಸ್ಫೂರ್ತಿ ಪಡೆದು ದೇಶಕ್ಕಾಗಿ ದೇಣಿಗೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು. ಇದರ ಜತೆಗೆ ಕಾಂಗ್ರೆಸ್‌ ಸ್ಥಾಪನೆಯಾಗಿ 138 ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ 138 ರೂ., 1,380 ರೂ., 13,800 ರೂ. ನೀಡುವ ಉದ್ದೇಶ ಹೊಂದಿದೆ ಎಂದು ಮಕೇನ್‌, ವೇಣುಗೋಪಾಲ್‌ ಹೇಳಿದ್ದಾರೆ.

ಪ್ರದೇಶ ಕಾಂಗ್ರಸ್‌ ಸಮಿತಿ ಪದಾಧಿಕಾರಿಗಳು, ಚುನಾಯಿತ ಸದಸ್ಯರು, ಜಿಲ್ಲಾ ಮುಖಂಡರು 1,380 ರೂ. ದೇಣಿಗೆ ನೀಡಬೇಕು ಎಂದು ಮಕೇನ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next