Advertisement

Election Duty; ಗ್ರಾಮಲೆಕ್ಕಿಗರಿಗೆ ಚುನಾವಣ ಕೆಲಸ; ಜನರಿಗೆ ಸಂಕಷ್ಟ

01:14 AM Apr 18, 2023 | Team Udayavani |

ಕುಂದಾಪುರ/ಮಂಗಳೂರು: ಗ್ರಾಮ ಕರಣಿಕರು ಅಥವಾ ಗ್ರಾಮ ಲೆಕ್ಕಿಗರನ್ನು ಚುನಾವಣ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಜನರಿಗೆ ತುರ್ತು ಕಂದಾಯ ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ. ಜನರು ಇದರಿಂದ ಚುನಾವಣೆ ಮುಗಿಯುವ ವರೆಗೆ ಸಂಕಷ್ಟ ಅನು ಭವಿಸು ವಂತಾಗಿದೆ. ಅತ್ಯಗತ್ಯ ಕಂದಾಯ ಸೇವೆಗಳನ್ನು ಒದಗಿಸಲು ವಾರಕ್ಕೆ ಎರಡು ದಿನ ವಾದರೂ ವಿ.ಎ.ಗಳು ಸಿಗಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

ಕುಂದಾಪುರ, ಬೈಂದೂರು ಭಾಗ ಮಾತ್ರ ವಲ್ಲದೆ, ದ.ಕ., ಉಡುಪಿ ಜಿಲ್ಲೆಯ ಇತರ ತಾಲೂಕು ಗಳಲ್ಲಿಯೂ ಗ್ರಾಮ ಲೆಕ್ಕಿಗರನ್ನು ಆಯಾಯ ಕ್ಷೇತ್ರಗಳ ಚುನಾವಣ ಕರ್ತವ್ಯಕ್ಕೆ ನಿಯೋ ಜಿಸ ಲಾಗಿದೆ. ಈ ಕಾರಣದಿಂದ 15 ದಿನ ಗಳಿಗೂ ಮಿಕ್ಕಿ ಬಹುತೇಕ ಕಡೆಗಳಲ್ಲಿ ಗ್ರಾಮ ಲೆಕ್ಕಿಗರ ಕಚೇರಿ ಯನ್ನು ಮುಚ್ಚಲಾಗಿದೆ.

ಈ ಬಗ್ಗೆ ಗ್ರಾಮಸ್ಥರು ಗ್ರಾಮ ಕರಣಿಕರಲ್ಲಿ ಕೇಳಿದರೆ ತಾಲೂಕು ಕಚೇರಿಗಳಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ ಎನ್ನುತ್ತಿದ್ದಾರೆ.

ಎಲ್ಲ ಕಡೆಗಳಲ್ಲೂ ವ್ಯವಸ್ಥೆ ಒಂದೇ ರೀತಿ ಇದೆ, ಮಂಗಳೂರಿನಲ್ಲೂ ಹಾಗೆಯೇ ಇರುತ್ತದೆ. ಚುನಾವಣ ಕೆಲಸ ಸಾಕಷ್ಟಿರುವುದರಿಂದ ಎಲ್ಲ ಗ್ರಾಮ ಲೆಕ್ಕಿಗರನ್ನು ಅದಕ್ಕಾಗಿ ನಿಯೋಜಿಸ ಲಾಗಿದೆ. ಈಗ ವೀಕ್ಷಕರೂ ಬಂದಿರುವುದರಿಂದ ಅವರಿಗೆ ಸಹಕಾರ ನೀಡುವುದಕ್ಕಿರುತ್ತದೆ. 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಮನೆ ಗಳಿಗೆ ತೆರಳಿ ಫಾರ್ಮ್ ಡಿ ಸಂಗ್ರಹ ಮಾಡುವ ಉಸ್ತುವಾರಿ ವಿ.ಎ.ಗಳಿಗೇ ಇರುತ್ತದೆ ಎನ್ನುತ್ತಾರೆ ಮಂಗಳೂರಿನ ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌.

2 ದಿನವಾದರೂ ಬರಲಿ
ಮಡಾಮಕ್ಕಿಯಲ್ಲಿ 15 ದಿನಗಳಿಂದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬರುತ್ತಿಲ್ಲ. ಕೇಳಿದರೆ ತಾಲೂಕು ಕೇಂದ್ರದಲ್ಲಿ ಚುನಾವಣ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ ಎನ್ನುತ್ತಾರೆ. ಚುನಾವಣೆ ಕೆಲಸ ಅಗತ್ಯ, ಅನಿವಾರ್ಯ ನಿಜ. ಆದರೆ ಗ್ರಾಮೀಣ ಭಾಗದಲ್ಲಿ ಜನರ ಕೆಲಸಗಳನ್ನು ಮಾಡದೆ ಬಾಕಿ ಇರಿಸುವುದು ಎಂದರೆ ಹೇಗೆ? ಬೇರೆ ಬೇರೆ ಊರುಗಳಿಂದ ಕಿ.ಮೀ.ಗಟ್ಟಲೆ ದೂರದಿಂದ ಕಚೇರಿ ಕೆಲಸಗಳಿಗೆ ಬರುವ ಗ್ರಾಮಸ್ಥರು ವಿ.ಎ. ಸಿಗದೆ, ಯಾವುದೇ ಕೆಲಸವೂ ಆಗದೇ ಬರಿಗೈಯಲ್ಲಿಯೇ ಮರಳಿ ಹೋಗುವಂತಾಗಿದೆ. ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಗ್ರಾಮ ಲೆಕ್ಕಿಗರು ಕರ್ತವ್ಯಕ್ಕೆ ಹಾಜರಾಗುವಂತೆ ಚುನಾವಣಾಧಿಕಾರಿಗಳು ವ್ಯವಸ್ಥೆ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲ ವಾಗಲಿದೆ ಎಂದು ಮಡಾಮಕ್ಕಿ ಗ್ರಾ.ಪಂ. ಸದಸ್ಯ ಪ್ರತಾಪ್‌ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಸಮಸ್ಯೆಗಳೇನು?
ಮುಖ್ಯವಾಗಿ ಶಾಲಾ – ಕಾಲೇಜುಗಳ ದಾಖಲಾತಿ ಆರಂಭ ಗೊಳ್ಳುವುದರಿಂದ ಮಕ್ಕಳಿಗೆ ಆದಾಯ, ಜಾತಿ ಪ್ರಮಾಣಪತ್ರ ಅಗತ್ಯವಾಗುತ್ತದೆ. ವಿದ್ಯಾರ್ಥಿವೇತನ ಪಡೆ ಯಲು ಕೂಡ ಇದು ಅಗತ್ಯ. ಆದಾಯ, ಜಾತಿ ಪ್ರಮಾಣಪತ್ರ ಸಕಾಲದಲ್ಲಿ ಸಿಗದೆ ತೊಂದರೆ ಯಾಗುತ್ತಿದೆ. ಜಾಗದ ಆರ್‌ಟಿಸಿಯೂ ಜನರಿಗೆ ಸಮಸ್ಯೆ ಯಾಗುತ್ತಿದೆ. ಮರಣ ಪ್ರಮಾಣ ಪತ್ರ ಸಿಗುವಲ್ಲಿಯೂ ವಿಳಂಬವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next