Advertisement

ಜನತಾ ಬಜಾರ್‌ಗೆ ಚುನಾವಣೆ ವಿಳಂಬ: ಪ್ರತಿಭಟನೆ

02:01 PM Oct 02, 2020 | Suhan S |

ಹಾಸನ: ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಭಿವೃದ್ಧಿ ಅಧಿಕಾರಿ ಸುನೀಲ್‌ ಬಿಜೆಪಿ ಏಜೆಂಟರಂತೆ ನಡೆದುಕೊಂಡು, ಸಹಕಾರ ಸಂಸ್ಥೆಗಳ ಚುನಾವಣೆ ನಡೆಯದಂತೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಪಕ್ಷದ ಮುಖಂಡ ಎಚ್‌.ಡಿ.ರೇವಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಹಾಸನ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಸ್ಥೆ (ಜನತಾ ಬಜಾರ್‌)ಗೆ ಅ.18ರಿಂದ 25ರೊಳಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರೂ ಆಗಿರುವ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸುನೀಲ್‌ ಅವರು, ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.

ಕ್ರಮಕ್ಕೆ ಮನವಿ: ಚುನಾವಣೆಗೆ ಸಂಬಂಧಿಸಿದ ಅಧಿ ಸೂಚನೆಯನ್ನು ಇನ್ನೂ ಹೊರಡಿಸಿಲ್ಲ. ದುರುದ್ದೇಶ ಪೂರ್ವಕವಾಗಿ ಚುನಾವಣೆ ಮುಂದೂಡಲುಸಹಕಾರಿಯಾಗುವಂತೆ ವರ್ತಿಸುತ್ತಿದ್ದಾರೆ. ಬಿಜೆಪಿಗೆ ಅನುಕೂಲವಾಗಲೆಂದು ಈ ರೀತಿ ವರ್ತಿಸುತ್ತಿದ್ದಾರೆ. ನ್ಯಾಯಾಲಯದ ನಿರ್ದೇಶನ ಮೀರಿ ಕೆಲಸ ಮಾಡುತ್ತಿರುವ ಸುನೀಲ್‌ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ರೇವಣ್ಣ ಆಗ್ರಹಿಸಿಸಿದರು.

ಕರ್ತವ್ಯ ಲೋಪ: ಜು.6ರಂದು ಹಾಸನ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿರುವ ಸುನೀಲ್‌, ಈ ವೇಳೆಗೆ ಸಂಸ್ಥೆಯ ಮತದಾರರ ಪಟ್ಟಿ ಸಿದ್ಧಗೊಳಿಸುವ ಕೆಲಸ ಕೈಗೊಂಡು ಮುಂದಿನ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿತ್ತು. ಆದರೆ, ಕಾಲದಲ್ಲಿಮಾಡದೇಉದ್ದೇಶಪೂರ್ವಕವಾಗಿಯೇ ಕರ್ತವ್ಯ ಲೋಪ ಎಸಗಿದ್ದಾರೆ. ಸುನೀಲ್‌ ಹಲವು ಸಹಕಾರ ಸಂಸ್ಥೆಗಳ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ಲೋಪ ಎಸಗಿದ್ದಾರೆ ಎಂದು ದೂರಿದರು.

ಸುನೀಲ್‌ ಅವರನ್ನು ಕೂಡಲೇ ಸೇವೆಯಿಂದ ಅಮಾನತ್‌ ಮಾಡಿ, ಕೋರ್ಟ್‌ ನಿರ್ದೇಶನದಂತೆ ನಿಗದಿಯಾಗಿರುವ ದಿನಾಂಕದಂದೇ ಜಿಲ್ಲಾ ಕೇಂದ್ರ ಸಗಟು ಮಾರಾಟ ಸಂಸ್ಥೆಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ ಸಲ್ಲಿಸಿದರು. ಶುಕ್ರವಾರ ಸಂಜೆ ಯೊಳಗೆ ಕ್ರಮ ಕೈಗೊಳ್ಳದಿದ್ದರೆ, ಶನಿವಾರ ಮತ್ತೆ ಪ್ರತಿಭಟಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದರು.

Advertisement

ಶಾಸಕ ಕೆ.ಎಸ್‌.ಲಿಂಗೇಶ್‌, ಮಾಜಿ ಶಾಸಕ ಬಿ.ವಿ. ಕರೀಗೌಡ,ಹಾಸನಎಪಿಎಂಸಿಅಧ್ಯಕ್ಷಮಂಜೇಗೌಡ, ನಿರ್ದೇಶಕ ಬಿದರಿಕೆರೆ ಜಯರಾಂ, ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌, ಎಚ್‌ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಆರ್‌.ಶಂಕರ್‌, ಸಯ್ಯದ್‌ ಅಕºರ್‌, ಎಚ್‌.ಎಸ್‌.ಅನಿಲ್‌ಕುಮಾರ್‌, ಮಾಜಿ ಉಪಾಧ್ಯಕ್ಷ ಚಂದ್ರೇಗೌಡ, ಜೆಡಿಎಸ್‌ ಮುಖಂಡರಾದ ಗಿರೀಗೌಡ, ಸಮೀರ್‌ ಅಹಮದ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next